ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪೌರಾಣಿಕ ನಾಟಕಗಳ ಉಳಿಸಿ ಬೆಳೆಸಿ

Rashmi Kasaragodu
Updated On : 13 Jun 2014, 1:48 am

ಹಾಸನ: ದೃಶ್ಯ ಮಾಧ್ಯಮದ ವ್ಯಾಮೋಹ ಹಾಗೂ ಧಾರಾವಾಹಿಗಳಿಗೆ ಜನರು ಹೆಚ್ಚು ಒತ್ತು  ಕೊಡುತ್ತಿದ್ದು,  ಪೌರಾಣಿಕ ನಾಟಕಗಳು ನಶಿಸುತ್ತಾ ಬಂದಿದೆ. ಕಂಪನಿಯ ನಾಟಕಗಳು ಅಲ್ಲೊಂದು ಇಲ್ಲೊಂದು ಇದೆ. ಈ ನಿಟ್ಟಿನಲ್ಲಿ ನಮ್ಮ ನಾಟಕ ಕಲೆ ಅದರಲ್ಲೂ  ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸಿದಾಗ ಮನುಷ್ಯನ ಮನಸ್ಸು ಪರಿ ವರ್ತನೆ ಸಾಧ್ಯಹಾಗೂ ನಿಜವಾದ ಕಲೆಯನ್ನು ಕಲಾವಿದರನ್ನು ನಾವು ಕಾಣುವುದು ಭಕ್ತಿಪ್ರಧಾನ ನಾಟಕಗಳಿಂದ ಮಾತ್ರ ಸಾಧ್ಯವೆಂದು ಸಾಹಿತಿ ನಿವೃತ್ತ ಪ್ರಾಧ್ಯಾಪಕ ಡಾ. ಮಳಲಿ ವಸಂತ ಕುಮಾರ್ ತಿಳಿಸಿದ್ದಾರೆ.

ಅವರು ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲೆಯ ನಾನಾ ಕಲಾವಿದ ಕಲಾ ಸಂಘಗಳ  ಸಹಯೋಗದೊಂದಿಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ  ನಗರದ ಶ್ರೀ ಸಂಗಮೇಶ್ವರ ಜಾನಪದ ರಂಗಭೂಮಿ ಕಲಾಸಂಘದ 3ನೇ ವಾರ್ಷಿಕೋತ್ಸವದ ಅಂಗವಾಗಿ ಪಾಲಾಕ್ಷಚಾರ್ ಸೀಗೋಡು ನಿರ್ದೇಶನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ ಹಾಗೂ ಕಲಾ ಸೇವೆ, ಸಾಮಾಜಿಕ ಸೇವೆ ಸಹಕಾರಿ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪಿ.ಎಂ. ಮಲ್ಲೇಶಗೌಡ ಅವರಿಗೆ ಬೆಳ್ಳಿಕಿರೀಟ ಧಾರಣೆ ಮಾಡಿ ನಟನ  ಕಲಾ ಕಿಂಪುರುಷ ಎಂಬ ಬಿರುದನ್ನು ನೀಡಿ ಮಾತನಾಡುತ್ತಿದ್ದರು.

ಕಲೆಗೆ ಪ್ರೋತ್ಸಾಹ: ಬೆಂಗಳೂರಿನ ಕಲಾವಿದ ಗಂಗಾಧರ್ ಮಾತನಾಡಿ, ಕಲೆಗೆ ಹಾಸನ ಮೊದಲಿನಿಂದಲೂ ಪ್ರೋತ್ಸಾಹಿಸಿದೆ. ಕಲಾವಿದರ ಮುಂದಿರುವ ಸಮಸೆಯನ್ನು  ಬಗೆಹರಿಸಿಕೊಳ್ಳಲು ಮಲ್ಲೇಶಗೌಡ ಅವರಂತಹ ಸಂಘಟನಾಕಾರರ ಸಹಕಾರ ಅಗತ್ಯವಿದೆ ಎಂದರು.

Advertisement

Advertisement

ನಿವೃತ್ತ ಲೋಕಾಯುಕ್ತ ಡಿವೈಎಸ್ಪಿ ಶಿವಬಸಪ್ಪ ಮಾತನಾಡಿ, ಕಲಾ ಸೇವೆಯನ್ನು ಉಳಿಸಿ  ಬೆಳೆಸಿಕೊಳ್ಳಲು ಯುವಕರ ಬದುಕಿನ ಮನಪರಿವರ್ತನೆ ಇಂತಹ ಭಕ್ತಿಪ್ರಧಾನ ನಾಟಕದಿಂದ  ಸಾಧ್ಯ ಎಂದರು.  ಸನ್ಮಾನಿತರಾದ ಮಲ್ಲೇಶಗೌಡ ಮಾತನಾಡಿದರು.

ಅಭಿಮಾನಿಗಳ ಸಹಕಾರ: ಸಂಸ್ಥೆಯ ಅಧ್ಯಕ್ಷ ಬಾಲೇಗೌಡ ಮಾತನಾಡಿ, ಪೌರಾಣಿಕ ನಾಟಕಗಳನ್ನು  ಹೆಚ್ಚು ಹೆಚ್ಚಾಗಿ ಆಡುತ್ತಿದ್ದು, ಇದಕ್ಕೆ ಕಲಾಭಿಮಾನಿಗಳ ಸಹಕಾರ ಕಾರಣ ಎಂದರು.

ಸಂಸ್ಥೆಯ ಕಾರ್ಯದರ್ಶಿ ಹಾಗೂ ಕಲಾವಿದ ಯಲಗುಂದ ಶಾಂತಕುಮಾರ್ ಸ್ವಾಗತಿಸಿದರು. ಸಮಾಜ ಸೇವಕ ಆರ್.ಕೆ. ಸ್ವರೂಪ್ ಕಾರ್ಯಕ್ರಮ ನಿರೂಪಿಸಿದರು. ಪಾಕ ತಜ್ಞ ಡಿ.ವಿ. ಮೋಹನ್, ರಂಗಕಲಾವಿದ ರಾದ ಶ್ರೀಕಂಠಪ್ಪ, ವಿರೂಪಾಕ್ಷಪ್ಪ, ಧನಂಜಯ್, ಅಪ್ಪಾಜಿಗೌಡ, ಸುಹಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement