ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮಾತೃ ಭಾಷೆ ಜೊತೆ ಇಂಗ್ಲಿಷ್ ಅವಶ್ಯಕ'

Srinivasa Murthy VN
Updated On : 19 May 2014, 11:52 am

ಮೈಸೂರು: ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಮಾತೃ ಭಾಷೆ ಜೊತೆಗೆ ಇಂಗ್ಲಿಷ್ ಭಾಷೆಯೂ ಅವಶ್ಯಕ ಎಂದು ದಾವಣಗೆರೆ ವಿವಿ ವಿಶ್ರಾಂತ ಕುಲಪತಿ ಪ್ರೊ.ಸಿ. ಇಂದುಮತಿ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಯುಜಿಸಿ- ನೆಟ್ ಪರೀಕ್ಷೆ ಮತ್ತು ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ಮಾತೃ ಭಾಷೆಯ ಮೂಲಕ ನಮ್ಮತನ, ನಮ್ಮ ಗುಣವನ್ನು ರೂಪಿಸಿಕೊಳ್ಳುತ್ತಿದ್ದೆವು. ಪ್ರತಿ ಕೆಲಸವು ಮಾತೃ ಭಾಷೆಯಲ್ಲೇ ನಡೆಯುತ್ತಿತ್ತು. ಆದರೆ, ಈಗಿನ ಒತ್ತಡದ ಜೀವನದಲ್ಲಿ ಒಬ್ಬರು ಮತ್ತೊಬ್ಬರನ್ನು ಸೋಲಿಸುವ ತವಕದಲ್ಲಿ ತಮಗೆ ತಿಳಿಯದಂತೆಯೇ ಅನಿವಾರ್ಯವಾಗಿ ಇಂಗ್ಲಿಷ್ ದಾಸರಾಗಿದ್ದಾರೆ. ಪ್ರತಿಯೊಂದು ದೇಶ ಮತ್ತು ವಿಷಯವನ್ನು ಅರಿಯಲು, ದೇಶ ವಿದೇಶಗಳ ಮಾಹಿತಿ ಕಲೆ ಹಾಕಲು, ಜ್ಞಾನ ವೃದ್ಧಿಗೆ ಇಂಗ್ಲಿಷ್ ಅನಿವಾರ್ಯ. ಪ್ರಸ್ತುತ ಜಾಗತೀಕರಣದಲ್ಲಿ ಇಂಗ್ಲಿಷ್ ಪ್ರತಿಯೊಬ್ಬರ ಏಳಿಗೆಗೆ ಮಾನದಂಡವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂಗ್ಲಿಷ್ ಜೊತೆಗೆ ಸಂವಹನ ಕೌಶಲ ಬೆಳೆಸಿಕೊಳ್ಳಬೇಕು. ಇಂಗ್ಲಿಷ್ ವ್ಯವಹಾರಿಕ ಹಿತದೃಷ್ಟಿಯಿಂದ ಅಗತ್ಯ. ಅದೇ ರೀತಿ ಸಂವಹನ ಕೌಶಲವು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕ ಎಂದು ಅವರು ಹೇಳಿದರು.
ಇದೇ ವೇಳೆ ರಾಜ್ಯ ಮುಕ್ತ ವಿವಿಯಲ್ಲಿ ತರಬೇತಿ ಪಡೆದು ಉತ್ತೀರ್ಣರಾದ ಯುಜಿಸಿ- ನೆಟ್ ಮತ್ತು ಕೆ- ಸೆಟ್ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement