ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಿವಪ್ಪಗೆ ಟಿಕೆಟ್ ನೀಡದಿದ್ದರೆ ಚುನಾವಣೆ ಬಹಿಷ್ಕಾರ

Srinivasa Murthy VN
Updated On : 10 Mar 2014, 1:15 am

ಹಾಸನ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಸನದಿಂದ ಬಿ.ಬಿ. ಶಿವಪ್ಪರನ್ನು ಕಣಕ್ಕಿಳಿಸುವಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದುಪರ ಸಂಘಟನೆಯ ಮುಖಂಡರು ಭಾನುವಾರ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಲ್ಲಿ ಮನವಿ ಮಾಡಿದರು.
ಬಿ.ಬಿ. ಶಿವಪ್ಪನವರ ಸ್ವಗ್ರಾಮ ಕುಂಬ್ರಹಳ್ಳಿಗೆ ಶೆಟ್ಟರ್ ಆಗಮಿಸಿದಾಗ ಮನವಿ ನೀಡಿದ ಕಾರ್ಯಕರ್ತರು, 2 ದಿನಗಳಲ್ಲಿ ಟಿಕೆಟ್ ಪ್ರಕಟಿಸದಿದ್ದರೆ, ಚುನಾವಣೆ ಬಹಿಷ್ಕರಿಸಿ, ಬೆಂಗಳೂರಿನ ಪಕ್ಷದ ಕಚೇರಿ ಬಳಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿವಪ್ಪನವರು ಪಕ್ಷವನ್ನು ಕಟ್ಟಿ ಬೆಳೆಸಿದ್ದು, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷರಾಗಿ ಹಾಗೂ ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ರಾಜ್ಯದಲ್ಲಿ ವಾಜಪೇಯಿ ಎಂದೆ ಗುರುತಿಸಿಲಾಗುತ್ತಿದೆ. ಇಂತಹ ವ್ಯಕ್ತಿತ್ವ ಹೊಂದಿರುವ ಶಿವಪ್ಪನವರಿಗೆ ಈ ವೇಳೆಗೆ ಟಿಕೆಟ್ ನೀಡ ಬೇಕಿತ್ತು. ಆದರೆ ಹಿರಿಯ ರಾಜಕಾರಣಿಯ ಸ್ಪರ್ಧೆಗೆ ಇವರ ಗರಡಿಯಲ್ಲೆ ಬೆಳದಿರುವ ವ್ಯಕ್ತಿಗಳೇ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್, ಕಟ್ಟಾಯ ಶಿವಕುಮಾರ್, ಹೊಂಗಡಹಳ್ಳ ಧರ್ಮರಾಜ್, ನಾಗೇಶ್, ವಿಜಯಕುಮಾರ್ ಹಾಗೂ ನೂರಾರು ಮುಖಂಡರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement