ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಕುಚಿತ ಭಾವನೆ ಬಿಟ್ಟು ಸೇವೆ ಸಲ್ಲಿಸಿ

Srinivasa Murthy VN
Updated On : 14 Mar 2014, 12:32 pm

ಹಾಸನ: ಪೊಲೀಸ್ ಕಾನ್ಸ್‌ಟೇಬಲ್ ಎಂಬ ಭಾವನೆಗೊಳಗಾಗದೆ ಶಿಸ್ತಿನಿಂದ ಸೇವೆ ಸಲ್ಲಿಸಬೇಕು ಎಂದು ಬೆಂಗಳೂರು ಪೊಲೀಸ್ ಮಹಾ ನಿರ್ದೇಶಕ ಸುಶಾಂತ್ ಮಹಾಪಾತ್ರ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, 1ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪೊಲೀಸ್ ಸೇವೆ ಇತರೆ ಸೇವೆಗಿಂತ ಅತ್ಯುತ್ತಮ ಸೇವೆಯಾಗಿದ್ದು, ಸಾರ್ವಜನಿಕರ ಸೇವೆಗೆ ಪೊಲೀಸರು ಸಮಸ್ಯೆಗಳನ್ನು ಎದುರಿಸಲು ಸದಾ ಸಿದ್ಧರಾಗಿರಬೇಕು. ಕ್ಷಿಷ್ಟಕರ ಸಂದರ್ಭದಲ್ಲಿಯೂ ಧೈರ್ಯ, ಸಾಹಸದಿಂದ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೂಕ್ಷ್ಮವಾಗಿ ಪರಿಗಣಿಸಬೇಕು: ಉತ್ತಮ ತರಬೇತಿ ಪಡೆದವರು ಸಮಾಜದ ಒಳಗೆ ಸಮಸ್ಯೆ ಎದುರಿಸಬಹುದು. ಆದರೆ ತಾನು ಪೊಲೀಸ್ ಕಾನ್ಸ್‌ಟೇಬಲ್ ಎಂಬ ಭಾವನೆಗೊಳಗಾಗದೆ ಶ್ರದ್ಧೆ ಮತ್ತು ಶಿಸ್ತಿನಿಂದ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಪೊಲೀಸ್ ಸೇವೆ ಉತ್ತಮವಾದದ್ದೆಂಬ ಹೆಮ್ಮೆ ಹೊಂದಬೇಕು ಎಂದು ಕಿವಿಮಾತು ಹೇಳಿದರು. ಪ್ರಸ್ತುತ ಕ್ರೈಂ ಮತ್ತು ನಕ್ಸಲ್ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದು, ಅಂಥ ವಿಷಯಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು ಎಂದರು.
ಪ್ರತಿಜ್ಞಾವಿಧಿ ನೆನಪಿಟ್ಟುಕೊಳ್ಳಬೇಕು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಉದ್ಯೋಗ ಹುಡುಕಾಟದ ಸಂದರ್ಭದಲ್ಲಿ ಈ ಪೊಲೀಸ್ ಸೇವೆಗೆ ಬಂದು ಸೇರಿಕೊಳ್ಳುತ್ತಾರೆ. ಮನುಷ್ಯನಾದವನಿಗೆ ಸಮಸ್ಯೆ ಬಂದಾಗ ಮೊದಲು ಇಲಾಖೆಯನ್ನು ನೆನಪಿಸಿಕೊಳ್ಳುತ್ತಾರೆ. ಆದ್ದರಿಂದ ಪೊಲೀಸರು ನಿರ್ವಹಿಸುವ ಸೇವೆಯಲ್ಲಿ ಶದ್ಧೆ ಮತ್ತು ಶಿಸ್ತು ಇರಬೇಕು.
ತಮ್ಮ ಸೇವೆಯಲ್ಲಿ ಯಾವ ಲೋಪ ಬರದ ಆಗೇ ತಾವು ಮಾಡಿದ ಪ್ರತಿಜ್ಞಾವಿಧಿಯನ್ನು ನೆನಪಿಸಿಕೊಂಡು ಕೆಲಸ ಮಾಡಬೇಕು ಎಂದರು.
ಐಶರಾಮಿ ಬದುಕಿಗೆ ಪೊಲೀಸ್ ಇಲಾಖೆ ತಕ್ಕದಲ್ಲ ಎಂದ ಅವರು, ತಮ್ಮ ಕೆಲಸದಲ್ಲಿ ಆತ್ಮವಿಶ್ವಾಸ ಇಟ್ಟುಕೊಂಡು ಸೇವೆ ಸಲ್ಲಿಸುವ ಮೂಲಕ ಅಪರಾಧವನ್ನು ನಿಯಂತ್ರಿಸಿ ನೊಂದವರಿಗೆ ಧ್ವನಿಯಾಗಿ ಕೆಲಸ ಮಾಡುವಂತೆ ಅವರು ಕರೆ ನೀಡಿದರು. ತರಬೇತಿ ವೇಳೆ ಅತ್ಯುತ್ತಮವಾಗಿ ನಿರ್ವಹಿಸಿದವರಿಗೆ ಬಹುಮಾನ ವಿತರಿಸಿ ಪ್ರೋತ್ಸಹಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿ ಜೆ.ಕೆ. ರಶ್ಮಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement