ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

Srinivasa Murthy VN
Updated On : 21 May 2014, 12:05 pm

ಕನ್ನಡಪ್ರಭವಾರ್ತೆ, ಅರಸೀಕೆರೆ, ಮೇ 20
ತಾಲೂಕಿನ ಬಾಣಾವರ  ಬಸ್ ನಿಲ್ದಾಣದ ಮುಂದೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕತರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿಳಂಬ ನೀತಿ ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಬಾಣಾವರ ಮಾರ್ಗವಾಗಿ ಬೆಂಗಳೂರು ಮೂಲಕ ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 234ರ ಡಾಂಬರೀಕರಣದ ಅಭಿವೃದ್ದಿ ಕಾಮಗಾರಿ ಕಳೆದ 4 ವರ್ಷಗಳ ಹಿಂದೆಯೇ ಪ್ರಾರಂಭವಾಗಿದ್ದರೂ ಅದನ್ನು ತ್ವರಿತಗತಿಯಲ್ಲಿ ಪೂರೈಸದ ಕಾರಣ ಹೆದ್ದಾರಿಯಲ್ಲಿನ ಅಕ್ಕಪಕ್ಕದ ಗ್ರಾಮಗಳಲ್ಲಿನ ಮನೆಗಳಿಗೆ ಇನ್ನಿಲ್ಲದ ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.
ವಾಯುಮಾಲಿನ್ಯದ ಪರಿಣಾಮ ಆನೇಕ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ.
 ಅಲ್ಲದೆ ಪ್ರತಿನಿತ್ಯ ಅನೇಕ ರಸ್ತೆ ಅಫಘಾತಗಳು ಸಂಭಸುತ್ತಿವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತಸಂಘದ ಜಿಲ್ಲಾ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಆರೋಪಿಸಿದರು.
ಪ್ರಾರಂಭದಲ್ಲಿ ಗ್ರಾಮಸ್ಥರು ಈ ರಸ್ತೆಯ ಅಭಿವೃದ್ದಿ ಕಾರ್ಯದಿಂದ ಉತ್ತಮ ನಿರೀಕ್ಷೆ ಹೊಂದಿದ್ದರು, ಇದುವರೆಗೂ ಈ ರಸ್ತೆಗೆ ಡಾಂಬರ್ ಕಾಣದೆ ದೂಳುಮಯವಾಗಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅವರು ದೂರಿದರು.
ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಸಿ.ಶ್ರೀನಿವಾಸ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕಾಮಾಗಾರಿಯ ವಿಳಂಬ ನೀತಿಯನ್ನು ನಾವುಗಳು ವಿರೋಧಿಸಿ ಎರಡು ಬಾರಿ ಪ್ರತಿಭಟನೆ ನಡೆಸಿದರು ಯಾವುದೇ ಪ್ರಯೋಜವಾಗಿಲ್ಲ ಜನಪ್ರತಿನಿಧಿಗಳಾಗಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.  
ತಾಪಂ ಸದಸ್ಯ ಬಿ.ಆರ್.ಜಯಣ್ಣ, ತಾಲೂಕು ಕರವೇ ಗೌರವಾಧ್ಯಕ್ಷ ಬಿ.ಆರ್.ಲಕ್ಷ್ಮೀಶ್ ಸರ್ಕಾರದ ಕ್ರಮ ಖಂಡಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಬಾಣಾವರ ಗ್ರಾಪಂ ಮಾಜಿ ಅಧ್ಯಕ್ಷೆ ಅಂಬಿಕಾ ರಮೇಶ್, ಡಾ. ಶ್ರೀಕಂಠಪ್ಪ, ಹಾರನಹಳ್ಳಿ ಚಂದ್ರಪ್ಪ, ಜವನೇಹಳ್ಳಿ ನಿಂಗಪ್ಪ, ಜಯರಾಂ, ಲಕ್ಷ್ಮಮ್ಮ, ಉಮೇಶ್ ಹಾಗೂ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement