ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಣ್ಣು, ನೀರಿನ ಪರೀಕ್ಷೆ ಮಾಡಿಸಿ

Srinivasa Murthy VN
Updated On : 16 Jun 2014, 9:49 am

ಜಾವಗಲ್: ಮಹಿಳಾ ಸಂಘಗಳು ಬೀಜ ನಿಯೋಜನೆ, ಬೀಜ ಸುತ್ತು ನಿಯೋಜನೆ ಬಗ್ಗೆ ಮಾಹಿತಿ ಪಡೆದು ಕೃಷಿಯಲ್ಲಿ ಪ್ರಗತಿ ಕಾಣಬಹುದಾಗಿದೆ ಎಂದು ಜಾವಗಲ್  ರೈತ ಸಂಪರ್ಕ ಕೇಂದ್ರದ ಕೃಷಿಅಧಿಕಾರಿ ಡಿ.ಎಸ್. ಕುಮಾರ ಸ್ವಾಮಿ ತಿಳಿಸಿದರು.
ಹೋಬಳಿ ನೀಲಗಿರಿ ಕಾವಲು ಗ್ರಾಮದಲ್ಲಿ  ಇತ್ತೀಚೆಗೆ ಏರ್ಪಡಿಸಿದ್ದ ಗುಚ್ಚಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ,  ಮಣ್ಣು ಪರೀಕ್ಷೆ ಉಪಯೋಗಗಳು, ಮಣ್ಣಿನ ಮಾದರಿ ತೆಗೆಯುವ ವಿಧಾನ, ಸಾವಯವ ಗೊಬ್ಬರಗಳನ್ನು ತಯಾರಿಸುವ ವಿಧಾನ, ಅದರ  ಉಪಯೋಗ, ಬದಲಿ ಬೆಳೆಗಳು ಕುರಿತು ಮಾಹಿತಿ ನೀಡಿದರು.   
ಅಧ್ಯಕ್ಷತೆ ವಹಿಸಿದ್ದ ಬಂದೂರು ಗ್ರಾಪಂ ಅಧ್ಯಕ್ಷ ಮೂರ್ತಿ, ರೈತರು ಉಳುಮೆಗೆ ಮೊದಲು ಮಣ್ಣು ನೀರಿನ ಪರೀಕ್ಷೆ ಮಾಡಿಸಿ ನಂತರ ಗೊಬ್ಬರ ಬಳಕೆ  ಮಾಡುವಂತೆ ಸಲಹೆ ನೀಡಿದರು.
ಕೃಷಿಕರಾದ ಚಂದ್ರನಾಯ್ಕ, ಶಿವಾನಂದ, ಕಾಂತ ರಾಜು ಮತ್ತಿತರರು ಭಾಗವಹಿಸಿದ್ದರು.

ಶೀಘ್ರವೇ ರೆಡ್‌ಕ್ರಾಸ್ ಶಾಖೆ
ಬೇಲೂರು: ರಕ್ತದಾನ ಮಾಡುವುದರಿಂದ ಬೇರೆಯವರ ಜೀವ ಉಳಿಸುವುದರೊಂದಿಗೆ ನಮ್ಮ  ಆರೋಗ್ಯ ಸಹ ಉತ್ತಮವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ  ಕಲ್ಯಾಣಾಧಿಕಾರಿ ಡಾ. ಪಿ.ಎಲ್. ಶ್ಯಾಮಲದೇವಿ ತಿಳಿಸಿದರು.
 ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಇತ್ತೀಚೆಗೆ ಮಾನವ ಹಕ್ಕುಗಳ ಮಹಾ ಮೈತ್ರಿ ಜಿಲ್ಲಾ  ರೆಡ್‌ಕ್ರಾಸ್ ಸಂಸ್ಥೆ. ಎಸ್‌ಸಿಐ ಹಾಸನ ಸಂಜೀವಿನಿ ಪ್ರೇರಣಾ ಸ್ವಯಂಸೇವಾ ಸಂಘ  ಲೋಡರ್ಸ್ ಅಸೋಶಿಯೇಷನ್ ಗೃಹ ರಕ್ಷಕ ದಳ.  ಗ್ರೀನ್ ಆರ್ಟ್ ಡ್ರೀಮ್ ಫೌಂಡೇಷನ್  ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರವನ್ನು  ಉದ್ಘಾಟಿಸಿ ಅವರು ಮಾತನಾಡಿದರು.
ರೆಡ್‌ಕ್ರಾಸ್ ಶಾಖೆ: ನಂತರ ಮಾತನಾಡಿದ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಕೃಷ್ಣಮೂರ್ತಿ, ಬೇಲೂರಿನಲ್ಲಿ ರೆಡ್ ಕ್ರಾಸ್ ಶಾಖೆಯನ್ನು ಕೆಲವೆ ದಿನಗಳಲ್ಲಿ ಆರಂಭಿಸಲಿದ್ದು ಜಿಲ್ಲೆಯಲ್ಲಿ ರಕ್ತ ಸಂಗ್ರಹ ಘಟಕವನ್ನು  ಸ್ಥಾಪಿಸಲಾಗುವುದು ಎಂದರು.
 ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾನಟರಾಜ್, ತಾಲೂಕು ಪ್ರಗತಿಪರ ಸಂಘ ಟನೆಗಳ ಅಧ್ಯಕ್ಷ ಕೆ.ಸುದರ್ಶನ್, ಜೆ.ಸಿ.ಐ.ಜಿಲ್ಲಾಧ್ಯಕ್ಷ ಸುರೇಶ್ ಗುರುಜಿ, ಭಾರತೀಯ ರೆಡ್ ಕ್ರಾಸ್‌ನ ರವಿಕುಮಾರ್  ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾಸಂಧ್ಯಾ, ಡಾ. ಸುಧಾ ಹಾಗೂ ಇನ್ನಿತರರು ಇದ್ದರು.  ಇದೇ ಸಂದರ್ಭದಲ್ಲಿ 35 ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement