ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇಶದ ಏಕತೆಗೆ ಏಕರೂಪ ಶಿಕ್ಷಣ ಬೇಕು: ಜೆಡಿಎಸ್ ರಾಜ್ಯಾಧ್ಯಕ್ಷ ಕೃಷ್ಣಪ್ಪ ಅಭಿಪ್ರಾಯ

Srinivasa Murthy VN
Updated On : 10 Mar 2014, 10:12 am

ನುಗ್ಗೇಹಳ್ಳಿ (ಚನ್ನರಾಯಪಟ್ಟಣ): ದೇಶದ ಅಭಿವೃದ್ಧಿಗೆ ಏಕರೂಪದ ಶಿಕ್ಷಣ ಬೇಕು, ಆಗ ಮಾತ್ರ  ಕ್ರಿಯಾಶೀಲ ದೇಶವಾಗುತ್ತದೆ ಎಂದು ಜೆಡಿಎಸ್ರಾಜ್ಯಾದ್ಯಕ್ಷ ಎ. ಕೃಷ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ. ಅವರು ಇಲ್ಲಿನ ಗೋಕುಲ ವಿದ್ಯಾಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಪ್ರೋತ್ಸಾಹ ಬೇಕು: ಸರ್ಕಾರಿ ಶಾಲೆಗಳಲ್ಲಿ ಕಾಟಾಚಾರದ ಶಿಕ್ಷಣ ವ್ಯವಸ್ಥೆ ಇದೆ. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಗಣಿತ, ವಿಜ್ಞಾನದ ಶಿಕ್ಷಕರಿಲ್ಲ. ಹಳ್ಳಿಯ ಮಕ್ಕಳು ಪಟ್ಟಣದ ಮಕ್ಕಳ ಜೊತೆ ಸ್ಪರ್ಧಾತ್ಮಕ ಸಿಇಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಶಿಕ್ಷಕರು ತಂದೆ ತಾಯಂದಿರು ಸಮಯ ಹಾಳು ಮಾಡದೆ ಟಿ.ವಿ, ಮೊಬೈಲ್ ಅನ್ನು ದೂರ ಇಟ್ಟು ಕಲಿಕೆಗೆ ಪ್ರೋತ್ಸಾಹಿಸಿದರೆ ಹಳ್ಳಿಯ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬಹುದು ಎಂದರು.
ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ನಾಯಕ್, ಹಾಸನ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಹೆಚ್.ಎಂ. ಮಲ್ಲೇಗೌಡ, ಎಪಿಎಂಸಿ ನಿರ್ದೇಶಕ ಬಿ.ಆರ್.ದೊರೆಸ್ವಾಮಿ, ಹೆಚ್.ಡಿ.ಸಿ.ಸಿ. ಬ್ಯಾಂಕ್ನ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ, ಉಪ ನೋಂದಣಾಧಿಕಾರಿ ನರಸಿಂಹಮೂರ್ತಿ, ಗೋಕುಲ ವಿದ್ಯಾಸಂಸ್ಥೆ ಕಾರ್ಯದರ್ಶಿ ಶಿವಮ್ಮ ನಾರಾಯಣ, ನಿವೃತ್ತ ಶಿಕ್ಷಕ ಸೂರ್ಯನಾರಾಯಣ್, ಸಿಆರ್ಪಿ ಸುಧಾಕರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement