ಮೊಬೈಲ್ ಮೂಲಕ ಗುರುತು ಚೀಟಿ ಸಂಖ್ಯೆ ತಿಳಿಸಲು ಮನವಿ
ಅರಸೀಕೆರೆ: ರಾಜ್ಯ ಸರ್ಕಾರದ ಆದೇಶದನ್ವಯ ತಾಲೂಕಿನ ಎಲ್ಲಾ ಅಂತ್ಯೋದಯ ಮತ್ತು ಬಿ.ಪಿ.ಎಲ್. ಪಡಿತರದಾರರು ತಮ್ಮ ಕುಟುಂಬದ ಮೊಬೈಲ್‌ನಿಂದ ಕುಟುಂಬದ ಮುಖ್ಯಸ್ಥರು ಹಾಗೂ ಕಾರ್ಡಿನಲ್ಲಿರುವ ಇತರೆ ವಯಸ್ಕ ಸದಸ್ಯರ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಗಳನ್ನು 92123 57123 ಸಂಖ್ಯೆಗೆ ಎಸ್.ಎಂ.ಎಸ್. ಮಾಡಲು ತಾಲೂಕು ತಹಸೀಲ್ದಾರ್ ನಟರಾಜ್ ಮನವಿ ಮಾಡಿದ್ದಾರೆ.
ಪಡಿತರದಾರರು ಎಸ್.ಎಂ.ಎಸ್. ಮಾಡುವ ವಿಧಾನ ಉದಾಹರಣೆ- - RCMOB - ARS14154919 ಅಥವಾ ARSR00104187 ಅಥವಾ ARSU00100504 ಎಂದು ಟೈಪ್ ಮಾಡಿ 92123 57123 ಸಂಖ್ಯೆಗೆ ಎಸ್.ಎಂ.ಎಸ್. ಮಾಡಬೇಕಾಗಿದೆ. ನಂತರ ಉದಾಹರಣೆಗೆ RCEPIC - YYP3280435 ಕುಟುಂಬದ ಯಜಮಾನ ಮತ್ತು ಎಲ್ಲಾ ವಯಸ್ಕ ಸದಸ್ಯರ ಮತದಾರರ EPIಈಸಂಖ್ಯೆಯನ್ನು 92123 57123 ಸಂಖ್ಯೆಗೆ SMS ಮೂಲಕ ಕಳುಹಿಸಬೇಕು. ತದನಂತರ RCUID - 1234 56789123 ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡುಗಳ ಸಂಖ್ಯೆಯನ್ನು 92123 57123 ಸಂಖ್ಯೆಗೆ SMS ಮೂಲಕ ಕಳುಹಿಸಬೇಕೆಂದು ತಿಳಿಸಿದ್ದಾರೆ.
ಯಾವುದೇ ಕುಟುಂಬದಲ್ಲಿ ಮೊಬೈಲ್ ಇಲ್ಲದಿದ್ದರೇ ಗ್ರಾ.ಪಂ. ಕಚೇರಿ, ಅಟಲ್‌ಜೀ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡಿ ಸಂಖ್ಯೆಗಳನ್ನು ನೊಂದಾಯಿಸಲು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಬೇಕಾದರೇ ತಮ್ಮ ನ್ಯಾಯಬೆಲೆ ಅಂಗಡಿ ಅಥವಾ ತಾಲೂಕು ಆಹಾರ ಇಲಾಖೆ ಶಿರಸ್ತೇದಾರರು ಮತ್ತು ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.