ಬೇಲೂರು ವಿಧಾನಸಭೆ ಕ್ಷೇತ್ರ ಜೆಡಿಎಸ್ ಪದಾಧಿಕಾರಿಗಳ ನೇಮಕ
ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಜಾತ್ಯತೀತ ಜನತಾದಳದ ಪದಾಧಿಕಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ತಿಳಿಸಿದ್ದಾರೆ. ಕಾರ್ಯಾಧ್ಯಕ್ಷ ಬಿ.ಸಿ.ಮಂಜುನಾಥ್ ಉಪಾಧ್ಯಕ್ಷ ಎಚ್.ಜಿ.ಭುವನೇಶ್, ಸಿರಾಜ್ ಅಹಮದ್, ಮೋಹನ್‌ಕುಮಾರ್ ಪ್ರಧಾನ ಕಾರ್ಯದರ್ಶಿ ಬಿ.ಡಿ.ಚಂದ್ರೇಗೌಡ, ಕಾರ್ಯದರ್ಶಿಗಳಾಗಿ ಶಿವಶಂಕರ್, ದಿಲೀಪ್,ದೇವರಾಜ್, ಅಶೋಕ್ ಕಲ್ಯಾಡಿ, ರಾಜ್ಯ ಸಮಿತಿ ಸದಸ್ಯರಾಗಿ ಆರ್.ಎಸ್.ಪ್ರಸನ್ನಕುಮಾರ್, ಜಿಲ್ಲಾ ಸಮಿತಿ ಸದಸ್ಯರಾಗಿ ಜಾಫರ್ ಆಲಿ, ಸಿದ್ದೇಗೌಡ, ಸಿ.ಎಸ್.ಪ್ರಕಾಶ್, ಎಂ.ಎ.ನಾಗರಾಜ್, ಯುವ ಘಟಕದ ಅಧ್ಯಕ್ಷ ಅಶ್ವಥ್, ಪ್ರಧಾನ ಕಾರ್ಯದರ್ಶಿ ಈಶ್ವರಪ್ರಸಾದ್ ಯುವ ಘಟಕದ ಜಿಲ್ಲಾ ಸಮಿತಿ ಸದಸ್ಯ ಹಳೇಬೀಡು ದಿಲೀಪ್ ಅವರನ್ನು ನೇಮಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.