ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಬ್ಬಮ್ಮ ದೇವಿ ಜಾತ್ರಾಮಹೋತ್ಸವ

Srinivasa Murthy VN
Updated On : 16 Mar 2014, 12:28 pm

ಸಕಲೇಶಪುರ: ತಾಲೂಕು ವನಗೂರಿಯಲ್ಲಿ ಮಾ. 16 ಮತ್ತು 17ರಂದು ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಮತ್ತು ಜಾತ್ರಾಮಹೋತ್ಸವ ನಡೆಯಲಿದೆ. ಮಾ. 16ರಂದು ಬೆಳಗ್ಗೆ 10ಕ್ಕೆ ಹೊನ್ನಾರು ಬಿತ್ತಿ ಮಲ್ಲು ಬೆಳಗುವುದು, ರಾತ್ರಿ 8 ಗಂಟೆಯ ನಂತರ ದೊಡ್ಡಸುಗ್ಗಿ, 12 ಗಂಟೆಗೆ ಸುಗ್ಗಿ ಕಟ್ಟೆಯಿಂದ ಕುರ್ಜು ಸಮೇತ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಲಾಗುವುದು.
ಮಾ. 17ರಂದು ಬೆಳಿಗ್ಗೆ 10 ಗಂಟೆಗೆ ಬಿಲ್ಲು ಸುಗ್ಗಿ ಮತ್ತು ಹಗಲು ಸುಗ್ಗಿ ನಂತರ  ಗುಂಡುಎಸೆತ, ರಂಗೋಲಿ ಸ್ಪರ್ಧೆ, ಶೂಟಿಂಗ್, ಗೋಣಿ ಚೀಲದ ಓಟ, ನಿಂಬೆಹಣ್ಣಿನ  ಓಟ, ಸೂಜಿದಾರ ಪೋಣಿಸುವುದು, ಚಿಕ್ಕಮಕ್ಕಳಿಗೆ ಕಪ್ಪೆ ಆಟ, ಬಾಳೆಹಣ್ಣು ತಿನ್ನುವ ಸ್ಪರ್ಧೆ ನಡೆಯಲಿದೆ. ಮಾ. 27ರಂದು ಮಳೆಕರೆಯಲು ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯಕ್ಕೆ ಹೋಗಲಾಗುವುದು.

ಅಥ್ಲೆಟಿಕ್ಸ್ ತರಬೇತಿ ಶಿಬಿರ
ಮೈಸೂರು:
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಅಥ್ಲೆಟಿಕ್ಸ್ ಕ್ಲಬ್ ಹಾಗೂ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಹನ್ನೆರಡು ಕ್ರೀಡಾ ಚಟುವಟಿಕೆಗಳಲ್ಲಿ ಒಂದು ತಿಂಗಳು ತರಬೇತಿ ಶಿಬಿರ ಏರ್ಪಡಿಸಿದೆ ಎಂದು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ ಹೇಳಿದ್ದಾರೆ. ಆಸಕ್ತರು ದೈಹಿಕ ಶಿಕ್ಷಣ ವಿಭಾಗದ ಸ್ಪೋರ್ಟ್ಸ್ ಪೆವಿಲಿಯನ್ ಕಚೇರಿಯಿಂದ ಮಾ.26ರ ನಂತರ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಏ.16ರೊಳಗೆ ತಲುಪಿಸಬೇಕು. ವಯೋವುತಿ- ಜಿಮ್ನಾಸ್ಟಿಕ್ಗೆ 8ರಿಂದ 15, ಬ್ಯಾಡ್ಮಿಂಟನ್ 12ರಿಂದ 16 ಹಾಗೂ ಇತರೆ ಕ್ರೀಡಾ ಚಟುವಟಿಕೆಗಳಿಗೆ 10ರಿಂದ 18ರವರೆಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement