ಅಂಗವಿಕಲರ ಸಾಧನೆ
ಹಾಸನ: ಮೈಸೂರು ಪರಿವರ್ತನಂ ಟ್ರಸ್ಟ್ ಆಯೋಜಿಸಿದ್ದ ಕರ್ನಾಟಕ ಸ್ಪೋರ್ಡ್ ಮತ್ತು ಅಸೋಶಿಯೇಷನ್ ಫಾರ್ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ಸ್ಪರ್ಧೆಯಲ್ಲಿ ಗಂಡಸಿಯ ಸಿದ್ದಗಂಗಮ್ಮ ಎಚ್. ಎಚ್. ಗುಂಡು ಎಸೆತ, ಡಿಸ್ಕಸ್ ಥ್ರೋ, ಜಾವಲಿನ್ ತ್ರೋ ವಿಭಾಗಗಳಲ್ಲಿ ಪ್ರಥಮ, 100 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಅರೆಕಲ್ ಹೊಸಳ್ಳಿ ವೆಂಕಟೇಶ್ ಕುಮಾರ್ ಇವರು ಶಾರ್ಟ್ ಪುಟ್ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಬಿ.ವಿ. ಚಂದ್ರಶೇಖರ್ ರಾಜೇಅರಸ್ ತಿಳಿಸಿದ್ದಾರೆ.
ಲಿಂಗ ತಾರತಮ್ಯ ಸಲ್ಲ
ಹಾಸನ: ಸ್ತ್ರೀ-ಪುರುಷರು ಸಮಾನರು. ಇವರಿಬ್ಬರ ನಡುವೆ ಶೋಷಣೆ ಸಲ್ಲದು. ಲಿಂಗ ತಾರತಮ್ಯ ಎಂದಿಗೂ ಮಾಡಬಾರದು ಎಂದು ನಗರದ ಬಿಈಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಚ್.ಎ. ರೇಖಾ ಹೇಳಿದರು.
ಅವರು ಬಿಇಜಿ ಪ್ರಥಮ ದರ್ಜೆ ಕಾಲೇಜಿನ ಬಿಳಿಯಮ್ಮ ಈರೇಗೌಡ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಪುರುಷರ ಮನಸ್ಸಿನಲ್ಲಿ ಬದಲಾವಣೆಯಾದಾಗ ಸ್ತ್ರೀಯರ ಶೋಷಣೆ ನಿಲ್ಲುತ್ತದೆ ಎಂದರು.
ಸಹ ಪ್ರಾಧ್ಯಾಪಕಿ ಡಾ. ಕೆ.ಜಿ. ಕವಿತ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಬಿ.ಈ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಎಚ್.ಜೆ. ರಂಜಿತಾ ಪ್ರಾರ್ಥಿಸಿದರು. ಲಕ್ಷ್ಮೀ ಸ್ವಾಗತಿಸಿದರು.
ಅರಕಲಗೂಡು ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಇಂದು
ಅರಕಲಗೂಡು: ಪಟ್ಟಣದ ಐತಿಹಾಸಿಕ ದೇವಾಲಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ವೈಖಾನಸ ಆಗಮ ರೀತಿಯಲ್ಲಿ ಭಾನುವಾರ ಜರುಗಲಿದೆ.
ಈ ಸಂಬಂಧ ಕಳೆದ ಮೂರು ದಿನಗಳಿಂದ ವಿವಿಧ ರೀತಿಯ ಧಾಮಿಕ ಕಾರ್ಯಕ್ರಮಗಳು ನಡೆದಿದ್ದು,ಭಾನುವಾರ ಬೆಳಿಗ್ಗೆ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡುವ ಮೊದಲು ರಥ ಬೀದಿಗಳಲ್ಲಿ ಕೃಷ್ಣಗಂಧೋತ್ಸವ ನಡೆಯಲಿದೆ. ನಂತರ ರಥಬೀದಿಗಳಲ್ಲಿ, ರಥೋತ್ಸವ ಜರುಗಲಿದೆ.
ಜ್ಞಾನ ದಾನ ಕಾರ್ಯಕ್ರಮ
ಹಾಸನ: ನಗರದ ರಾಯಲ್ ಅಪೋಲೋ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ಜ್ಞಾನ ದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಜೆ. ನವೀನ್, ಕಾರ್ಯದರ್ಶಿ ಮಮತಾ ನವೀನ್ ಜ್ಞಾನಜ್ಯೋತಿಯನ್ನು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನವೀನ್ ಮಾತನಾಡಿ, ಶಿಕ್ಷಣದ ಮೌಲ್ಯಗಳ ಜತೆ ಶಾಲೆಗೆ ಕೀರ್ತಿ ತರುವಂತೆ ಮಕ್ಕಳು ಶ್ರಮಿಸಬೇಕು ಎಂದರು.
ಪ್ರಾಂಶುಪಾಲ ಆರೋಗ್ಯರಾಜ್ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ಉತ್ಸಾಹ ದಿಂದ ಭಾಗವಹಿಸಿದ್ದರು. ಪ್ರಸಕ್ತ ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ನಿಶ್ಚಿತಾ ಎಂ. ಪಡೆದುಕೊಂಡರು. ಇದೇ ಪರಂಪರೆಯನ್ನು ಮುಂದುವರೆಸುವಂತೆ ಒಂಭತ್ತನೇ ತರಗತಿ ವಿದ್ಯಾರ್ಥಿ ವಿನಯ್ಗೆ ಶಾಲಾ ಪತಾಕೆಯನ್ನು ಸಾಂಕೇತಿಕವಾಗಿ ನೀಡಿದರು.
ಪಿಯು ಕಾಲೇಜುಗೆ ಸೂಚನೆ
ಮೈಸೂರು: 2014-15ನೇ ಶೈಕ್ಷಣಿಕ ಸಾಲಿನಲ್ಲಿ ಹೊಸ ಸಂಯೋಜನೆ ಅಥವಾ ಹೆಚ್ಚುವರಿ ವಿಷಯ ಅಥವಾ ಸೆಕ್ಷನ್ಗಳನ್ನು ಪ್ರಾರಂಭಿಸಲು ಆಸಕ್ತಿ ಇರುವ ಜಿಲ್ಲೆಯ ಖಾಸಗಿ ಅನುದಾನಿತ, ಅನುದಾನರಹಿತ ಪಿಯು ಕಾಲೇಜಿನವರು ಅರ್ಜಿ ಸಲ್ಲಿಸಬಹುದು. ಪದವಿಪೂರ್ವ ಶಿಕ್ಷಣ ಇಲಾಖೆ, ನಿರ್ದೇಶನಾಲಯದ ವೆಬ್ಸೈಟ್ ಢಿಢಿಢಿ.ಠ್ಡಜ.್ಞಛ್ಠ.ಟ್ಝ್ಛಿ.್ಝಟಿ ಇಲ್ಲಿಂದ ಏ. 8ರೊಳಗೆ ಅರ್ಜಿ ಪಡೆದು, ಭರ್ತಿ ಮಾಡಿ ಏ. 11ರೊಳಗೆ ಸಲ್ಲಿಸಬಹುದು ಎಂದು ಡಿಡಿಪಿಯು ಕೆ.ಎಂ. ಪುಟ್ಟು ತಿಳಿಸಿದ್ದಾರೆ.
ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರೆ ಏ.4ರಿಂದ
ಮೈಸೂರು: ಜಿಲ್ಲೆಯ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವರ 2014ನೇ ಸಾಲಿನ ದೊಡ್ಡಜಾತ್ರಾ ಮಹೋತ್ಸವವು ಏ. 4ರಿಂದ 15ರವರೆಗೆ ಜರುಗಲಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಹೇಳಿದ್ದಾರೆ. ಏ.11ರ ಬೆಳಗ್ಗೆ 5.20ರಿಂದ ಪಂಚ ಮಹಾರಥೋತ್ಸವ ಹಾಗೂ ಏ.13ರ ಸಂಜೆ 7ರಿಂದ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಈ ಸಾಲಿನ ಶ್ರೀಕಂಠೇಶ್ವರಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕೆಂದು ಅವರು ತಿಳಿಸಿದ್ದಾರೆ.
ತರಕಾರಿ ಗಿಡ ಬೆಳೆಸುವ ಬಗ್ಗೆ ತರಬೇತಿ
ಮೈಸೂರು: ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ ಕೈತೋಟ, ಕುಂಡಗಳಲ್ಲಿ ತರಕಾರಿ ಗಿಡಗಳನ್ನು ಬೆಳೆಸುವ ಬಗ್ಗೆ ತರಬೇತಿ ಆಯೋಜಿಸಿದೆ. ಮಾ.19ರಂದು ನಂ. 158, ಓಂಕಾರ್ನಗರ, ವರ್ತುಲ ರಸ್ತೆ, ಜೆ.ಪಿ. ನಗರ ಇಲ್ಲಿ ಹಾಗೂ ಮಾ. 21ರಂದು ಹಿನಕಲ್ನಲ್ಲಿರುವ ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ. 9845800165, 8277429414, ಸಂಪರ್ಕಿಸಬಹುದು.
ನಂಜುಂಡಸ್ವಾಮಿ ನೇಮಕ
ಮೈಸೂರು: ಬಿಜೆಪಿಯ ರಾಷ್ಟ್ರೀಯ ಪರಿಷತ್ ಸದಸ್ಯರನ್ನಾಗಿ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ವಕೀಲ ಎಂ. ನಂಜುಂಡಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ.
ಕಬಡ್ಡಿ ಪಂದ್ಯಾವಳಿ
ಮೈಸೂರು: ಒಂಟಿಕೊಪ್ಪಲಿನ ಗ್ರಾಮದೇವತೆ ಹಬ್ಬದ ಪ್ರಯುಕ್ತ ಮೈಸೂರು ವಿಭಾಗ ಮಟ್ಟದ ಶಿವಣ್ಣ ಸ್ಮಾರಕ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಮಾ. 23, 24ರಂದು ಏರ್ಪಡಿಸಿದ್ದು, ವಿಜೇತ ತಂಡಕ್ಕೆ ಆಕರ್ಷಕ ಪಾರಿತೋಷಕ ನೀಡಲಾಗುತ್ತದೆ. ಆಸಕ್ತರು 500 ಪ್ರವೇಶ ಶುಲ್ಕದೊಂದಿಗೆ ಮಾ.22ರೊಳಗೆ ತಂಡದ ಹೆಸರು ನೋಂದಾಯಿಸಬಹುದು. ಮೊ. 90608 76167.