'ಕಥಾ ಶ್ರಾವಣ ದಾರಿ ತೋರುವ ಬೆಳದಿಂಗಳು'
ರಾಮನಾಥಪುರ: ಕಥಾ ಶ್ರಾವಣ ಒಂದು ಅಮರ ಕಲೆ, ಜೀವನದ ಕತ್ತಲೆಯಲ್ಲಿ ದಾರಿ ತೋರುವ ಬೆಳದಿಂಗಳು, ಬೆಂದು ನೊಂದ ಮನಸಿಗೆ ತಂಪೆರೆವ ತಂಗಾಳಿ ಎಂದು ಸಮಾಜ ಸೇವಕ ರಾಮನಾಥಪುರ ಹೆಚ್.ಎಸ್. ತಿರುಮಲಚಾರ್ ಹೇಳಿದರು.
ರಾಮನಾಥಪುರದಲ್ಲಿ ಶ್ರೀ ಅತಿರುದ್ರ ಮಹಾಯಾಗ ಹಾಗೂ ಶ್ರೀ ಶತಚಂಡಿಕಾಯಾಗದಲ್ಲಿ ಇತ್ತೀಚೆಗೆ ಶ್ರೀಸೂಕ್ತ ದುರ್ಗಸೂಕ್ತ ಮಂತ್ರ ಪಾರಾಯಣ ಸಪ್ತ ಶತೀಪಾರಾಯಣ ಶ್ರೀ ದುರ್ಗಾಹೋಮ ಪೂಜಾ ಕೈಂಕರ್ಯ, ಮತ್ತು ಬೆಂಗಳೂರು ವಿದ್ವಾನ್ ಜಯರಾಮ್ ರಾವ್ ಅವರು ನಡೆಸಿಕೊಟ್ಟ ಕಾವ್ಯ ವಾಚನ ಮಾಡಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
9ನೇ ದಿನದ ಬುಧವಾರ ಶ್ರೀಸೀಕ್ತ ದುರ್ಗಾಸೂಕ್ತ ಮಂತ್ರ ಪಾರಾಯಣ ಸಪ್ತ ಶತೀಪಾರಾಯಣ ಶ್ರೀ ದುರ್ಗಾಹೋಮ, ಪೂರ್ಣಾಹುತಿ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಶ್ರೀ ಬಾಲಕೃಷ್ಣನಂದ ಸರಸ್ವತಿ ಸ್ವಾಮಿಗಳು, ಅವರ ನೇತೃತ್ವದಲ್ಲಿ ವೇ. ಲಕ್ಷೀನಾರಾಯಣ ಅವಧಾನಿಗಳು, ವೇ. ವೇಂಕಟೇಶ ಅವಧಾನಿಗಳು, ಸುಬ್ಬಕೃಷ್ಣ ದೀಕ್ಷಿತರು, ಮಾದಾಪುರದ ಸುಬ್ರಹ್ಮಣ್ಯ ಅವಧಾನಿಗಳ ಮಾರ್ಗದರ್ಶನದಲ್ಲಿ 150ಕ್ಕೂ ಹೆಚ್ಚು ಋತ್ವಿಜರು ಮತ್ತು ವಿದ್ವಜ್ಜನಗಳ ಸಹಕಾರದೊಂದಿಗೆ ಕ್ಷೇತ್ರವು ಲೋಕಪಾವನಿಯಾದ ಕಾವೇರೀ ದಂಡೆಯಲ್ಲಿ ಶ್ರೀ ಅತಿರುದ್ರ ಮಹಾಯಾಗ ಹಾಗೂ ಶ್ರೀ ಶತಚಂಡಿಕಾಯಾಗದ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಧಾರ್ಮಿಕ ಕಾರ್ಯಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದವು.
ಸನ್ಮಾನ...
ರಾಮನಾಥಪುರದಲ್ಲಿ ಶ್ರೀ ಅತಿರುದ್ರ ಮಹಾಯಾಗ ಹಾಗೂ ಶ್ರೀ ಶತಚಂಡಿಕಾಯಾಗ ಕಾರ್ಯಕ್ರಮದಲ್ಲಿ ಕಾವ್ಯ ವಾಚನ ನಡೆಸಿಕೊಟ್ಟ ಬೆಂಗಳೂರು ವಿದ್ವಾನ್ ಜಯರಾಮ್ ರಾವ್ ಅವರಿಗೆ ಸಮಿತಿ ವತಿಯಿಂದ ವೇ. ಲಕ್ಷೀನಾರಾಯಣ ಅವಧಾನಿಗಳು ಸನ್ಮಾನಿಸಿದರು.