ಪೆಂಡಾಲ್ ಗಣಪತಿ ಉತ್ಸವಕ್ಕೆ 17ಲಕ್ಷ ವೆಚ್ಚ
ಹಾಸನ: ನಗರದ ಹಳೇ ಬಸ್ ನಿಲ್ದಾಣದಲ್ಲಿ ಇರುವ ಗಣಪತಿ ಪೆಂಡಾಲ್‌ನಲ್ಲಿ ಶ್ರೀಗಣಪತಿ ಸೇವಾ ಸಂಸ್ಥೆಯ ವತಿಯಿಂದ 2013ನೇ ಸಾಲಿನಲ್ಲಿ ನಡೆಸಿದ ಉತ್ಸವಕ್ಕೆ ರು. 16,97,932 ವೆಚ್ಚವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಚ್.ನಾಗರಾಜ್ ಹಾಗೂ ಕಾರ್ಯದರ್ಶಿ ಚನ್ನವೀರಪ್ಪ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 3,97,809 ರು., ಮಧ್ಯಾಹ್ನದ ಪ್ರಸಾದದ ಸೇವಾರ್ಥದಾರರಿಂದ 1,91,852ರು., ಮೆರವಣಿಗೆ ಕಾರ್ಯಕ್ರಮಗಳಿಗೆ ಸೇವಾರ್ಥದಾರರಿಂದ 21,002 ರು., ಅನ್ನ ಸಂತರ್ಪಣೆಗೆ 28,633ರು. ಇತರೆ ಮೂಲಗಳಿಂದ 9,108ರು. ಜಮೆಯಾಗಿದೆ.
ಅಲ್ಲದೆ ಹುಂಡಿಯಲ್ಲಿ 2,96,188, ಆರ್ಚನೆ ಕೂಪನ್‌ಗಳಿಂದ 1,13,700 ಸಂಗ್ರಹವಾಗಿದೆ. ಹೋಮದ ಸೇವಾರ್ಥದಿಂದ 54,964 ಬಂದಿದೆ. ಉಳಿದ ಪದಾರ್ಥಗಳಿಂದ 2,520 ಹಣ ಜಮೆಯಾಗಿದೆ ಎಂದು ಹೇಳಿದ್ದಾರೆ. ಸಂಸ್ಥೆಯಿಂದ ಇತರೆ ಕಾರ್ಯಗಳಿಗೆ 5,82,156 ಖರ್ಚು ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾವಿದರಿಗೆ 4.41 ಲಕ್ಷ ರು, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರು. 55,883, ಮೆರವಣಿಗೆ ಕಲಾವಿದರಿಗೆ ರು. 2,06 ಲಕ್ಷ, ಮೆರವಣಿಗೆ ಮತ್ತು ತೆಪ್ಪೋತ್ಸವಕ್ಕೆ ರು. 48,973, ಪೆಂಡಾಲಿನ ಆಲಂಕಾರ ವಿಗ್ರಹ ಮಾಡುವುದೆಕ್ಕೆ ಹಾಗೂ ಫ್ಲೆಕ್ಸ್ ಮತ್ತು ಮ್ಯಾಟ್‌ಗಳಿಗೆ ರು. 1.75 ಲಕ್ಷ, ವೆಚ್ಚವಾಗಿದೆ. ವಿದ್ಯುತ್ ತೀಪಾಲಂಕಾರ, ಜನರೇಟರ್, ಡೀಸೆಲ್ ಸೇರಿ ರು. 1,08,962 ಖರ್ಚಾಗಿದೆ. ದಿನನಿತ್ಯ ಹೂವು ಹಾರ, ಮೆರವಣಿಗೆ ರಥದ ಆಲಂಕಾರಕ್ಕೆ ರು. 1.70 ಲಕ್ಷ ಖರ್ಚಾಗಿದೆ. ಧ್ವನಿವರ್ಧಕ ಬಾಡಿಗೆ ಎಂದು ರು. 40,250 ಪುರೋಹಿತರ ಸಂಭಾವನೆ ಎಂದು 73 ಸಾವಿರ, ಹೋಮದ ಪುರೋಹಿತರಿಗೆ 21 ಸಾವಿರ, ಆಳುಗಳ ಕೂಲಿಗ ರು. 49,930, ಆನ್ನ ಸಂತರ್ಪಣೆ ಅಡಿಗೆ ಮಾಡಿದವರಿಗೆ ರು. 45 ಸಾವಿರ ಸಂಭಾವನೆ, ದಿನನಿತ್ಯ ಅಡಿಗೆ, ಪ್ರಸಾದ ತಯಾರಿಸಿದವರಿಗೆ ರು. 80,500, ದಿನನಿತ್ಯ ಪ್ರಸಾದ ಊಟಕ್ಕೆ ದಿನಸಿ ಸಾಮಗ್ರಿಗಳನ್ನು ತರಿಸಿದ್ದಕ್ಕೆ ರು. 67,388, ಆನ್ನಸಂತರ್ಪಣೆಗೆ ದಿನಸಿ ಪದಾರ್ಥಗಳನ್ನು ತರಿಸಿದ್ದಕ್ಕೆ ರು. 46,895, ದಿನನಿತ್ಯ ಶ್ರೀಯವರಿಗೆ ಪೂಜೆ ಖರ್ಚು (ಕಲ್ಲು ಸಕ್ಕರೆ ಸೇರಿ) ರು. 24,481 ಮುದ್ರಣ ಕಾರ್ಯಗಳಿಗೆ ರು. 36,075, ಟೈಪಿಂಗ್, ಜೆರಾಕ್ಸ್, ಆಟೊ ಬಾಡಿಗೆ ಇತ್ಯಾದಿ ಎಂದು ರು. 7,495 ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ.
ಸಾಧಕ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ
ಹಾಸನ : ಶಿಕ್ಷಣ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾ ಛಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ ನೀಡುವ ಯೋಜನೆಯೊಂದನ್ನು ಭಾರತ ಸರ್ಕಾರ ಜಾರಿಗೆ ತಂದಿದೆ. ಈ ಮೇಲ್ಕಂಡ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 4 ರಿಂದ 15 ವರ್ಷದೊಳಗಿನ ಅಂದರೆ 1999ರ ಆ.1 ಹಾಗೂ ನಂತರ ಹುಟ್ಟಿದ ಮಕ್ಕಳನ್ನು 2014ನೇ ವರ್ಷಕ್ಕೆ ಆಯ್ಕೆ ಮಾಡಲಾಗುವುದು. ಈ ಪ್ರಶಸ್ತಿಯು ಒಂದು ಚಿನ್ನದ ಪದಕ, ರು. 20,000 ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ 35 ಬೆಳ್ಳಿ ಪದಕ(ಪ್ರತಿ ರಾಜ್ಯ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ) ರು. 10,000 ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಹಾಗೂ ಜಿಲ್ಲಾ ಆಯ್ಕೆ ಸಮಿತಿಯಿಂದ ಆಯ್ಕೆಯಾದ 8 ಮಕ್ಕಳನ್ನು ಜಿಲ್ಲಾ ಮಟ್ಟದಲ್ಲಿ ನವೆಂಬರ್ 14ರಂದು ಆಚರಿಸುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಶಿಕ್ಷಣ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಅಸಾಧಾರಣವೆಂದು ಗುರುತಿಸಲು ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು ಅಥವಾ ಸಂಬಂಧಪಟ್ಟ ಕ್ಷೇತ್ರ ತಜ್ಞರಿಂದ ಪರಿಕ್ಷೀಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. 2014ನೇ ವರ್ಷದ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲ್ಲಿಂದ ಪಡೆದು, ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 12ರ ಒಳಗೆ ತಲುಪುವಂತೆ ಉಪನಿರ್ದೇಶಕರು,. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆ.ಆರ್.ಪುರಂ, 9ನೇ ಅಡ್ಡ ರಸ್ತೆ, ಹಾಸನ ಇಲ್ಲಿಗೆ ಸಲ್ಲಿಸುವಂತೆ ಕೋರಲಾಗಿದೆ. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
ಹಾಸನ: ರಾಜ್ಯ ಸರ್ಕಾರವು 2013-14ನೇ ಸಾಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಜಿಲ್ಲೆಯ ಸಂಸ್ಥೆಯ ವಿಭಾಗದಿಂದ ಪೊನ್ಮ್‌ಣಿ ಲಲಿತ, ಸಾಯಿರಾಂ ಮಹಿಳಾ ಸಮಾಜ, ಹಾಸನ ಹಾಗೂ ವೈಯಕ್ತಿಕ ವಿಭಾಗದಿಂದ ರಶ್ಮಿ, ಪೃಥ್ವಿ ಮಹಿಳಾ ವಿವಿಧೋದ್ದೇಶ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಚನ್ನರಾಯಪಟ್ಟಣ ಇವರು ಆಯ್ಕೆಯಾಗಿ ಪ್ರಶಸ್ತಿ ಪಡೆದಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚಿದಾನಂದ ತಿಳಿಸಿದ್ದಾರೆ.