ನಗರಸಭೆ ಸದಸ್ಯ ಜೈನ್‌ಗೆ ಗಾಯ
ಸಕಲೇಶಪುರ: ಪುರಸಭೆ ಅಧ್ಯಕ್ಷರಾಗುವ ಕನಸು ಹೊತ್ತು ತಮ್ಮ ಬೆಂಬಲಿಗ ಪುರಸಭೆ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಪುರಸಭೆ ಸದಸ್ಯ ಸಂತೋಷ್ ಕುಮಾರ್ ಜೈನ್ ಪ್ರವಾಸದ ವೇಳೆ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.
ಪುರಸಭೆ ಪ್ರಸಕ್ತ ಅಧ್ಯಕ್ಷ ಎಸ್.ಎನ್. ಸತೀಶ್ ಪಕ್ಷದ ಆಂತರಿಕ ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಲೊಪ್ಪದ ಕಾರಣದಿಂದ ಎರಡನೇ ಅವಧಿಗೆ ಪುರಸಭೆ ಅಧ್ಯಕ್ಷರಾಗಲು ಆಕಾಂಕ್ಷಿಯಾಗಿದ್ದ ಸಂತೋಷ ಕುಮಾರ್ ಜೈನ್ ಕಾಂಗ್ರೆಸ್‌ನ ಐವರು ಹಾಗೂ ಜೆಡಿಎಸ್‌ನ 12 ಸದಸ್ಯರು ಸೇರಿದಂತೆ ಒಟ್ಟು 17 ಸದಸ್ಯರನ್ನು ಕಳೆದ ಎಂಟು ದಿನಗಳ ಹಿಂದೆ ಊಟಿಗೆ ಕರೆದೊಯ್ದಿದ್ದರು.
ಅಪಘಾತ ವದಂತಿ: ಪ್ರವಾಸದಿಂದ ಹಿಂತಿರುಗುವಾಗ ಮೈಸೂರಿನಲ್ಲಿ ಮದುವೆ ಸಮಾರಂಭದ್ಲಿಲ ಭಾಗವಹಿಸಿ ಸಕಲೇಶಪುರಕ್ಕೆ ಹಿಂತಿರುಗುತ್ತಿರುವಾಗ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಜೈನ್ ಅವರ ಕುತ್ತಿಗೆ, ಸೊಂಟ ಹಾಗೂ ಕಾಲಿಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ.
ಆದರೆ ಪತ್ರಿಕೆಯೊಂದಿಗೆ ಮಾತನಾಡಿದ ಸಂತೋಷ್ ಕುಮಾರ ಜೈನ್ ಹಿಂದಿನಿಂದಲೂ ತಮಗೆ ಕುತ್ತಿಗೆ ನೋವಿದ್ದು ಪ್ರವಾಸದ ವೇಳೆ ಈ ನೋವು ಹೆಚ್ಚಿದ್ದರಿಂದ ವೈದ್ಯರಲ್ಲಿ ತಪಾಸಣೆ ನಡೆಸಿದೆ. ಮೈಸೂರಿನ ಆಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಂಡಿದ್ದು ಆರಾಮವಾಗಿದ್ದೇನೆಂದರು.
ಇಕ್ಕಟ್ಟಿನಲ್ಲಿ ಸದಸ್ಯರು: ಆದರೆ ಪ್ರವಾಸದಲ್ಲಿರುವ ಸದಸ್ಯರಿಗೆ ತಮ್ಮನ್ನು ಕರೆತಂದ ವ್ಯಕ್ತಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿರುವುದರಿಂದ ಪ್ರವಾಸ ಮುಂದುವರಿಸುವುದಕ್ಕೂ ಮನಸ್ಸಿಲ್ಲ ಇತ್ತ ಪಟ್ಟಣಕ್ಕೆ ಆಗಮಿಸುವಂತೆಯೂ ಇಲ್ಲದೆ ಇಕ್ಕಟ್ಟಿಗೆ ಸಿಲುಕಿದು,್ದ ಅವಿಶ್ವಾಸ ನಿರ್ಣಯ ಆಗುವವರಗೆ ಪುರಸಭೆ ಸದಸ್ಯರು ಪ್ರವಾಸದಲ್ಲೇ ಇರಬೇಕಾಗಿದೆ.