ಗೋಮಾಂಸ ಅಕ್ರಮ ಮಾರಾಟ ಪುರಸಭೆ ಅಧಿಕಾರಿಗಳ ದಾಳಿ
ಕನ್ನಡಪ್ರಭ ವಾರ್ತೆ, ಬೇಲೂರು. ಜೂ 4
ಪಟ್ಟಣದಲ್ಲಿ ಗೋಮಾಂಸವನ್ನು ಆಕ್ರಮವಾಗಿ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ದಾಳಿ ನಡೆಸಿದರು. ಕಳೆದ ಮೂರು ದಿನದ ಹಿಂದೆ ಪುರಿಭಟ್ಟಿ ಬೀದಿಯ ಪುಟ್ಟ ಮಗುವಿಗೆ ನಾಯಿ ಕಡಿದು ತೀವ್ರ ಗಾಯಗೊಂಡ ಹಿನ್ನಲೆಯಲ್ಲಿ ನಾಗರಿಕರು ಪುರಸಭಾ ವ್ಯಾಪ್ತಿಯಲ್ಲಿ ನಾಯಿ ಹಾವಳಿಗೆ ಅಕ್ರಮವಾಗಿ ನಡೆಯುತ್ತಿರುವ ಗೋ ಮಾಂಸ ದಂಧೆ ಕಾರಣ ಎಂಬ ಶಂಕೆ ವ್ಯಕ್ತಪಡಿಸಿದ್ದರು. ಪುರಸಭಾ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಪುರಿಭಟ್ಟಿಬೀದಿ ಹಾಗೂ ಮುಸ್ತಾಫ ಬೀದಿಯ ಸ್ಥಳ ಪರಿಶೀಲನೆಯನ್ನು ಮಂಗಳವಾರ ನಡೆಸಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಬಿ.ಗಿರೀಶ್ ಮಾತನಾಡಿ, ಪಟ್ಟಣದಲ್ಲಿ ನಾಯಿಗಳ ಹಾವಳಿ ಹೇರಳವಾಗಿದ್ದು ಆಕ್ರಮವಾಗಿ ಮಾಂಸ ಮಾರಾಟದ ಹಿನ್ನಲೆಯಲ್ಲಿ ಇಂತಹ ಅವಘಡಕ್ಕೆ ಕಾರಣವಾಗಿದೆ ಎಂದು ದೂರು ನೀಡಿದ ಹಿನ್ನಲೆಯಲ್ಲಿ ಖುದ್ದು ಬೇಟಿ ನೀಡಿದ್ದು, ಗೋಮಾಂಸ ಮಾರಾಟ ನಡೆಯುತ್ತಿರುವುದು ಖಚಿತವಾಗಿದೆ. ತಕ್ಷಣ ಮಾರಾಟ ರದ್ದು ಮಾಡುವಂತೆ ಸೂಚಿಸನಾಗಿದೆ, ಅಲ್ಲದೆ 8 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ಬಸವರಾಜು ಮಾತನಾಡಿ, ಗೋಮಾಂಸ ನಡೆಸುತ್ತಿರುವವರು ಪುರಸಭೆಯಿಂದ ಯಾವ ಪರವಾನಿಗೆ ಪಡೆದಿಲ್ಲ. ಈ ಕಾರಣದಿಂದ ಎಲ್ಲರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಮಾಂಸ ಮಾರಾಟ ಮಾಡುವವರು ಪಟ್ಟಣದ ಸ್ವಚ್ಚತೆ ದೃಷ್ಟಿಯಿಂದ ಹೊರಗೆಡೆ ವ್ಯಾಪಾರ ಮಾಡಲು ಅನುವು ಮಾಡಲಾಗುತ್ತದೆ ಎಂದು ತಿಳಿಸಿದರು. ಪುರಸಭೆ ಆರೋಗ್ಯ ಅಧಿಕಾರಿ ವೆಂಕಟೇಶ್, ಸದಸ್ಯ ಅಕ್ರಮ್ ಪಾಷ, ಕರವೇ ಅಧ್ಯಕ್ಷ ಚಂದ್ರಶೇಖರ್ ಇನ್ನು ಮುಂತಾದವರು ಹಾಜರಿದ್ದರು.