ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಾಸನ, ಸಕಲೇಶಪುರ ತಾಲೂಕಿನಲ್ಲಿ ಗುಡುಗು ಸಹಿತ ಮಳೆ

Srinivasa Murthy VN
Updated On : 10 Mar 2014, 1:15 am

ಹಾಸನ: ಜಿಲ್ಲೆಯ ಹಲವೆಡೆ ಭಾನುವಾರ ಭಾರಿ ಗುಡುಗು ಸಹಿತ ಮಳೆಯಾಗಿದೆ. ಹಾಸನ, ಸಕಲೇಶಪುರ, ಬೇಲೂರು, ಆಲೂರು ತಾಲೂಕುಗಳಲ್ಲದೇ ಅನೇಕ ಕಡೆ ಮಳೆಯಾಗಿದೆ. ಸಂಜೆ 6.30 ರ ನಂತರ ಆಕಾಶದಲ್ಲಿ ದಟ್ಟನೆ ಮೋಡ ಮೇಳೈಸುತ್ತಿದ್ದಂತೆ ಮಿಂಚು, ಗುಡುಗುಗಳ ಆರ್ಭಟದ ನಡುವೆ ಸುರಿದ ಮಳೆ ಭೂಮಿಗೆ ತಂಪೆರೆಯಿತು.
ಸಕಲೇಶಪುರ ತಾ.ನಲ್ಲಿ ಗಂಟೆಗೂ ಹೆಚ್ಚು ಕಾಲ ಮಳೆ: ಸಕಲೇಶಪುರ ತಾಲೂಕಿನ ಅಲ್ಲಲ್ಲಿ ಭಾನುವಾರ ಗಂಟೆಗೂ ಹೆಚ್ಚು ಕಾಲ ಮುಂಗಾರು ಮಳೆ ಸುರಿದಿದೆ. ಇದರಿಂದ ಕಾಫಿ ಬೆಳೆಗಾರರ ಆತಂಕ ಕಡಿಮೆಯಾಗಿದೆ. ಕಾಫಿ ಕೊಯಿಲು ಮುಗಿದ ನಂತರ ಕಾಫಿ ಗಿಡಗಳು ಹೂವು ಮೂಡಲು ಮಳೆ ಅಗತ್ಯವಿದ್ದು, ಮಳೆ ವಿಳಂಬವಾದ ಕಾರಣ ತುಂತುರು ನೀರಾವರಿ ಮೊರೆ ಹೋಗಿದ್ದ ಕಾಫಿ ಬೆಳೆಗಾರರು ಕೋಟ್ಯಂತರ ಹಣವನ್ನು ತುಂತುರು ನೀರಾವರಿಗಾಗಿ ಖರ್ಚು ಮಾಡಿದ್ದರು. ಆದರೆ ಮಧ್ಯಮ ಹಾಗೂ  ಸಣ್ಣ ಕಾಫಿ ಬೆಳೆಗಾರರಿಗೆ ನೀರಿನ ಸೌಲಭ್ಯವಿಲ್ಲದ ಕಾರಣ ಮಳೆಗಾಗಿ ಕಾದಿದ್ದು ಮಳೆಯ ಆಗಮನವಿಲ್ಲದೆ ಕಂಗಾಲಾಗಿದ್ದರು. ಹಾನುಬಾಳ್ ಹೋಬಳಿಯಲ್ಲಿ ಮಳೆಯಾಗಿದ್ದರೆ, ಭಾನುವಾರ  ಮಳೆಯಾಗಿರುವುದರಿಂದಾಗಿ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.
ಸಿಡಿಲಿಗೆ ಹಸು ಬಲಿ: ಸಿಡಿಲು ಬಡಿದು ಹಸುವೊಂದು ಮೃತಪಟ್ಟ ಪಟ್ಟ ಘಟನೆ  ಹೆತ್ತೂರು ಗ್ರಾಮ ಸಮೀಪದ ದಿಣ್ಣೇಕೆರೆ ಕಾಫಿ ಎಸ್ಟೇಟ್‌ನಲ್ಲಿ ಭಾನುವಾರ ನಡೆದಿದೆ. ಗ್ರಾಮದ ರವಿ ಎಂಬುವವರಿಗೆ ಸೇರಿದ ಸುಮಾರು 20 ಸಾವಿರ ಬೆಲೆಯ ಹಸುವನ್ನು ಮೇಯಲು ಕಟ್ಟಿದ್ದ ವೇಳೆ ಈ ಘಟನೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement