ದೇವಾಲಯ ಅಭಿವೃದ್ಧಿಗೆ ರುಡ್ಸೆಟ್ನಿಂದ ರು. 1 ಲಕ್ಷ ದೇಣಿಗೆ
ಜಾವಗಲ್: ಹೋಬಳಿ ಕಲ್ಯಾಡಿ ಗ್ರಾಮದ ಖಂಡಿ ಭೈರವೇಶ್ವರ ದೇವಾಲಯ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ರು. 1 ಲಕ್ಷ ಮೊತ್ತದ ಚೆಕ್ ನೀಡಲಾಯಿತು.
ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವೇದಿಕೆ ವತಿಯಿಂದ ಅಂತಿಮ ಬಿಎ ವಿದ್ಯಾರ್ಥಿಗಳನ್ನು ಜಾವಗಲ್ ಗ್ರಾಮ ಪಂಚಾಯ್ತಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳಿಗೆ ಮಾಹಿತಿ: ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಮಂಜುನಾಥ್ ಹಾಗೂ ಪಿಡಿಒ ವಿರೂಪಾಕ್ಷಪ್ಪ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಪಿಡಿಒ ವಿರೂಪಾಕ್ಷಪ್ಪ, ಗ್ರಾಪಂ ರಚನೆಯನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಲಾಗುವುದು. ವಾರ್ಡ್ಗಳ ರಚನೆ, ಸದಸ್ಯರ ಸಂಖ್ಯೆ, ಚುನಾವಣೆ, ಅಧ್ಯಕ್ಷ ಉಪಾಧ್ಯಕ್ಷರ ಅಯ್ಕೆ ಗ್ರಾಮಪಂಚಾಯ್ತಿಯ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಗ್ರಾಮದ ಎಲ್ಲಾ ಜನತೆಗೂ ಕುಡಿಯುವ ನೀರಿನ ಸೌಲಭ್ಯ, ಬೀದಿ ದೀಪದ ವ್ಯವಸ್ಥೆ, ಗ್ರಾಮದ ನೈರ್ಮಲ್ಯ ಕಾಪಾಡುವುದು ಗ್ರಾಮ ಪಂಚಾಯ್ತಿಯ ಆದ್ಯ ಕರ್ತವ್ಯ ಎಂದರು. ತೆರಿಗೆ ವಸೂಲಾತಿ, ಖಾತೆ ಬದಲಾವಣೆ, ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿವಿರ ನೀಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ. ಸತೀಶ್, ಪುಟ್ಟಸ್ವಾಮಿಗೌಡ, ಎಸ್.ಎಂ. ಶಿವಶಂಕರ ಮೂರ್ತಿ, ಜೆ.ಎಸ್. ದಯಾನಂದ ಹಾಗೂ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉತ್ಸವ ಮೂರ್ತಿಗಳ ಪ್ರದಕ್ಷಿಣೆ
ರಾಮನಾಥಪುರ: ರಾಮನಾಥಪುರದಲ್ಲಿ ಶ್ರೀ ಅತಿರುದ್ರ ಮಹಾಯಾಗ ಹಾಗೂ ಶ್ರೀ ಶತಚಂಡಿಕಾಯಾಗದ 5ನೇ ದಿವಸದ ಭಾನುವಾರ ವೇ. ಲಕ್ಷೀನಾರಾಯಣ ಅವಧಾನಿಗಳು, ವೇ. ವೆಂಕಟೇಶ ಅವಧಾನಿಗಳು, ವೇ. ಸುಬ್ಬಕೃಷ್ಣ ದೀಕ್ಷೀತರು, ಮಾದಪುರದ ಶ್ರೀ ಸುಬ್ರಹ್ಮಣ್ಯ ಅವಧಾನಿಗಳ ನೇತೃತ್ವದಲ್ಲಿ ಶ್ರೀ ಸುದರ್ಶನ ಮಂತ್ರ ಜಪ, ಮಹಾ ಸುದರ್ಶನ ಹೋಮ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಜರುಗಿತು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಅತಿರುದ್ರ ಮಹಾಯಾಗದ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.