ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂತೂ ಅರಸೀಕೆರೆಗೆ ಬಂದ್ರು ಉಸ್ತುವಾರಿ ಸಚಿವರು...

Srinivasa Murthy VN
Updated On : 5 Mar 2014, 12:19 pm

ಅರಸೀಕೆರೆ: ಪಟ್ಟಣಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪನವರು ಕಾಂಗ್ರೆಸ್ ಕಾರ್ಯಕರ್ತರಿಂದಲೇ ಅವಾಚ್ಯ ಶಬ್ದಗಳ ಪ್ರಯೋಗವನ್ನು ಎದುರಿಸಬೇಕಾದ ಪ್ರಸಂಗ ಮಂಗಳವಾರ ಸಂಜೆ ನಡೆಯಿತು.
ಪಟ್ಟಣದ ಪ್ರವಾಸಿ ಮಂದಿರಕ್ಕೆ ಮಂಗಳವಾರ ಸಂಜೆ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಆದ್ದೂರಿಯಾಗಿ ಸ್ವಾಗತಿಸಲು ಗಂಟೆಗಟ್ಟಲೇ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಕಾದು ನಿಂತಿತ್ತು.
ಸಚಿವರ ಆಗಮನದ ನಿರೀಕ್ಷೆಯಲ್ಲಿದ್ದ ಜೆ.ಡಿ.ಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ತಮ್ಮ ಬೆಂಬಲಿಗರ ಜೊತೆ ಪ್ರವಾಸಿ ಮಂದಿರದ ಆವರಣಕ್ಕೆ ಬರುತ್ತಿದ್ದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಬಿ. ಶಿವರಾಂ ಮತ್ತು ಸಚಿವರ ಪರವಾದ ಘೋಷಣೆಗಳನ್ನು ಮುಗಿಲು ಮುಟ್ಟುವಂತೆ ಕೂಗುತ್ತಿದರು.
ಹರಿಹಾಯ್ದ ಕಾರ್ಯಕರ್ತರು: ಸನ್ನಿವೇಶವನ್ನು ಕಂಡ ಶಾಸಕರ ಗುಂಪು ಗೇಟ್ ಬಳಿಯಲ್ಲಿ ಸಚಿವರಿಗಾಗಿ ಕಾದುನಿಂತಿದ್ದರು. ಅಲ್ಲಿಯೇ ಶಾಸಕರನ್ನು ಕಂಡ ಸಚಿವರು ತಮ್ಮ ಕಾರು ನಿಲ್ಲಿಸಿ ಅವರಿಂದ ಮಾಲಾರ್ಪಣೆ ಸ್ವೀಕರಿಸಿದನ್ನು ಕಂಡ ನೂರಾರು ಮಂದಿ ಕಾರ್ಯಕರ್ತರ ಗುಂಪು ನೂಕಾಟ ನಡೆಸುತ್ತಾ ಸಚಿವ ಬಳಿಗೆ ಬಂದು ಅವಾಚ್ಯ ಶಬ್ದಗಳ ಪದ ಪ್ರಯೋಗ ನಡೆಸುವ ಮೂಲಕ ಹರಿಹಾಯ್ದರು.
ಪರಿಸಿತ್ಥಿಯ ಸೂಕ್ಷ್ಮತೆ ಅರಿತ ಪೊಲೀಸರು ತಕ್ಷಣವೇ ಮಧ್ಯೆ ಪ್ರವೇಶಿಸಿ ಆಕ್ರೋಶಗೊಂಡ ಕಾರ್ಯಕರ್ತರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಸಮಾಧಾನಪಡಿಸಿದ ಶಿವರಾಂ: ಆಕಸ್ಮಿಕವಾಗಿ ನಡೆದ ಘಟನೆಯಿಂದ ಕೆಲವು ಕ್ಷಣಗಳ ಕಾಲ ವಿಚಲಿತರಾದ ಸಚಿವರನ್ನು ಕಂಡು ಜಿಲ್ಲಾಧ್ಯಕ್ಷ ಬಿ. ಶಿವರಾಂ ಕಾರ್ಯಕರ್ತರಿಗೆ ಸಮಾಧಾನಪಡಿಸುವ ಉದ್ದೇಶದಿಂದ ಮಾತನಾಡಿದ ಅವರು ರಾಜ್ಯ ಸರ್ಕಾರದ ಒಬ್ಬ ಸಚಿವರಾಗಿ ಕ್ಷೇತ್ರದ ಶಾಸಕರ ಸ್ವಾಗತ ಸ್ವೀಕರಿಸುವುದು ಕರ್ತವ್ಯವಾಗಿದೆ ಮತ್ತು ಅವರೊಂದಿಗೆ ಮಾತನಾಡುವ ಸೌಜನ್ಯ ಸರ್ಕಾರದ ಪ್ರತಿನಿಧಿಯಾಗಿ ಮಾಡಲೇಬೇಕು. ಪರಿಸ್ಥಿತಿ ಅರಿಯದೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ ಎಂದು ತಿಳಿ ಹೇಳಿದರು.
ಆದರೂ ಸಮಾಧಾನಕ್ಕೆ ಒಳಗಾಗದ ಕೆಲವು ಕಾರ್ಯಕರ್ತರು ಗೊಂದಲ, ಗಲಾಟೆಯನ್ನು ನಡೆಸಿದ ನಂತರ ಸಭೆಯಲ್ಲಿಯೂ ವ್ಯಕ್ತಪಡಿಸಿದ ಘಟನೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement