ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶೌಚಾಲಯ: ಗ್ರಾಮೀಣ ಜನರಿಗೆ ಅರಿವು ಮೂಡಿಸಿ

Srinivasa Murthy VN
Updated On : 29 Jul 2014, 10:53 am

ಮಂಡ್ಯ: ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮೀಣ ಜನರನ್ನು ಪ್ರೇರೇಪಿಸಬೇಕು ಎಂದು ಸಾಕ್ಷರತ ಪ್ರೇರಕರಿಗೆ ತಾಲೂಕು ಪಂಚಾಯ್ತಿ ಇಒ ಬಸವರಾಜು ಕರೆ ನೀಡಿದರು.
ತಾಲೂಕು ಲೋಕಶಿಕ್ಷಣ ಸಮಿತಿ ವತಿಯಿಂದ ನಗರದ ಪೊಲೀಸ್ ಕಾಲೊನಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಕೇಂದ್ರದ ಪ್ರೇರಕರ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅಕ್ಷರ ಕಲಿಕೆ ಹಾಗೂ ಹೊಲಿಗೆ ತರಬೇತಿ ಜೊತೆ ಗ್ರಾಮೀಣರಿಗೆ ಶೌಚಾಲಯ ನಿರ್ಮಾಣ ಮಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಲು ಅರಿವು ಮೂಡಿಸಬೇಕು. ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಲು ಗ್ರಾಮೀಣರು ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು.
ಬಲವರ್ಧನೆಗೆ ಸಹಾಯಕ: ಸಾಕ್ಷರ ಭಾರತ ಕಾರ್ಯಕ್ರಮವು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಗ್ರಾಮೀಣ ಪ್ರದೇಶ ಹಾಗೂ ಹಿಂದುಳಿದ ಮಹಿಳೆಯರಿಗೆ ಇದರಿಂದ ಶೈಕ್ಷಣಕ ಹಾಗೂ ಆರ್ಥಿಕವಾಗಿ ಬಲವರ್ಧನೆಗೊಳ್ಳಲು ಸಹಾಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಕ್ಷರ ಭಾರತ್ನ ಜಿಲ್ಲಾ ಸಂಯೋಜಕ ಯೋಗ, ತಾಲೂಕು ಸಂಯೋಜಕ ಕಾಂತರಾಜು, ರಾಜು, ಶೋಭಾರಾಣಿ, ಪದ್ಮಾಕ್ಷಿ, ಪಿಡಿಒ ರಾಮಲಿಂಗಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement