ಕಳಪೆ ಗುಣಮಟ್ಟದ ವಸ್ತು ಪಡೆಯಲು ನಕಾರ
ಚನ್ನರಾಯಪಟ್ಟಣ: ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯಿಂದ ಗಂಗಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ನೀಡಿದ ಜಿ.ಹೆಚ್. ಪೈಪ್ಗಳು, ಮೋಟಾರ್, ಕೇಬಲ್ಗಳು ಕಳಪೆ ಮಟ್ಟದ್ದಾಗಿದೆ ಎಂದು ಫಲಾನುಭವಿಗಳು ಪಡೆದ ವಸ್ತುಗಳನ್ನು ಹಿಂತಿರುಗಿಸಿದ್ದಾರೆ.
ಪಟ್ಟಣದ ಹೊಸ ಬಸ್ಸು ನಿಲ್ದಾಣದ ಸಮೀಪ ಸರ್ಕಾರದ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ನಾಗೇಂದ್ರ ಪ್ರಸಾದ್ ಸುಮಾರು 30 ಫಲಾನುಭವಿಗಳಿಗೆ 150 ಜಿ.ಹೆಚ್.ಪೈಪ್, ಪ್ಯಾನಲ್ ಬಾಕ್ಸ್, ಕೇಬಲ್, ಸಾಟರ್ಗಳನ್ನು ಲಾರಿಯಲ್ಲಿ ತಂದು ವಿತರಣೆ ಮಾಡುವಾಗ ಎಂ ದಾಸಾಪುರದ ಆಲ್ಪೋನ್ಸ್ ಹಾಗೂ ಇತರರು, ಕಳಪೆ ಗುಣಮಟ್ಟದ ಈ ಪರಿಕರಗಳನ್ನು ಪಡೆಯಲು ಆಕ್ಷೇಪ ವ್ಯಕ್ತಪಡಿಸಿದರು.ಫಲಾನುಭವಿಗಳ ಆಕ್ರೋಶ: ಇಲಾಖೆ ಕಚೇರಿ ಬಳಿ ಅಥವಾ ಫಲಾನುಭವಿಗಳ ಮನೆ ಬಾಗಿಲಿಗೆ ನೀಡಬೇಕಾದ ಪದಾರ್ಥ ಈ ಸ್ಥಳದಲ್ಲೇ ವಿತರಣೆ ಏಕೆ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿ ನಾಗೇಂದ್ರ ಪ್ರಸಾದ್ ಮಾತನಾಡಿ, ಗುಣಮಟ್ಟವಿದ ಪದಾರ್ಥಗಳನ್ನು ವಾಪಸ್ ಕಳುಹಿಸುತ್ತಿರುವುದಾಗಿ ತಿಳಿಸಿದರು. ಫಲಾನುಭವಿಗಳ ಅಹವಾಲುಗಳನ್ನು ಪೊಲೀಸರು ಹಾಗೂ ಅಧಿಕಾರಿಗಳು ಪಡೆದು ಪದಾರ್ಥಗಳನ್ನು ವಾಪಸ್ ಕಳುಹಿಸಲಾಯಿತು.