ನೀರಿಗೆ ಅಭಾವ; ಗ್ರಾಪಂ ಕಚೇರಿಗೆ ಬೀಗ
ಅರಕಲಗೂಡು: ಇಲ್ಲಿನ ಕಸಬಾ ಹೋಬಳಿ ಹೊನ್ನವಳ್ಳಿ ಗ್ರಾಪಂ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಗ್ರಾಮಸ್ಥರು ಕಚೇರಿಗೆ ಬೀಗ ಹಾಕಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಪಿಡಿಒ ಗೆ ದಿಗ್ಭಂಧನ ಹಾಕಿದ ಪ್ರಸಂಗ ಸೋಮವಾರ ಮಧ್ಯಾಹ್ನ ನಡೆಯಿತು.
ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಸಾರ್ವಜನಿಕರು ಒಳಗೆ ಬಾರದಂತೆ ಬಾಗಿಲು ಹಾಕಿ ಸಭೆ ನಡೆಸಲಾಗುತ್ತಿತ್ತು. ಒಟ್ಟು 15 ಸದಸ್ಯ ಬಲವಿರುವ ಗ್ರಾಮ ಪಂಚಾಯಿತಿಯಲ್ಲಿ 12 ಜನ ಸದಸ್ಯರು ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಗ್ರಾಮದ ಕೆಲವರು ಬಂದು ತಾವು ತಂದಿದ್ದ ಬೀಗ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧ್ಯಕ್ಷರ ವಿರುದ್ಧ ಕಿಡಿಕಾರಿದರು. ಬೀಗ ಹಾಕಿರುವ ವಿಷಯ ತಿಳಿದು ಪಿಡಿಒ ಯಾಲಕ್ಕಿಗೌಡ ಅವರು ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ತಿಳಿಸಿದಾಗ ಪೊಲೀಸರು ಸ್ಥಳಕ್ಕೆ ಧಾವಿಸಿ ಬೀಗ ತೆಗೆಸಿದ್ದಾರೆ.
ಹೊಸ ತಿರುವು: ಘಟನೆಗೆ ಸಂಬಂಧಿಸಿದಂತೆ ಹೊನ್ನವಳ್ಳಿ ಗ್ರಾಮದ ಸಂತೋಷ ಎಂಬ ಯುವಕನನ್ನು ಪೊಲೀಸರು ಕರೆ ತಂದು ಠಾಣೆಯಲ್ಲಿ ಇರಿಸಿ ಪಿ.ಡಿ.ಓ ದೂರು
ಅರ್ಜಿ ತರುತ್ತಾರೆಂದು ಪೊಲೀಸರು ಸಂಜೆ ನಾಲ್ಕರ ವರೆಗೆ ಕಾದರೂ ಯಾವುದೇ ದೂರು ನೀಡಲಿಲ್ಲ. ಅಷ್ಟರಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಠಾಣೆ ಬಳಿ ಜಮಾಯಿಸಿ ಆತನನ್ನು ಕರೆತಂದ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರು. ಗ್ರಾಮದ ಸಮಸ್ಯೆಗೆ ಸ್ಪಂದಿಸದ ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದೇವೆ. ದೂರು ದಾಖಲಿಸೆ ಇಲ್ಲವೇ ಕರೆ ತಂದಿರುವ ಯುವಕನನ್ನು ಬಿಡುವಂತೆ ಒತ್ತಾಯಿಸಿದರು.
ಪರಿಸ್ಥಿತಿಯನ್ನರಿತ ಪೊಲೀಸರು ಯುವಕನ್ನು ಬಿಟ್ಟು ಕಳುಹಿಸಿದರು.