ವಿಜಯಕುಮಾರ್ ದಿಂಡಿಗನೂರು ಕೃಷಿ ಸಹಕಾರ ಸಂಘದ ಅಧ್ಯಕ್ಷ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ನುಗ್ಗೇಹಳ್ಳಿ ಹೋಬಳಿ ಸಮೀಪದ ದಿಂಡಿಗನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ. ಎಸ್. ವಿಜಯ್ಕುಮಾರ್ ಅವರನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಒಟ್ಟು 10 ನಿರ್ದೇಶಕರ ಸ್ಥಾನದಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಒಬ್ಬ ನಿರ್ದೇಶಕರನ್ನು ಸಾಲಗಾರರ ಕ್ಷೇತ್ರದಿಂದ 9 ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ದಿಂಡಿಗನೂರಿನ ಡಿ.ಎಸ್.ವಿಜಯ್ಕುಮಾರ್, ಬಸವರಾಜು, ಜಯಲಕ್ಷ್ಮಮ್ಮ, ನಂಜಯ್ಯ ಹಾಗೂ ಶೆಟ್ಟಿಹಳ್ಳಿ ಗುರುವೇಗೌಡ, ಜೋಗಿಪುರದ ಪ್ರಕಾಶ್, ಕುಮಾರ್, ಚಿಕ್ಕಗೊಂಡನಹಳ್ಳಿ ಕೆಂಪಮ್ಮ, ಅರಳಾಪುರ ಸುಬ್ಬೇಗೌಡ ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಗೊಂದಲವಾಗಿ ಮತ್ತೆ ನಡೆದ ಮರು ಎಣಿಕೆಯಲ್ಲಿ ಅರಳಾಪುರದ ಮಂಜೇಗೌಡ ಅವರು ದಿಂಡಿಗನೂರಿನ ರಂಗಪ್ಪರನ್ನು 3 ಮತಗಳಿಂದ ಸೋಲಿಸಿದ್ದರು. ಚುನಾವಣಾಧಿಕಾರಿಯಾಗಿ ಆಶಾ, ರಾಜೇಗೌಡ, ಅಭಿಲಾಷ್, ಉಮಾದೇವಿ ಹಾಗೂ ಗ್ರಾಮಸ್ಥರು ಇದ್ದರು.