ಶಾಸ್ತ್ರೀಯ, ಕನ್ನಡ ಭಾವಗೀತೆಗಳ ಸ್ಪರ್ಧೆ
ಅರಕಲಗೂಡು: ವಿದ್ವಾನ್ ಆರ್.ಕೆ. ಪದ್ಮನಾಭ ಅವರ ಅಭಿಮಾನಿಗಳ ಬಳಗದ ವತಿಯಿಂದ 68ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಂತರ ಜಿಲ್ಲಾ ಮಟ್ಟದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಕನ್ನಡ ಭಾವಗೀತೆಗಳ ಸ್ಪರ್ಧೆಯನ್ನು ಆಗಸ್ಟ್ 17ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿದೆ. 25 ವರ್ಷದೊಳಗಿನ ಗಾಯಕರಿಗೆ ಮಾತ್ರ ಅವಕಾಶವಿದ್ದು ಆಸಕ್ತರು ತಮ್ಮ ಹೆಸರುಗಳನ್ನು ಆ. 8 ರೊಳಗಾಗಿ ನೊಂದಾಯಿಸಿಕೊಳ್ಳುಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9448256682 ಮತ್ತು 9743654661 ಸಂಪರ್ಕಿಸಿ.
ಕಾನೂನು ಸಾಕ್ಷರತಾ ಜಾಥಾ ಆ. 9ರಿಂದ
ಅರಕಲಗೂಡು: ತಾಲೂಕಿನಲ್ಲಿ ಆ. 9ರಿಂದ 11ರವರೆಗೆ ಕಾನೂನು ಸಾಕ್ಷರಥಾ ಜಾಥಾ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ತಿಳಿಸಿದ್ದಾರೆ. ನ್ಯಾಯಾಲಯದ ಕೊಠಡಿಯಲ್ಲಿ ನಡೆದ ವಿವಿಧ ಇಲಾಖಾ ಅಧಿಕಾರಿಗಳು ಮತ್ತು ವಕೀಲರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಜಾಥಾ ಕಾರ್ಯಕ್ರಮದ ಬಗೆಗೆ ಚರ್ಚಿಸಿದ ನಂತರ ವಿವಿರ ನೀಡಿದ ದೌರ್ಜನ್ಯ ಮತ್ತು ಕಾನೂನಿಗೆ ಸಂಬಂಧಿಸಿದಂತೆ ಕನಿಷ್ಠ ಕಾನೂನಿನ ತಿಳಿವಳಿಕೆ ಪ್ರತಿ ನಾಗರಿಕರಲ್ಲೂ ಅವಶ್ಯವಿದ್ದು ಅದರ ತಿಳಿವಳಿಕೆ ನೀಡಲು ಈ ಕಾನೂನು ಸಾಕ್ಷರತಾ ಜಾಥಾ ಸಹಕಾರಿಯಾಗಲಿದೆ ಎಂದರು.
ಉದ್ಘಾಟನೆ: ಜಾಥಾವನ್ನು ಜಿಲ್ಲಾ ಸತ್ರ ನ್ಯಾಯಾಧೀಶ ಆರ್.ಜೆ.ಸತೀಶ್ ಸಿಂಗ್ ಅವರು ಶಿಕ್ಷಕರ ಭವನದಲ್ಲಿ ಆಯೋಜಿಸರುವ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ಮಾಡುವರು. ಈ ವೇಳೆ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಬಿ.ಕೆ.ಗಿರೀಶ್, ಕಾರ್ಯದರ್ಶಿ ಅಧಿಕ ಸಿವಿಲ್ ನ್ಯಾಯಾಧೀಶ ಕುರಣಿ ಕಾಂತ್, ವಕೀಲರ ಸಂಘದ ಅಧ್ಯಕ್ಷ ಎಸ್.ಆರ್.ಚಂದ್ರಪ್ಪ, ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್, ಸಹಾಯಕ ಸರ್ಕಾರಿ ವಕೀಲರಾದ ರಂಜನ್ ರಾವ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಾಬು ಇತರರು ಇದ್ದರು.
ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ
ಅರಕಲಗೂಡು: ರೋಟರಿ ಕ್ಲಬ್ ಅರಕಲಗೂಡು ಮಿಡ್ ಟೌನ್ನ ಪದಗ್ರಹಣ ಕಾರ್ಯಕ್ರಮ ಗೊರೂರಿನ ಎವಿಎನ್ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನೆರವೇರಿತು. ರೋಟರಿ ಮಾಜಿ ರಾಜ್ಯಪಾಲ ಎಂಕೆ.ಗೋವರ್ಧನ್ ಕುಮಾರ್ ಅವರು ಪದಗ್ರಹಣ ನೆರವೇರಿಸಿ ಮಾತನಾಡಿ, ರೋಟರಿ ಸಂಸ್ಥೆ ಅಂತರ ರಾಷ್ಟೀಯ ಮಟ್ಟದಲ್ಲಿ ತನ್ನ ಸೇವಾ ಕಾರ್ಯದಿಂದ ಖ್ಯಾತಿ ಹೊಂದಿದ್ದು, ಅರಕಲಗೂಡು ಮಿಡ್ಟೌನ್ ಸಹ ಉತ್ತಮ ಸಾಧನೆ ತೋರಿದೆ ಎಂದರು. ಉತ್ತಮ ಉದ್ದೇಶಗಳಿಗಾಗಿ ಕೆಲಸ ಮಾಡುವ ಸಂಸ್ಥೆಗಳನ್ನು ಉತ್ತಮ ರೀತಿಯಲ್ಲಿ ಪೋಷಿಸುವುದೂ ಸಮಾಜದ ಹೊಣೆಯಾಗಿದೆ. ಪ್ರತಿ ಸದಸ್ಯರೂ ಉತ್ತಮವಾದ ಕೆಲಸಗಳನ್ನು ನಿರ್ವಹಿಸುವಲ್ಲಿ ಕೈಜೋಡಿಸಬೇಕೆಂದರು. ಕಾರ್ಯಕ್ರಮದಲ್ಲಿ ರೋಟರಿ ಡಾ.ಎ.ಎಸ್. ಕಿಶೋರ್, ರೋಟರಿ ರವಿಶಂಕರ್,ರೋಟರಿ ನಿಕಟ ಪೂರ್ವ ಅಧ್ಯಕ್ಷ ಕೆ.ಟಿ ರಂಗಸ್ವಾಮಿ,ಹಾಲಿ ಅಧ್ಯಕ್ಷರಾದ ಚನ್ನಕೇಶವೇಗೌಡ, ನಿಕಟಪೂರ್ವ ಕಾರ್ಯದರ್ಶಿ ಪಿ. ಸಂತೋಷ್, ಹಾಲಿ ಕಾರ್ಯದರ್ಶಿ ಕೆ.ಆರ್. ವಿಜಯಕುಮಾರ್ ವೇದಿಕೆಯಲ್ಲಿದ್ದರು.
ನೋಟ್ಪುಸ್ತಕ ವಿತರಣೆ
ಮೈಸೂರು: ಶ್ರೀ ವಿನಾಯಕ ಯುವಕರ ಬಳಗದ ವತಿಯಿಂದ ತಾಲೂಕಿನ ಕಲ್ಲೂರು ನಾಗನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಕೆ. ನಾಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿದ್ದ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ.ಹರೀಶ್ಗೌಡ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಗಾಗಿ ಮತ್ತು ಮಕ್ಕಳ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸುವ ಇಂತಹ ಕಾರ್ಯಕ್ರಮದ ಅವಶ್ಯಕತೆ ಇದೆ ಎಂದರು. ಆನಂದೂರು ಗ್ರಾಪಂ ಉಪಾಧ್ಯಕ್ಷ ಎನ್.ಬಿ.ಮಂಜು, ಸಿಆರ್ಪಿ ಎಸ್.ಜೆ.ಗಣೇಶ್, ಎಂಜಿನಿಯರ್ ರವೀಶ್, ಗಿರೀಶ್, ಯಮಾಜನ್ ಮಾಯಿಗೌಡ, ಬಳಗದ ಅಧ್ಯಕ್ಷ ಪುಟ್ಟರಾಜು, ಉಪಾಧ್ಯಕ್ಷ ಅನುಕುಮಾರ್ಗೌಡ, ಕಾರ್ಯದರ್ಶಿ ಶೇಖರ್, ಖಜಾಂಚಿ ಸಿ.ಕೆ. ರವಿಕುಮಾರ್, ಮುಖ್ಯಶಿಕ್ಷಕ ಎಸ್.ಪಿ. ರಾಮಚಂದ್ರಪ್ಪ, ಶಿಕ್ಷಕಿ ಎಸ್.ಜಿ. ಗೀತಾಲಕ್ಷ್ಮೀ ಇದ್ದರು.