ಇಬ್ಬರ ಬಂಧನ: ರು. 50 ಸಾವಿರ ಮೌಲ್ಯದ ಆಭರಣ ವಶ
ಅರಸೀಕೆರೆ: ಪಟ್ಟಣದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಅನುಮಾನಾಸ್ಪದ ಕಂಡು ಬಂದ ಇಬ್ಬರನ್ನು ಬಂಧಿಸಿ, ವಿಚಾರಣೆಯಲ್ಲಿ ಅವರು ನೀಡಿದ ಮಾಹಿತಿ ಮೇರೆಗೆ 50 ಸಾವಿರ ರು. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಲ್ಲದೆ ರಾಜ್ಯದ ವಿವಿಧ ಕಡೆಗಳಲ್ಲಿ ಸುಮಾರು 15 ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಡಿವೈಎಸ್ಪಿ ಮಂಜುನಾಥ್ ತಿಳಿಸಿದ್ದಾರೆ.
ಪಟ್ಟಣದ ಅಂಚೆಕೊಪ್ಪಲು ರೈಲ್ವೆ ಕೆಳಸೇತುವೆ ಜಾಗದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಹೊಸದುರ್ಗ ತಾಲೂಕಿನ ಮುತ್ತೋಡ್ ಸಮೀಪದ ಅರೇಹಳ್ಳಿಯ ಬೂತೇಶ್(38) ಮತ್ತು ಹೊಸದುರ್ಗ ತಾ ಕಾರೇಹಳ್ಳಿ ಸಮೀಪದ ಗಂಜಿಗೆರೆಯ ಉಮೇಶ್ (32) ರನ್ನು ಗಸ್ತು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಪಟ್ಟಣದ ಹೊಯ್ಸಳ ನಗರದ ರವಿಶಂಕರ್ ಎಂಬುವರ ಮನೆಯ ಬಾಗಿಲ ಡೋರ್ ಲಾಕರ್ ಮುರಿದು ಒಳನುಗ್ಗಿದ ಆರೋಪಿಗಳು ಒಂದು ಲ್ಯಾಪ್‌ಟ್ಯಾಪ್ ಹಾಗೂ ಕಬ್ಬಿಣದ ಬೀರುವಿನಲ್ಲಿದ್ದ 50 ಸಾವಿರ ರು. ಚಿನ್ನ ಮತ್ತು ಬೆಳ್ಳಿಯ ಆಭರಣ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ತಂಡದಲ್ಲಿ ನಗರ ಠಾಣೆ ಇನ್ಸ್‌ಪೆಕ್ಟರ್ ನಂದಕುಮಾರ್, ಎಸ್‌ಐ ಅಯ್ಯನಗೌಡ, ಚಂದ್ರಶೇಖರ್, ತ್ರಿಮೂರ್ತಿ, ಹೀರಾಸಿಂಗ್, ರವಿ, ಹರೀಶ್, ನಂಜುಂಡೇಗೌಡ ಇದ್ದರು.