ಯಗಚಿ ನೀರು ಹರಿಸಲು ಆಗ್ರಹಿಸಿ ಅಂಚೆ ಕಾರ್ಡ್ ಚಳವಳಿ
ಹಾರನಹಳ್ಳಿ: ಯಗಚಿ ನದಿ ಮೂಲಕ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಗ್ರಾಮಸ್ಥರು, ಈಭಾಗದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಸೂತ್ತಮುತ್ತಲ ರೈತ ಸಂಘದ ಮುಖಂಡರು ಹಾರನಹಳ್ಳಿ ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿ ಮುಖ್ಯ ಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಮಂಗಳವಾರ ಅಂಚೆ ಕಾರ್ಡ್ ಬರೆಯುವ ಮೂಲಕ ಶಾಂತಿಯುತ ಪ್ರತಿಭಟನೆ ಮುಂದುವಸಿದರು.
ಇಂದು ರೈತ ಸಮುದಾಯ ಕಷ್ಟದಲ್ಲದೆ ರೈತರಿಗೆ ನೀರು, ವಿದ್ಯುತ್ ಕೊಟ್ಟರೆ ಅಗತ್ಯವಾದ ಬೆಳೆಯನ್ನು ಬೇಳೆಯುವ ಸಾಮಥ್ಯ ರೈತರಲ್ಲಿದೆ ಸರ್ಕಾರಗಳು ರೈತರಿಗೆಅಶ್ವಾಸನೇ ನೀಡುವುದನ್ನು ಬಿಟ್ಟು ನಮ್ಮಭಾಗಕ್ಕೆ ನೀರು ಕೋಡುವತನಕ ಪ್ರತಿಭಟನೆ ಮುಂದುವರೆಯಲ್ಲಿದೆಂದು ರೈತ ಸಂಘ ಮುಖಂಡ ಕನ್ನಂಚನಹಳ್ಳಿ ಪ್ರಸನ್ನ ಕುಮಾರ್ ತಿಳಿಸಿದರು.
ಕೆರೆಗೆ ನೀರು ಹರಿಸಿ: ಯಗಚಿ ನೀರಿಗಾಗಿ 51 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ.
ಅರಸೀಕೆರೆ ತಾ. ಆಯ್ದ ಕೆಗಳಿಗೆ ಹರಿಸುವ ಯೋಜನೆ ಅನುಷ್ಠಾನಗೋಳಿಸಬೇಕೆಂದರು.
ನೂರಾರು ರೈತರು ಆಂಚೆ ಕಾರ್ಡಿನಲ್ಲಿ ಯಗಚಿ ನದಿಯಿಂದ ಕುಡಿಯಲು ನೀರು ಕೋಡಿ ಜನ ಜಾನುವಾರುಗಳನ್ನು ಉಳಿಸಿ ಎಂದು ಮಖ್ಯಮಂತ್ರಿಗಳಿಗೆ ನೀರಾವರಿ ಸಚಿವರಿಗೆ ಕಾವೇರಿ ನೀರಾವರಿ ನಿಗಮ ನೀರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಅಧಿಕಾರಿಗಳಿಗೆ ಎಚ್ಚರಿಕೆ: ನೀರಿನ ಹೋರಾಟಕ್ಕೆ ಪ್ರಾಣ ಕೊಡಲು ಸಿದ.್ದ ಆದರೂ ನೀರಾವರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರೈತರ ಆಕ್ರೋಶ ಕಟ್ಟೆಯೊಡೆಯುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೋಂಡು ನೀರಾವರಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಇಲ್ಲದಿದ್ದರೆ ಪರಿಣಾಮ ಬೇರೆಯೇ ಆಗಲಿದೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕರಿಂಸಾಬ್ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಓಂಕಾರಮೂರ್ತಿ, ಪೇಪರ್ ಮಂಜಣ್ಣ, ಗುರುಲಿಂಗಪ್ಪ ಮುರುಳಿ ಪ್ರತಿಭಟನೆಯಲ್ಲಿ ಇದ್ದರು.