ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜಕಾರಣ ಶುದ್ಧಿಗೆ ಯುವ ಜನ ಮುಂದಾಗಲಿ

Srinivasa Murthy VN
Updated On : 5 Mar 2014, 12:16 pm

ಹಾಸನ: ರಾಜಕಾರಣದ ವ್ಯವಸ್ಥೆ ಹಾಳಾಗಿದ್ದು, ಇಂದಿನ ಯುವ ಪೀಳಿಗೆ ರಾಜಕಾರಣ ಶುದ್ದಿಮಾಡಲು ಮುಂದಾಗಬೇಕು ಎಂದು ಮಾಜಿ ಪ್ರಧಾನಿ, ಸಂಸದ ಹೆಚ್.ಡಿ.ದೇವೇಗೌಡ ತಿಳಿಸಿದರು.
ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ  ಜಿಲ್ಲಾ ಜೆಡಿಎಸ್ ಕಾನೂನು ವಿಭಾಗದ ಜಿಲ್ಲಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ವ್ಯವಸ್ಥೆ ಹದಗೆಟ್ಟಿದ್ದು, ನ್ಯಾಯಾಂಗದ ಮೂಲಕ ರಾಜಕೀಯ ವ್ಯವಸ್ಥೆ ಸರಿಯಾದ ಮಾರ್ಗಕ್ಕೆ ಬರಲಿದೆ ಎಂದರು.
ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ. ರೇವಣ್ಣ ಮಾತನಾಡಿ, ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರದಲ್ಲಿ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿರುವುದಾಗಿ ತಿಳಿಸಿದರು.  ಶಾಸಕರಾದ ಹೆಚ್.ಎಸ್. ಪ್ರಕಾಶ್, ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಚನ್ನವೀರಪ್ಪ, ಹಿರಿಯ ವಕೀಲ ತಾಂಡವೇಶ್ವರ, ಜೆಡಿಎಸ್ ಮುಖಂಡ ಬಿ.ವಿ. ಕರೀಗೌಡ, ವಕೀಲರಾದ ಲಿಂಗರಾಜು, ಎಂ.ಬಿ. ವಿಶ್ವನಾಥ್, ಎಂ.ಎನ್. ಜಯರಾಂ, ಶೇಷಾದ್ರಿ, ಬಿ. ಚಂದ್ರಶೇಖರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement