ಕೊಡ್ಲಿಪೇಟೆ: ಕಾಡಾನೆ ದಾಳಿ, ಅಪಾರ ಕೃಷಿ ಹಾನಿ
ಶನಿವಾರಸಂತೆ: ಕೊಡ್ಲಿಪೇಟೆ ವ್ಯಾಪ್ತಿಯ ಕ್ಯಾತೆ, ಕಲ್ಲಾರೆ ಸುತ್ತಮುತ್ತ ಕಾಡಾನೆಗಳು ರೈತರ ಕೃಷಿ ಕ್ಷೇತ್ರದ ಬೆಳೆಗಳ ಮೆಲೆ ದಾಳಿ ಮಾಡಿದ್ದು, ಅಪಾರ ಹಾನಿ ಸಂಭವಿಸಿದೆ. ಕಾಫಿ, ಬಾಳೆ ಹಾಗೂ ಮುಂತಾದ ಬೆಳೆಗಳನ್ನು ತುಳಿದು ನಾಶಪಡಿಸಿದ್ದು, ಸಾವಿರಾರು ರು.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಟ್ಟೆಪುರ ಮೀಸಲು ಅರಣ್ಯದಿಂದ ಕಾಡಾನೆಗಳು ಹಾಸನ ಭಾಗದಿಂದ ಇಲ್ಲಿಗೆ ಬರುತ್ತಿದ್ದು, ಹೆಚ್ಚಿನ ಅರಣ್ಯಪ್ರದೇಶ ಇಲ್ಲಿ ಇಲ್ಲದ ಕಾರಣ ಕಾಡಾನೆಗಳು ನಿರಂತರವಾಗಿ ಇಲ್ಲಿನ ರೈತರ ತೋಟಗಳತ್ತ ದಾಳಿ ಮಾಡುತ್ತಿವೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ರಸ್ತೆಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಇಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಬೇರೆಡೆಗೆ ಓಡಿಸಬೇಕು. ಅಥವಾ ಹಿಡಿದು ಬೇರೆಡೆಗೆ ಬಿಡಬೇಕು, ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕ್ಯಾತೆ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.