ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಕ್ತದಾನ ಆರೋಗ್ಯಕ್ಕೆ ಒಳ್ಳೆಯದು: ದೇವದಾಸ್

Srinivasa Murthy VN
Updated On : 14 Mar 2014, 12:27 pm

ಹಾಸನ: ರಕ್ತ ಪರೀಕ್ಷೆ ಮತ್ತು ದಾನ ಮಾಡುವುದು ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಯಾರಾದರೂ ಕೇಳಿಕೊಂಡು ಬಂದರೆ ಅವರಿಗೆ ಹೊಂದಿಕೊಳ್ಳುವಂಥ ರಕ್ತ ನೀಡಿ ಸೇವಾ ಮನೋಭಾವನೆ ಬೆಳಸಿಕೊಳ್ಳಬೇಕು ಎಂದು ಡಾ ದೇವದಾಸ್ ಹೇಳಿದ್ದಾರೆ.
ಅವರು ನಗರದ ಎನ್.ಡಿ.ಆರ್.ಕೆ ಪ್ರಥಮ ದರ್ಜೆ ಕಾಲೇಜು, ರೆಡ್ ರಿಬ್ಬನ್ ಕ್ಲಬ್, ಯುವ ರೆಡ್ ಕ್ರಾಸ್ ಘಟಕ, ರಾ.ಸೇ.ಯೋ.ಘಟಕಗಳು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಘಟಕ ಮತ್ತು ಹಾಸನ ರಕ್ತನಿಧಿ ವಿಭಾಗದ ಸಹಯೋಗದೊಂದಿಗೆ ಇತ್ತೀಚೆಗೆ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ. ಶಾಮಭಟ್ ಮಾತನಾಡಿ, ರಕ್ತದಾನ ಅತಿ ಶ್ರೇಷ್ಠವಾದದ್ದು. ಪ್ರತಿಯೊಬ್ಬರೂ ರಕ್ತಗುಂಪು ಪರೀಕ್ಷೆ ಮಾಡಿಸಿ, ರಕ್ತದಾನ ಮಾಡುವುದು ಅತ್ಯವಶ್ಯವೆಂದು ತಿಳಿಸಿದರು.  ಈ ಸಂದರ್ಭದಲ್ಲಿ, 58 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ಟಿ.ಎನ್. ನಾಗರಾಜು ರಕ್ತದಾನ ಮಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಎಚ್.ಕೆ. ಜಯರಾಮು, ಎಚ್. ಎಸ್. ನಿಂಗಪ್ಪ, ರೆಡ್‌ಕ್ರಾಸ್ ಸಂಸ್ಥೆಯ ಸಂಚಾಲಕ ಎಚ್.ಎಸ್. ಪರಮೇಶ್ವರಪ್ಪ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಘಟಕದ ಮುಖ್ಯಸ್ಥ ಜಯಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement