'ಉತ್ತಮ ಕೋರ್ಸ್ಗಳ ಆಯ್ಕೆ ಮಾಡಿಕೊಳ್ಳಿ'
ಹಾಸನ: ಪದವಿಪೂರ್ವ ಶಿಕ್ಷಣದ ನಂತರ ಹಲವು ಕೋರ್ಸ್ಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಡಾ ಗುರುರಾಜ್ ಹೆಬ್ಬಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಎ.ವಿ.ಕೆ. ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಕೆರಿಯರ್ ಕೌನ್ಸೆಲಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವಾಗಲೂ ಕ್ರಿಯಾಶೀಲರಾಗಿರಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು 24 ಗಂಟೆಗಳ ಕಾಲ ಓದುವ ಅವಶ್ಯಕತೆ ಇಲ್ಲ. ಓದುವಷ್ಟು ಸಮಯ ಶ್ರದ್ಧೆ, ಆಸಕ್ತಿಯಿಂದ ಓದಬೇಕು. ಆಗ ಮಾತ್ರ ಉತ್ತಮ ಅಂಕ ಗಳಿಸಲು ಸಾಧ್ಯ. ಓದುವುದರ ಜೊತೆಗೆ ಮನರಂಜನೆಯ ಕಡೆಯೂ ಗಮನ ಹರಿಸಬೇಕು ಎಂದು ನುಡಿದರು. ಪಿಯುಸಿಯ ನಂತರ ಹೊಸ ಗೆಳೆಯರ ಪರಿಚಯ ಆಗುತ್ತದೆ. ಕಿಡಿಗೇಡಿಗಳ ಗೆಳೆತನ ಹಾಗೂ ಮಾದಕ ದ್ರವ್ಯಗಳಂತಹ ದುಶ್ಚಟಗಳಿಗೆ ಬಲಿಯಾಗಬಾರದು. ಒಳ್ಳೆಯದನ್ನೇ ಕಲಿತರೆ ಒಳ್ಳೆಯದೇ ಆಗುತ್ತದೆ ಎಂದು ತಿಳಿಸಿದರು. ಮುಂದೆ ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಹೋಗಿ ಒಳ್ಳೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು. ನೀವು ಯಾವ ಸ್ಥಾನಕ್ಕೆ ಹೋಗುತ್ತೀರಿ, ಆ ಸ್ಥಾನದ ಘನತೆ ಹೆಚ್ಚಿಸುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಡಾ ಹೆಚ್.. ಸುರೇಶ್, ಬಿ.ಎಂ. ಜಗದೀಶ್ಣ, ಜಿ.ಆರ್. ವೆಂಕಟೇಶ್, ಉಮಾಶಂಕರ್ ಇದ್ದರು.