ಅತಿರುದ್ರ, ಶತ ಚಂಡಿಕಾ ಮಹಾಯಾಗ
ರಾಮನಾಥಪುರ: ಸಂಗೀತ ಗ್ರಾಮ ರುದ್ರಪಟ್ಟಣ ಕಾವೇರಿ ನದಿ ತಟದಲ್ಲಿ ಅತಿರುದ್ರ ಮಹಾಯಾಗವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಅಭಿನವ ಜಯಚಾಮರಾಜೇಂದ್ರ ಒಡೆಯರ್ ಅವರ ಮಾರ್ಗದರ್ಶನದಲ್ಲಿ ನಡೆದ ಅತಿರುದ್ರ- ಶತ ಚಂಡಿಕಾ ಮಹಾಯಾಗದಲ್ಲಿ ಮೈಸೂರು ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್, ರಾಷ್ಟ್ರಪತಿ ಬಿಡಿ ಜತ್ತಿ, ವಿದ್ವಾನ್.ಎನ್. ಕೃಷ್ಣಪ್ಪ ಸೇರಿದಂತೆ ಹಲವು ಮಹಾನ್ ನಾಯಕರು ಭಾಗವಹಿಸಿದ್ದರು. ಇತ್ತೀಚಗೆ ನಿಧನರಾದ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ರತ್ನ ರುದ್ರಪಟ್ಟಣದ ಆರ್.ಕೆ. ಶ್ರೀಕಂಠನ್ ಸಹೋದರ ಖ್ಯಾತ ಪಿಟೀಲು ನಿದ್ವಾನ್ ದಿವಂಗತ ಅರ್.ಕೆ. ವೆಂಕಟರಾಮ ಶಾಸ್ತ್ರಿಗಳ ನೇತೃತ್ವದಲ್ಲಿ ಅಷ್ಟಗ್ರಹ ಕೂಟಗಳ ಶಾಂತಿಗಾಗಿ ಪ್ರಾರ್ಥಿಸಿ, 1961 ಮಾರ್ಚ್ನಲ್ಲಿ ಅತಿರುದ್ರ- ಶತ ಚಂಡಿಕಾ ಮಹಾಯಾಗ ಹಮ್ಮಿಕೊಳ್ಳಲಾಗಿತ್ತು. ಅದಾದ 53 ವರ್ಷಗಳ ನಂತರ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿಯವರ ಪ್ರೇರಣೆ ಮೇರೆಗೆ ರಾಮನಾಥಪುರ ರಾಮೇಶ್ವರ ಸನ್ನಿದಿಯಲ್ಲಿ ನಡೆಯುತ್ತಿರುವ ಅತಿರುದ್ರ- ಶತ ಚಂಡಿಕಾ ಮಹಾಯಾಗ ಇದಾಗಿದೆ.
ಪಶು ವೈದ್ಯಶಾಲೆ ವಸತಿಗೃಹಕ್ಕೆ ಬೆಂಕಿ; ಪೀಠೋಪಕರಣ ಭಸ್ಮ
ಸಕಲೇಶಪುರ: ಪಶುವೈದ್ಯ ಶಾಲೆಯ ವಸತಿ ಗೃಹದಲ್ಲಿ ವಿದ್ಯುತ್ ಅವಘಡ ಸಂಭವಿಸಿ ವಸತಿ ನಿಲಯದ ವಸ್ತುಗಳು ಭಸ್ಮಗೊಂಡ ಘಟನೆ ಸೋಮವಾರ ನಡೆದಿದೆ. ಪಟ್ಟಣದ ಹೆದ್ದಾರಿಗೆ ಹೊಂದಿಕೊಂಡಿರುವ ವಸತಿ ನಿಲಯದಲ್ಲಿ ಯಾರು ಇಲ್ಲದ ವೇಳೆ ವಿದ್ಯುತ್ ಅವಘಡ ಸಂಭವಿಸಿದ್ದರಿಂದಾಗಿ ವಸತಿನಿಲಯದಲ್ಲಿದ್ದ ಪೀಠೋಪಕರಣಗಳು ಹಾಗೂ ನಿಲಯದ ಮೇಲ್ಚಾವಣಿ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಸ್ಥಳದಲ್ಲಿದ್ದ ಸ್ಥಳೀಯರು ವಸತಿ ನಿಲಯದಲ್ಲಿದ್ದ ಸಿಲಿಂಡರ್ ಸೇರಿದಂತೆ ಕೆಲವು ಪೀಟೋಪಕರಣಗಳನ್ನು ಹೊರ ತಂದು ಬೆಂಕಿಗೆ ನೀರು ಹಾಕಿ ನಂದಿಸಲು ಪ್ರಯತ್ನ ನಡೆಸಿದ ಪರಿಣಾಮ ಬೆಂಕಿ ಇತರೆ ಕಟ್ಟಡಗಳಿಗೆ ಹರಡುವುದು ತಪ್ಪಿದಂತಾಗಿದೆ.