ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಂಚನೆ ಆರೋಪ: ಇನ್ಪ್ರೋಕಾನ್ ಸಂಸ್ಥೆ ವಿರುದ್ಧ ಪ್ರತಿಭಟನೆ

Srinivasa Murthy VN
Updated On : 16 Jun 2014, 9:47 am

ಹಾಸನ: ಹಿಂದುಸ್ತಾನ್ ಇನ್ಪ್ರೋಕಾನ್ ಸಂಸ್ಥೆಯು ಗ್ರಾಹಕರಿಂದ ಹಣವನ್ನು ಪಡೆದು, ಈಗ ಗ್ರಾಹಕರಿಗೆ ಹಣ ಹಿಂದಿರುಗಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಗ್ರಾಹಕರು ಸೋಮವಾರ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ಕಾವಲು ಪಡೆಯ ನೇತೃತ್ವದಲ್ಲಿ ಪ್ರತಿಭಟನೆ ಮುಂದಾದರು.
 ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪವಿರುವ ಈ ಸಂಸ್ಥೆಯು ಏಜೆಂಟರ ಮೂಲಕ ಹಣ ಕಟ್ಟಿಸಿಕೊಂಡು ಈಗ ಅವಧಿ ಮುಗಿದರೂ ಗ್ರಾಹಕರಿಗೆ ಹಣ ಹಿಂದಿರುಗಿಸದೇ ವಿಳಂಬ ಮಾಡುತ್ತಿದ್ದಾರೆ.  ಗ್ರಾಹಕರಿಗೆ ನೀಡಬೇಕಾದ ಹಣಕ್ಕೆ ಕೆಲವರಿಗೆ ಚೆಕ್ ನೀಡಿದ್ದರು. ಬ್ಯಾಂಕಿಗೆ ಹೋದರೇ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಕಂಪನಿಗೆ ಬಂದು ವಿಚಾರಿಸಿದಾಗ ಬೇರೆ ಚೆಕ್ ನೀಡುವುದಾಗಿ ಹೇಳುತ್ತಿದ್ದಾರೆ. ಹಾಗಾಗಿ ಕಳೆದ 6-7 ತಿಂಗಳು ಹಣ ನೀಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ಮಾಡಿದಾಗ ಸಂಜೆ ವೇಳೆಗೆ ಹಣ ನೀಡುವ ಭರವಸೆ ನೀಡಿದರು. ಗ್ರಾಹಕರು ಸಂಜೆ ಹಿಂದೂಸ್ತಾನ್ ಇನ್ಪ್ರೋಕಾನ್ ಕಚೇರಿಗೆ ಬಂದು ಕೇಳಿದರೆ ನಾಳೆ ಬನ್ನಿ ಎಂಬ ಉತ್ತರ ನೀಡುತ್ತಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಕಂಪನಿ ಮ್ಯಾನೇಜರನ್ನು  ತರಾಟೆಗೆ ತೆಗೆದುಕೊಂಡರು. ನಂತರ ಕಂಪನಿಯ ಬಾಗಿಲು ಹಾಕಿಸಿ ಪ್ರತಿಭಟಿಸಿದರು.  ಈ ಸಂದರ್ಭದಲ್ಲಿ ಕರ್ನಾಟಕ ಕಾವಲು ಪಡೆ ಕಾರ್ಯಕರು ಹಾಗೂ ಕಂಪನಿಯ ನಡುವೆ ಮಾತಿನ ಚಕಮಕಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement