ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇವಾಲಯ ವೀಕ್ಷಣೆಗೆ ಮುಕ್ತ ಅವಕಾಶ

Srinivasa Murthy VN
Updated On : 1 Jun 2014, 11:45 am

ಬೇಲೂರು: ವಿಶ್ವ  ಪ್ರಸಿದ್ಧ ಬೇಲೂರು-ಹಳೇಬೀಡಿನ ದೇವಾಲಯಗಳ  ವಿಕ್ಷಣೆಗೆ ಬರುವ ದೇಶ-ವಿದೇಶದ ಪ್ರವಾಸಿಗರಿಗೆ  ಮುಕ್ತ ಅವಕಾಶ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ನೀಡಲು ಅಧಿಕಾರಿಗಳು  ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಾನಾ ಇಲಾಖೆ ಕಾರ್ಯ ವೈಖರಿಗಳ ಪರಿಶೀಲನೆ ಹಾಗೂ ವಿಶೇಷವಾಗಿ ಬೇಲೂರು ಹಳೇಬೀಡು ದೇವಾಲಯಗಳಿಗೆ ಮೂಲ ಸೌಲಭ್ಯ ನೀಡುವಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಬೇಲೂರು ಮತ್ತು ಹಳೇಬೀಡು ದೇವಾಲಯಗಳಿಗೆ ಬರುವ ಪ್ರವಾಸಿಗರು ಕೇವಲ ದೇವಾಲಯ ಮಾತ್ರ ವಿಕ್ಷಣೆ ಮಾಡುವದಿಲ್ಲ, ಅವರು ಮೂಲಸೌಲಭ್ಯಗಳಾದ ರಸ್ತೆ, ಶೌಚಾಲಯ,ಕುಡಿಯುವ ನೀರು ಹೀಗೆ ಹಲವು ಬಗೆಯಲ್ಲಿ ವಿಕ್ಷಣೆ ಮಾಡುತ್ತಾರೆ, ಈ ದಿಸೆಯಲ್ಲಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದರು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಈ ವರ್ಷ 10 ಲಕ್ಷ  ರು. ವಿಶೇಷ ಅನುದಾನ ಬಂದಿದ್ದು, ತಾಲ್ಲೂಕು ಮಟ್ಟದ ಅಧಿಕಾರಿಗಳು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಹೇಳಿದರು. ಹೊಯ್ಸಳ ಮಹೋತ್ಸವ ಕಾರ್ಯಕ್ರಮಕ್ಕೆ ಸದ್ಯ # 40 ಲಕ್ಷ ರು ಇದ್ದು, ಇನ್ನು 40 ಲಕ್ಷ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಹೊಯ್ಸಳ ಮಹೋತ್ಸವದಿಂದ  ಸಾಂಸ್ಕೃತಿಕ ವೈಭವ ಹೆಚ್ಚಿಸುವ ದಿಸೆಯಲ್ಲಿ ಜಿಲ್ಲಾ ಉಸ್ತವಾರಿ ಮಂತ್ರಿಗಳಲ್ಲಿ ಮಾತನಾಡಲಾಗುತ್ತದೆ ಎಂದರು. ಹಳೇಬೀಡು ದೇವಾಲಯ ಪಾರ್ಕಿಂಗ್ ಸ್ಥಳ ವಿವಾದದಿಂದ ಕೂಡಿದೆ ಎಂದು ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಖುದ್ದು ಪರಿಶೀಲನೆ ನಡೆಸಿ ಸ್ಥಳೀಯ ಸಮಸ್ಯೆ ಪರಿಹಾರ ಕ್ರಮ ಜರಿಗಿಸಲಾಗುತ್ತದೆ. ಮೂಲಸೌಲಭ್ಯ ನೀಡದೆ ಸುಂಕ ವಸೂಲಿ ಮಾಡುವದು ಅಕ್ಷಮ್ಯವೆಂದು ತಾಪಂ ಇಒ ಗಮನ ಹರಿಸುವಂತೆ ಮಾಹಿತಿ ನೀಡಿದರು. ತಹಸೀಲ್ದಾರ್ ಚೌಡಯ್ಯ, ಇಒ ಬಸವರಾಜು ಐಯಣ್ಣನವರ್, ಡಾ. ಮಧುಕೇಶ್ವರ್, ಮುಖ್ಯಾಧಿಕಾರಿ ಬವಸರಾಜು ಇದ್ದರು.

ಭಾರೀ ಮಳೆ: ಬೆಳೆ, ಮನೆ ಹಾನಿ
ಬೇಲೂರು: ತಾಲೂಕಿನಲ್ಲಿ ಕಳೆದ ನಾಲ್ಕು ದಿನದಿಂದ ಭಾರೀ ಮಳೆಯಿಂದ ಮನೆಗಳು, ಬೆಳೆಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಈ ಬಗ್ಗೆ ತಹಸೀಲ್ದಾರ್ ಕನಿಷ್ಠ ಸೌಜನ್ಯಕ್ಕೂ  ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ ಎಂದು ತಾಪಂ ಸದಸ್ಯ ಬಿ.ಎಂ. ರವಿಕುಮಾರ್ ಹೇಳಿದರು. ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಹುತೇಕ ಮನೆಗಳ ಹಂಚುಗಳು  ಬಿರುಗಾಳಿಗೆ ಹಾರಿ ಮನೆ ಓಳಗೆ ನೀರು ನುಗ್ಗಿ ಆಹಾರ ದಾನ್ಯಗಳು ಹಾಳಾಗಿವೆ, ಇನ್ನು ಮರಗಳು  ಮನೆಗಳ ಮೇಲೆ ಬಿದ್ದಿವೆ, ಫಸಲಿಗೆ  ಬಂದ ಮೆಣಸಿನಗಿಡ, ಶುಂಠಿ ಇನ್ನಿತರ ಬೆಳೆಗಳು  ಭಾರೀ ಮಳೆಗಾಳಿಗೆ ನೆಲ ಕಚ್ಚಿವೆ ಎಂದ ಅವರು ಈ ಬಗ್ಗೆ ತಹಸೀಲ್ದಾರ್ ಸ್ಥಳಕ್ಕೆ ಬೇಟಿ ನೀಡದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎಂದರು. ಸದಸ್ಯ ಪೂರ್ಣಿಮಾಕುಮಾರ್ ಮಾತನಾಡಿ, ಸಿದ್ದಪುರ ತಾಪಂ ಕ್ಷೇತ್ರದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಜಿಪಂ ಆಡಳಿತ ನಮಗೆ ಹೆಚ್ಚು ಗಮನ ನೀಡಬೇಕು ಎಂದರು. ಸದಸ್ಯ ನಳಿನಾ ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿ ನಿಯಲಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿಲ್ಲ. ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಕೂಡ ಪ್ರಯೋಜವಾಗಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement