ತಂಬಾಕು ನಾಟಿ ಮಾಡಲು ಸಿದ್ಧತೆ
ರಾಮನಾಥಪುರ: ಈ ಸಲದ ಮುಂಗಾರು ಮಳೆ ತಂಬಾಕು ಬೆಳೆಗಾರರಲ್ಲಿ ಉತ್ತಮ ಫಲಲಿನ ಭರವಸೆ ಮೂಡಿಸಿದೆ.
ತಾಲೂಕಿನಾದ್ಯಂತ ಬೇಸಾಯದ ಚಟುವಟಿಕೆ ಅಲ್ಲಲ್ಲಿ ಪ್ರಾರಂಭವಾಗಿದೆ. ಮುಖ್ಯ ಬೆಳೆ ತಂಬಾಕು ತಗ್ಗು ಪ್ರದೇಶದಲ್ಲಿ ನಾಟಿ ಮಾಡಿ ವ್ಯವಸಾಯ ಮಾಡುತ್ತಿದ್ದಾರೆ. ಇದರ ಜತೆ ಜೋಳ ಆಲೂಗೆಡ್ಡೆ ಮುಂತಾದ ಬೇಳೆಗಳನ್ನು ಮಾಡಲು ರೈತರು ತಮ್ಮ ಜಮೀನನ್ನು ಹದಗೊಳಿಸುತ್ತಿದ್ದಾರೆ.
ಕೃಷಿ ಚಟುವಟಿಕೆ: ರಾಮನಾಥಪುರ, ಕೊಣನೂರು, ದೊಡ್ಡಮಗ್ಗೆ, ಮಲ್ಲಿಪಟ್ಟಣ, ಕಸಬಾ ಹೋಬಳಿಗಳ ಕಡೆ ಬಿಸಿಲಿನ ಧಗೆಯಿಂದ ಬಳಲುತ್ತಿದ್ದ ರೈತರಿಗೆ ಈ ಹಿಂದೆ ಬಿದ್ದ ಮಳೆ ಸಂತಸವನ್ನು ತಂದಿದ್ದು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರಾಮನಾಥಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಸುಬ್ರಹ್ಮಣ್ಯನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ಹೊಗೆಸಪ್ಪು ನಾಟಿಗೆ ಮುಂದಾಗಿದ್ದಾರೆ.
ಈ ಬಾರಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳಿಗೆ ಯಾವುದೇ ಕೊರತೆಯಾಗದಂತೆ ತಂಬಾಕು ಮಾರುಕಟ್ಟೆ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಮಾಡಬೆಕಾಗಿದೆ. ಈ ಮುಂಗಾರು ಸಮಾಯಾನುಸಾರ ಮಳೆ ಕೃಪೆ ತೋರಿದರೆ ಫಸಲು ರೈತರ ಕೈ ಸೇರಲಿದೆ.