ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಡಾನೆ ದಾಳಿಯಿಂದ ಅರಣ್ಯ ರಕ್ಷಕ ಸಾವು

Srinivasa Murthy VN
Updated On : 10 May 2014, 10:04 am

ಸರಗೂರು: ಕಾಡಾನೆ ದಾಳಿಯಿಂದ ಎಚ್.ಡಿ. ಕೋಟೆ ತಾಲೂಕಿನ ಹೆಡಿಯಾಲ ವಲಯ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಲೋಕೇಶ್ (38) ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶನಿವಾರ ಜರುಗಿದೆ.
ಅವರು ಹೆಡಿಯಾಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ ಮತ್ತು ಮೂವರು ಪುತ್ರಿಯರಿದ್ದಾರೆ. ಸುಳೆಕಟ್ಟೆ ಎಪಿಸಿ ಕ್ಯಾಂಪ್ನಲ್ಲಿದ್ದ ಇವರು ಶುಕ್ರವಾರ ಕಾಡಿನೊಳಗೆ ಗಸ್ತಿಗೆ ಹೋಗಿದ್ದರು. ರಾತ್ರಿಯಾದರೂ ಬಾರದ ಕಾರಣ ವಲಯ ಅರಣ್ಯಾಧಿಕಾರಿ ಗಿರೀಶ್ ಅವರು ಮಾದಪ್ಪ ಮತ್ತು ಬಸಪ್ಪ ಅವರನ್ನು ರಾತ್ರಿ ಗಸ್ತಿನಿಂದ ಲೋಕೇಶ್ ಬಂದಿಲ್ಲ ಏಕೆ ಎಂದು ವಿಚಾರಿಸಿದರು. ಆಗ ಲೋಕೇಶ್ ಅವರನ್ನು ಹುಡುಕಿಕೊಂಡು ಸಿಬ್ಬಂದಿ ಕಾಡಿನೊಳಗೆ ಹೋದಾಗ ಕೆಬ್ಬೆಕೊರೆ ಅರಣ್ಯ ಪ್ರದೇಶದ ಮೂಕರ್ಜಿ ಮರದ ಬಳಿ ಲೋಕೇಶ್ ಮೃತದೇಹ ಪತ್ತೆಯಾಗಿ ತಲೆ, ಕಿವಿ, ಮೂಗು ಮತ್ತು ಬಾಯಿಂದ ರಕ್ತ ಬಂದಿತ್ತು. ಸಿಎಫ್ ಕಾಂತರಾಜು, ಎಸಿಎಫ್ ರವಿಶಂಕರ್, ವಲಯ ಅರಣ್ಯಾಧಿಕಾರಿ ಗಿರೀಶ್, ಸರಗೂರು ಪೊಲೀಸ್ ಠಾಣೆಯ ಎಸ್ಐ ಅರುಣ್, ಸಿಬ್ಬಂದಿ ಭಾಸ್ಕರ್, ಪುಟ್ಟನಾಯಕ, ಚೇತನ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಕ್ರಮ ಮನೆ ತೆರವಿಗೆ ಒತ್ತಾಯ
ಮೈಸೂರು: ಪಾಲಿಕೆ ವ್ಯಾಪ್ತಿಯ ದಲಿತ ಸ್ಮಶಾನ ಭೂಮಿಯಲ್ಲಿ ನಿರ್ಮಿಸಿರುವ ಅಕ್ರಮ ಮನೆಗಳನ್ನು ತೆರವುಗೊಳಿಸುವಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಸಂಸ್ಥೆ ಒತ್ತಾಯಿಸಿದೆ. ಗಾಂಧಿನಗರ, ಅಶೋಕಪುರಂ, ಕೆಸರೆ, ಪಡುವಾರಹಳ್ಳಿ, ನಾಚನಹಳ್ಳಿ, ವೀವರ್ ಕಾಲೋನಿ, ಕುಕ್ಕರಹಳ್ಳಿಯಲ್ಲಿ ಹರಿಜನರೆ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಅವರಿಗೆ ಮಾಜಿ ಸಚಿವ ಬಿ.ಬಸವಲಿಂಗಪ್ಪ ಸರ್ವೇ ನಂ. 103, 104ರಲ್ಲಿನ 16.33 ಗುಂಟೆ ಜಮೀನು ನೀಡಿದ್ದರು. ಅದೇ ಜಾಗದಲ್ಲಿ ಅಧಿಕಾರಿಗಳ ಷಡ್ಯಂತ್ರದಿಂದ ಎಲ್ಲಿಂದಲೋ ಬಂದ ಕುಟುಂಬಗಳು ಭೂಮಿ ಆಕ್ರಮಿಸಿ ಮನೆಗಳನ್ನು ನಿರ್ಮಿಸಿಕೊಂಡಿವೆ ಎಂದು ಮಹಾಸಂಸ್ಥೆಯ ಅಧ್ಯಕ್ಷ ಸಿ. ಚಿದಂಬರ, ರಾಷ್ಟ್ರೀಯ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪಿ. ಕುಮಾರ್ ತಿಳಿಸಿದ್ದಾರೆ. ನಗರದ ಸುತ್ತಮುತ್ತಲಿನ ದಲಿತ ಸಮುದಾಯಕ್ಕೆ ಮೀಸಲಿಟ್ಟ ಸ್ಮಶಾನ ಭೂಮಿಯಲ್ಲಿ ಅಧಿಕಾರಿಗಳ, ಮತ್ತು ರಿಯಲ್ ಎಸ್ಟೇಟ್ ದಂಧೆಯ ಕುಮ್ಮಕ್ಕಿನಿಂದ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳ್ನು ನೆಲಸಮಗೊಳಿಸಬೇಕು. ಇಲ್ಲವಾದಲ್ಲಿ, ಸ್ಮಶಾನ ಭೂಮಿಯಲ್ಲಿ ಸಂಭವಿಸಬಹುದಾದ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement