ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೋದಿ ಭರ್ಜರಿ ಗೆಲವು: ಬಿಜೆಪಿ ಕಾರ್ಯಕರ್ತರಿಗೆ ವಿಶೇಷ ಔತಣ

Srinivasa Murthy VN
Updated On : 19 May 2014, 11:49 am

ಅರಸೀಕೆರೆ:  ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಹರಿಕಾರ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿರುವ ಸಂತಸದಲ್ಲಿ ಕ್ಷೇತ್ರದ ಮಾಜಿ ಶಾಸಕ ಎ.ಎಸ್.ಬಸವರಾಜು ತಮ್ಮ ತೋಟದ ಮನೆಯಲ್ಲಿ ಭಾನುವಾರ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದರು.
ಈ ಔತಣಕೂಟದಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ.ಎನ್.ದುರ್ಗಪ್ಪ ಶೆಟ್ಟಿ, ನಗರಾಧ್ಯಕ್ಷ ಕೆ. ವಿ. ಹಿರಿಯಣ್ಣಯ್ಯ, ಮುಖಂಡರಾದ ಪರಶುರಾಮರಾವ್, ಎ.ಸಿ.ಶಂಕರಯ್ಯ, ರೇವಣ್ಣಸಿದ್ದಪ್ಪ, ರುದ್ರಮುನಿಸ್ವಾಮಿ,ಗೋವಿಂದರಾಜು, ನಾಗೇಶ್, ನವಲ್‌ಗುಂದ್, ಕೆ.ಆರ್.ಮುರುಳೀಧರ್, ಶ್ರೀನಿವಾಸ್, ಬೊಮ್ಮೇನಹಳ್ಳಿ ಪರಮಶಿವಯ್ಯ ಬಾಣಾವರ ಮಹಾಲಿಂಗಪ್ಪ, ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಇದ್ದರು.

ಎನ್‌ಡಿಎ ದಿಗ್ವಿಜಯ: ವಿಹಿಂಪ ವಿಶೇಷ ಪೂಜೆ
ಹಾಸನ: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ದಿಗ್ವಿಜಯ ಹಿನ್ನೆಲೆಯಲ್ಲಿ  ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಾನುವಾರ ನಗರದ ದೇವಿಗೆರೆಯ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ದೇವರಿಗೆ ವಿಶ್ವಹಿಂದೂ ಪರಿಷತ್ ಹಾಗೂ ವರ್ತಕರು ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನಕಾಯಿಗಳನ್ನು ಒಡೆದು ವಿಜಯೋತ್ಸವ ಆಚರಿಸಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀನಿವಾಸ ಗೌಡ, ಬಿಜೆಪಿ ಮುಖಂಡ ಸದಾಶಿವು, ವರ್ತಕರಾದ ಬಸವರಾಜ್, ಸುದರ್ಶನ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement