17ರಿಂದ ಕೋಡಿಮಠ ಮಹದೇಶ್ವರ ಜಾತ್ರೆ
ಮೂರು ದಿನಗಳ ಉತ್ಸವ; ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ಸೇರಿದಂತೆ ಹಲವು ಕಾರ್ಯಕ್ರಮ
ಹಾಸನ: ತಾಲ್ಲೋಕಿನ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದಲ್ಲಿ ಮಾ.17,18 ಹಾಗೂ 19 ರಂದು ಮೂರು ದಿನಗಳವರೆಗೆ ಶ್ರೀ ಮಹದೇಶ್ವರ ಜಾತ್ರ ಮಹೋತ್ಸವ ನಡೆಯಲಿದೆ ಎಂದು ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಜಿ ತಿಳಿಸಿದ್ದಾರೆ.
ಮಾ. 17ರಂದು ಸೋಮವಾರ ಹುಣ್ಣಿಮೆಕಟ್ಟಳೆ, ಬೆಳಿಗ್ಗೆ ಜಗದ್ಗುರು ಜಂಗಮ ಮಾಹಾಪೂಜೆ, ಸುಕ್ಷೇತ್ರ ಕೋಡಿಮಠ ಪೀಠ ಅಲಂಕರಿಸಿದ 55 ಪೂಜ್ಯ ಜಂಗಮವರ್ಯರ ದಿವ್ಯ ಸ್ಮರಣಾರ್ಥ ಕರ್ತ ಗದ್ದುಗೆ ಮಹಾಪೂಜೆ, ಧ್ವಜಾರೋಹಣ ಸಿಂಹಾಸನಪೂಜೆ, ರಜತಪಲ್ಲಕಿ ಪೂಜೆ, 1101 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ.ಬೆಳ್ಳಿಗೆ 10.30ಕ್ಕೆ ಸಭೆ ಕಾರ್ಯಕ್ರಮದಲ್ಲಿ ಹಾನಗಲ್ ತಾಲ್ಲೂಕು ಬೊಮ್ಮ್ಮನಹಳ್ಳಿ ಶ್ರೀವಿರಕ್ತಮಠದ ಶ್ರೀಶಿವಯೋಗಿ ಮಹಾಸ್ವಾಮಿಗಳ ಪಟ್ಟಾಧಿಕಾರದ ಹದಿನೈದನೇ ಮಹೋತ್ಸವದ ಅಂಗವಾಗಿ ಪೂಜ್ಯರಿಗೆ ಅಭಿನಂದನಾಪೂರ್ವಕ ಗೌರವ ಸಮರ್ಪಣೆ,ಗದಗ ಅಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮ ತಾಯಿ ಅಸುಂಡಿ ಯವರು ಧರ್ಮ ಪ್ರವಚನ ನೀಡಲಿದ್ದಾರೆ.
ಅಭಿನಂದನಾಪೂರ್ವಕ ಸಂಧಾನ: ಮಾ. 18ರಂದು ಮಂಗಳವಾರ ಬೆಳಗ್ಗೆ ಮಠದಲ್ಲಿ ವೇದಮೂರ್ತಿ ನೀಲಕಂಠಯ್ಯ, ಶಿವಲಿಂಗಮೂರ್ತಿ ಇವರಿಂದ ಪುರಾಣ ಶ್ರವಣಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಿನಿಡಸೂಸಿಯ ಸಿದ್ಧಸಂಸ್ಥಾನಮಠ ಶ್ರೀಜಗದ್ಗುರು ಪಂಚಮ ಶಿವಲಿಂಗೇಶ್ವರ ಮಾಹಸ್ವಾಮಿಗಳು ಇವರು ದಿವ್ಯ ಸಾನಿಧ್ಯ ವಹಿಸಲ್ಲಿದು ಬೆಳಗಾಂ ಜಿಲ್ಲೆಚಿಕ್ಕೋಡಿಯ ಸಂಪಾದನ ಚರಮೂರ್ತಿ ಮಠದ ಶ್ರೀಸಂಪಾದನ ಮಹಾಸ್ವಾಮಿಗಳು ಅಧ್ಯಕ್ಷತೆಯಲ್ಲಿ ಹಿರೇಮಠದ ಶ್ರೀಮಹಾಂತಲಿಂಗ ಶಿವಾಚಾರ್ಯಮಹಾಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ, ವಿರಕ್ತಮಠ ಶ್ರೀ ಶಿವಯೋಗಿ ಸ್ವಾಮಿಗಳು, ಮಳೆಮಠದ ಶ್ರೀಮಹಾಂತದೇಶೀಕೇಂದ್ರ ಸ್ವಾಮಿಗಳು,ಅಕ್ಕಿಆಲೂರು ವಿರಕ್ತಮಠದ ಶಿವ ಬಸವಸ್ವಾಮಿಗಳು,ಗುಲಗಂಜಿ ಮಠದ ಶ್ರೀಗುರುಪಾದಸ್ವಾಮಿಗಳಉಪಸ್ಥಿತಿಯಲ್ಲಿ ಅಡವಿ ಸಿದ್ಧೇಶ್ವರ ಮಠದ ಶ್ರೀ ನಿರುಪಾದಿಮಹಾಸ್ವಾಮಿಜೀ ಯವರೀಗೆ ಅಭಿನಂದನಾಪೂರ್ವಕ ಸನ್ಮಾನ ನಡೆಯಲಿದೆ.
ಸಂಗೀತ ಕಾರ್ಯಕ್ರಮ: ಆಕಾಶ್ ಕೋಕಿಲ್ ಸಂಗಡಿಗರಿಂದ ಲಘುಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಾ. 19 ಬುಧವಾರ ಬೆಳಿಗ್ಗೆ 6.30ಕ್ಕೆ ಶ್ರೀ ಶಿವಲಿಂಗಮಹಾಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ ಸಹಸ್ರಬಿಲ್ವಾರ್ಚನೆಪೂಜೆ ನಡೆಯಲಿದ್ದು, ಶ್ರೀ ಮಠದಪದ್ದತಿಯಂತೆ ಶ್ರೀಶಿವಾನಂದ ಶಿಯೋಗಿರಾಜೇದ್ರ ಮಹಾ ಸ್ವಾಮಿಗಳ ಪಲ್ಲಕಿ ಉತ್ಸವ ಹಾರನಹಳ್ಳಿಪುರ ಪ್ರವೇಶ ನಂತರ ಮಹದೇಶ್ವರ ಬೆಟ್ಟದಲ್ಲಿ ಮಧ್ಯಾಹ್ನ 12ಕ್ಕೆ ಗುಗ್ಗಳ ಸೇವೆ, ಹೆಜ್ಜೆ ನಮಸ್ಕಾರ, ಡಿಂಡುರುಳುಸೇವೆ, ಜಂಗಮಪೂಜೆ ಮತ್ತೈದೆ ಸೇವೆ ಮಹಾದಾಸೋಹ ಏರ್ಪಡಿಸಲಾಗಿದೆ.
ಅಂದು ಸಂಜೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗಾಂ ಜಿಲ್ಲಾ ನಿಡಸೂಸಿಯ ಸಿದ್ಧಸಂಸ್ಧಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು ಹಾವೇರಿ ಜಿಲ್ಲೆ ಹುಕ್ಕೇರಿ ಮಠದ ಶ್ರೀಮನನ್ನಿರಂಜನ ಜಗದ್ಗುರು ಸದಾಶಿವ ಸ್ವಾಮೀಜಿ, ದೊಡ್ಡಮೇಟಿಕುರ್ಕೆ ವಿರಕ್ತ ಮಠದ ಶ್ರೀ ರಾಜಶೇಖರ ಮಹಾಸ್ವಾಮೀಜಿ, ಮೂರು ಕಳಶ ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಹೊನ್ನವಳ್ಳಿಯ ಶ್ರೀ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮೀಜಿ ಕರಡಿಗವಿಮಠದ ಶ್ರೀ ಶಂಕರಾನಂದಾ ಮಹಾಸ್ವಾಮಿಗಳು ಮಡಾಳು ಶ್ರೀ ರುದ್ರಮನಿ ಮಹಾಸ್ವಾಮಿಜಿ ಕೋಳುಗುಂದದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮಿಜೀ, ಕೆ. ಬಿದರೆ ಶ್ರೀ ಪ್ರಭುಕುಮಾರ್ ಸ್ವಾಮಿಜೀ, ದೊಡ್ಡಗುಣಿಯ ಶ್ರೀ ರೇವಣ ಸಿದ್ದೇಶ್ವರ ಶಿವಚಾರ್ಯ ಸ್ವಾಮೀಜಿ, ಕತ್ರಿಘಟ್ಟದ ಶ್ರೀ ಚಂದ್ರಶೇಖರ ಗುರುಜೀ ಉಪಸ್ಥಿತಿಯಲ್ಲಿ ಪ್ರಾಸ್ತಾವಿಕ ನುಡಿಯನ್ನು ಕೋಡಿಮಠದ ಉತ್ತಾರಾಧಿಕಾರಿಗಳಾದ ಚೇತನ್ ಮರಿದೇವರು ನೇರವೇರಿಸಲಿದ್ದಾರೆ.
ರಾತ್ರಿ 10 ಘಂಟೆಗೆ ಬೆಂಗಳೂರಿನ ಶ್ರೀ ಜಯಶ್ರೀರಾಜು ಮತ್ತು ಕಲಾತಂಡದಿಂದ ಚನ್ನಪ್ಪ ಚನ್ನೆಗೌಡ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಮಹದೇಶ್ವರ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಮಠದ ಆಡಳಿತಾಧಿಕಾರಿಗಳು ಇದೇ ವೇಳೆ ಮನವಿ ಮಾಡಿದ್ದಾರೆ.
ತಾಲ್ಲೋಕಿನ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದಲ್ಲಿ ಮಾ.17,18 ಹಾಗೂ 19 ರಂದು ಮೂರು ದಿನಗಳವರೆಗೆ ಶ್ರೀ ಮಹದೇಶ್ವರ ಜಾತ್ರ ಮಹೋತ್ಸವ ನಡೆಯಲಿದೆ
-ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಜಿ