ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರಿಷತ್ತಿಗೆ ವಾಟಾಳ್ ನಾಮಕರಣ ಮಾಡಿ

Srinivasa Murthy VN
Updated On : 13 Jun 2014, 11:04 am

ಮೈಸೂರು: ಹಿರಿಯ ಕನ್ನಡ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ನಾಡು, ನುಡಿಗಾಗಿ ಜೀವನ ಮುಡಿಪಾಗಿರಿಸಿಕೊಂಡು ನಿರಂತರವಾಗಿ ಆರು ದಶಕಗಳ ಕಾಲ ನೆಲ, ಜಲ, ಗಡಿ, ಭಾಷೆ ಕಾಯುವ ಕಾಯಕವನ್ನು ನಿಷ್ಠೆಯಿಂದ ಮಾಡಿರುವ ವಾಟಾಳ್ ನಾಗರಾಜ್ ಅವರ ಹಿರಿತನಕ್ಕೆ ಬೆಲೆ ನೀಡಿ ರಾಜ್ಯ ಸರ್ಕಾರ ಪರಿಷತ್ತಿಗೆ ನಾಮಕರಣ ಮಾಡಬೇಕು ಎಂದು ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಗಣಿಗಾರಿಗೆ ತಡೆಯಲು ಸಮರ್ಥರು: ಚಾಮರಾಜನಗರದ ಶಾಸಕರಾಗಿದ್ದಾಗ ವಾಟಾಳ್ ಅವರು ಗಣಿಕಾರಿಕೆಗೆ ಆಸ್ಪದ ನೀಡಿರಲಿಲ್ಲ. ಈಗ ಇಲ್ಲಿ ಗಣಿಗಾರಿಕೆ ಸತತವಾಗಿ ನಡೆದಿದೆ. ಅದನ್ನು ನಿಯಂತ್ರಿಸಬೇಕಾದರೆ ಮತ್ತೆ ಅವರು ಅಧಿಕಾರದಲ್ಲಿ ಸ್ಥಾನಮಾನ ಪಡಯಬೇಕು ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ದಿನದಲ್ಲಿ ಇಂಗ್ಲಿಷ್ ಪ್ರಭಾವದಿಂದ ನಮ್ಮ ಕನ್ನಡ ಭಾಷೆ ಕಣ್ಮರೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನೆರೆ ರಾಜ್ಯದವರ ಹಾವಳಿಯಿಂದ ಗಡಿ ಜಲಗಳ ಸಂರಕ್ಷಣೆಗೆ ವಾಟಾಳ್ ಅವರ ಸೇವೆ ಅವಶ್ಯಕ. ಕನ್ನಡಿಗರ ಧ್ವನಿಯಾಗಿರುವ ಅವರನ್ನು ಪರಿಷತ್ತಿಗೆ ನಾಮಕರಣ ಮಾಡುವುದರಿಂದ ಕನ್ನಡಕ್ಕೆ ಮತ್ತಷ್ಟು ಬಲ ಬರಲಿದೆ ಎಂದರು. ಸಾಹಿತಿ ಬನ್ನೂರು ರಾಜು, ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement