ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೋಷಪೂರಿತ ಆಹಾರ ಸೇವಿಸಿ ಕುಟುಂಬದ 12 ಜನ ಅಸ್ವಸ್ಥ

Srinivasa Murthy VN
Updated On : 10 Mar 2014, 11:02 am

ಕಿಮ್ಸ್‌ಗೆ ದಾಖಲು, ಹುಬ್ಬಳ್ಳಿಯಲ್ಲಿ ನಡೆದ ಘಟನೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಮಾ. 10
ದೋಷಪೂರಿತ ಆಹಾರ ಸೇವಿಸಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 12 ಜನರು ಅಸ್ವಸ್ಥಗೊಂಡ ಘಟನೆ ಭಾನುವಾರ ರಾತ್ರಿ ನಗರದ ವೀರಾಪೂರ ಓಣಿಯಲ್ಲಿ ಸಂಭವಿಸಿದೆ. ಅಸ್ವಸ್ಥಗೊಂಡವರೆಲ್ಲರೂ ಬಸಯ್ಯ ವೀರಪಯ್ಯ ಹಿರೇಮಠ್ ಎಂಬುವರ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಸದ್ಯ ಕಿಮ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬಸಯ್ಯ ಅವರ ಮಗಳು ಅಮೃತಾಳ ವಿವಾಹ ಫೆ.27ರಂದು  ಹೆಗ್ಗೇರಿಯ ವೀರೇಶ ಎಂಬುವರೊಂದಿಗೆ ನೆರವೇರಿತು. ಸಂಪ್ರದಾಯದಂತೆ ಭಾನುವಾರ ಮಧ್ಯಾಹ್ನ ಮಗಳು-ಅಳಿಯನಿಗೆ ಆಹಾರ ತಯಾರಿಸಿ ಬುತ್ತಿ ರೂಪದಲ್ಲಿ ನೀಡಿ ಗಂಡನ ಮನೆಗೆ ಕಳುಹಿಸಿದ್ದರು. ನಂತರ, ರಾತ್ರಿ ವೇಳೆ ಹಿರೇಮಠ್ ಕುಟುಂಬದ ಸದಸ್ಯರೆಲ್ಲರೂ ಮಗಳು-ಅಳಿಯನಿಗಾಗಿ ತಯಾರಿಸಿದ ಬುತ್ತಿ ಊಟವನ್ನೇ ಸೇವಿಸಿ ಏಕಾಏಕಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಾಗಿದ್ದಾರೆ.
ಪ್ರಾಣಭಯವಿಲ್ಲ: ದೋಷಪೂರಿತ ಆಹಾರ ಸೇವಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿರೇಮಠ್ ಕುಟುಂಬದ 12 ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement