ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಡಿತರ ವಿತರಣೆ

Srinivasa Murthy VN
Updated On : 10 May 2014, 10:05 am

ಹಾಸನ: ಚನ್ನರಾಯಪಟ್ಟಣ ತಾಲೂಕಿನ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಮೇ 2014ರ ಮಾಹೆಗೆ ಆಹಾರ ಪಡಿತರ ಮತ್ತು ಸೀಮೆಎಣ್ಣೆ ಹಂಚಿಕೆ ಮಾಡಿದೆ. ಪಡಿತರ ಚೀಟಿದಾರರು ಆಹಾರ ಪಡಿತರ ಮತ್ತು ಸೀಮೆ ಎಣ್ಣೆಯನ್ನು ನಿಗದಿತ ದರದಲ್ಲಿ ಪಡೆದುಕೊಳ್ಳತಕ್ಕದ್ದು ಯಾವುದೇ ಕಾರಣಕ್ಕೂ ಹೆಚ್ಚಿಗೆ ಹಣ ನೀಡಬಾರದು ನ್ಯಾಯಬೆಲೆ ಅಂಗಡಿ ಮಾಲೀಕರು, ಸಹಕಾರಿ ಸಂಘದವರು ಹೆಚ್ಚಿಗೆ ಹಣ ಕೇಳಿದಲ್ಲಿ ಆಹಾರ ಶಿರಸ್ತೇದಾರ್ ಹಾಗೂ ಆಹಾರ ನಿರೀಕ್ಷಕರ ಮೊಬೈಲ್ ಸಂಖ್ಯೆ 9591575783 ಅಥವಾ 9448526736ಗೆ ಅಥವಾ ಖುದ್ದು ದೂರು ಸಲ್ಲಿಸಬಹುದು ಎಂದು ಚನ್ನರಾಯಪಟ್ಟಣ ತಾಲೂಕು ತಹಸೀಲ್ದಾರ್ ಕೆ. ಕೃಷ್ಣ ತಿಳಿಸಿದ್ದಾರೆ.

ಯುವಜನ ಯೋಜನೆ
ಹಾಸನ: ರಾಜ್ಯ ಯುವ ನೀತಿ ಅಡಿಯಲ್ಲಿ ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಜೂನ್ 2013ರಿಂದ ಜುಲೈ 2014ರ ಅವಧಿಯಲ್ಲಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿ, ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ, ಶಾಲಾ ಆವರಣ ಶುಚಿತ್ವ, ಅಗತ್ಯ ಸೌಲಭ್ಯಗಳ ಪೂರೈಕೆ ಮತ್ತು ಶಾಲಾ ಸುತ್ತಲಿನ ಪರಿಸರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ತೊಡಗಿಸಿಕೊಂಡಿರುವ ಯುವ ಸಂಘ, ಸಂಸ್ಥೆಗಳಿಂದ ರು. 1 ಲಕ್ಷ ಪ್ರೋತ್ಸಾಹ ಧನಕ್ಕಾಗಿ ಪ್ರಸ್ತಾವನೆ ಆಹ್ವಾನಿಸಲಾಗಿದೆ. ಪ್ರಸ್ತಾವನೆ ಸಲ್ಲಿಸಲು ಜೂ. 30 ಕೊನೆ ದಿನವಾಗಿದೆ.  

ಸಹಸ್ರಾಬ್ದಿ ದತ್ತಿ ಉಪನ್ಯಾಸ
ಹಾಸನ: ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸ ಮಾಲಿಕೆಯಲ್ಲಿ  ಶ್ರವಣಬೆಳಗೊಳ ಗೊಮ್ಮಟೇಶ್ವರ ಸಹಸ್ರಾಬ್ದಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಗರದ ಶ್ರೀರಂಗ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಮೇ 13ರಂದು  ಮಧ್ಯಾಹ್ನ ಹ್ನ 2.30ಕ್ಕೆ ಏರ್ಪಡಿಸಿದೆ. ಶ್ರೀರಂಗ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ನವೀನ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಜನಾರ್ದನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement