ರಾಜ್ಯ ಮಟ್ಟದ ಮಹಾಭಾರತ ಪರೀಕ್ಷೆಯಲ್ಲಿ ಮೇಘನಾಗೆ ಚಿನ್ನ
ರಾಮನಾಥಪುರ: ಭಾರತ ಸಂಸ್ಕೃತಿ ಪ್ರತಿಷ್ಠಾನ, ಧರ್ಮಶ್ರೀ, ಶಂಕರಪುರ ಬೆಂಗಳೂರು ಇವರು ಸುಮಾರು 40 ವರ್ಷಗಳಿಂದ ರಾಮಯಣ-ಮಹಾಭಾರತ ಪರೀಕ್ಷೆ ನಡೆಸುತ್ತಾ ಬಂದಿದ್ದಾರೆ. ಇದರಿಂದ ಮಕ್ಕಳಿಗೆ ಭಾರತ ಸಂಸ್ಕೃತಿ ಪರಿಚಯವಾಗಲು ಸಾಧ್ಯವಾಗುತ್ತಿದೆ ಎಂದು ವಿದ್ಯಾಶಂಕರ ಪ್ರೌಢಶಾಲೆ ನಿವೃತ್ತ ಪ್ರಾಂಶುಪಾಲ ಅರ್.ಕೆ. ಶ್ರೀನಿವಾಸ್ ಅಯ್ಯಂಗಾರ್ ಅಭಿಪ್ರಾಯಪಟ್ಟರು.
ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣದ ವಿದ್ಯಾಶಂಕರ ಪೌಢಶಾಲೆ 9ನೇ ತರಗತಿ ಮೇಘನಾ ಮಹಾಭಾರತ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಚಿನ್ನದ ಪದಕ ಪಡೆದಿದ್ದಾಳೆ. ಇದಲ್ಲದೆ, ಇದೇ ಶಾಲೆಯ ಮಹಾಭಾರತದಲ್ಲಿ ಜಿಲ್ಲಾ ಮಟ್ಟದ ಬೆಳ್ಳಿ ಪದಕ ದ್ವೀತಿಯ ಸ್ಥಾನ ಎಂ.ಬಿ.ಕೀರ್ತಿ, ರಾಮಯಣದಲ್ಲಿ ಜಿಲ್ಲಾ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದ ಸಾಹಿಲ್ ಪಡೆದಿದ್ದಾರೆ.
ಜಾವಗಲ್ನಲ್ಲಿ ಪ್ರತಿ ರವಿವಾರ ಸಂತೆ ನಡೆಸಲು ತೀರ್ಮಾನ
ಜಾವಗಲ್: ಜಾವಗಲ್ನಲ್ಲಿ ಪ್ರತಿ ಶನಿವಾರ ನಡೆಸಲಾಗುತ್ತಿದ್ದ ತರಕಾರಿ ಸಂತೆಯನ್ನು ಮುಂದೆ ಪ್ರತಿ ಭಾನುವಾರ ನಡೆಸಲು ಇಲ್ಲಿನ ಗ್ರಾಪಂ ತೀರ್ಮಾನಿಸಿದೆ.
ನೂರಾರು ವರ್ಷಗಳ ಇತಿಹಾಸವಿರುವ ಜಾವಗಲ್ ಸಂತೆ ಜೊತೆಗೆ ಇತ್ತೀಚಿನ ಕೆಲವು ವರ್ಷಗಳಿಂದ ಶನಿವಾರ ತರಕಾರಿ ಸಗಟು ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ಶುಕ್ರವಾರವೇ ತಾಜಾ ತರಕಾರಿಗಳನ್ನು ರೈತರು ತಮ್ಮ ಜಮೀನುಗಳಿಂದ ತಂದು ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ವೇಳೆಗೆ ಸಗಟು ವ್ಯಾಪಾರ ಮಾಡುತ್ತಿದ್ದರು. ಇದರಿಂದ ಬೇರೆ ಬೇರೆ ಊರುಗಳಿಗೆ ಲೋಡುಗಟ್ಟಲೆ ತಾಜಾ ತರಕಾರಿಗಳೆಲ್ಲಾ ರವಾನೆಯಾಗುತ್ತಿತು. ಅಳಿದುಳಿದ ತರಕಾರಿಗಳು ಶನಿವಾರದ ಮಳೆ, ಗಾಳಿ, ಬಿಸಿಲಿಗೆ ನಲುಗಿ ಭಾನುವಾರ ಗ್ರಾಹರ ಪಾಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ಹಿಂದಿನಂತೆಯೇ ಭಾನುವಾರವೇ ತರಕಾರಿ ಸಂತೆ ನಡೆಸುವಂತೆ ಗ್ರಾಮ ಪಂಚಾಯಿತಿಗೆ ಹಲವು ಸಲ ಮನವಿ ಸಲ್ಲಿಸಿದ್ದರು. ಪತ್ರಿಕೆಗಳಲ್ಲೂ ಈ ಬಗ್ಗೆ ಸುದ್ದಿಯಾಗಿತ್ತು.