ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇಶ ಸುತ್ತುವುದರಿಂದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ

Srinivasa Murthy VN
Updated On : 21 May 2014, 12:03 pm

ಹೊಳೆನರಸೀಪುರ: ದೇಶ ಸುತ್ತು-ಕೋಶ ಓದು ಎಂಬ ಮಾತಿನಂತೆ ಪುಸ್ತಕಗಳನ್ನು ಓದುವ ಜೊತೆಗೆ ನಾನಾ ಕ್ಷೇತ್ರಗಳಿಗೆ ಭೇಟಿ ನೀಡಿ ಆ ಕ್ಷೇತ್ರದ ಬಗೆಗಿನ ಪೂರ್ಣ ಮಾಹಿತಿ ಪಡೆಯುವುದು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ ಮತ್ತು ಉತ್ತಮ ಅನುಭವ ನೀಡುತ್ತದೆ ಎಂದು ಇಲ್ಲಿನ ಕಂಪ್ಯೂಟರ್ ತರಬೇತಿ ಕೇಂದ್ರದ ವ್ಯವಸ್ಥಾಪಕ ತಮ್ಮಯ್ಯ ತಿಳಿಸಿದರು.
ನಾಲ್ಕು ಗೋಡೆಗಳ ನಡುವಿನ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಕಲಿಕೆ ಪರಿಸರದಲ್ಲಿ ನಡೆಯಬೇಕು ಎಂಬ ಅಭಿಲಾಷೆಯೊಂದಿಗೆ ತಮ್ಮ ಸಂಸ್ಥೆಯ ವತಿಯಿಂದ ನಡೆಸುತ್ತಿರುವ ಬೇಸಿಗೆ ಶಿಬಿರದ ವಿದ್ಯಾರ್ಥಿಗಳಿಗೆ ಕ್ಷೇತ್ರ ಪ್ರವಾಸವನ್ನು ತಮ್ಮಯ್ಯ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಕಟ್ಟೆ ಬೆಳಗುಲಿಯ ಭೋರೂಕ ವಿದ್ಯುತ್ ತಾಯಾರಿಕಾ ಘಟಕಕ್ಕೆ ಶಿಬಿರಾರ್ಥಿಗಳೊಂದಿಗೆ ಭೇಟಿ ನೀಡಿ, ನೀರಿನಿಂದ ವಿದ್ಯುತ್ ಉತ್ಪಾದಿಸುವ ಬಗ್ಗೆ ಜಲ ವಿದ್ಯುತ್ ತಯಾರಿಕಾ ಘಟಕದ ಸಿಬ್ಬಂದಿಯಿಂದ ಮಕ್ಕಳಿಗೆ ಮಾಹಿತಿ ನೀಡಲಾಯಿತು.
ನಂತರ ಶ್ರೀರಾಮದೇವರ ಅಣೆಕಟ್ಟೆ ಬಳಿಯಲ್ಲಿನ ಮೀನು ಸಾಕಣೆ ಘಟಕಕ್ಕೆ ಭೇಟಿ ನೀಡಿ, ಮೀನು ಸಾಕಣೆ ಮಾಡುವ ವಿಧಾನ ಅಲ್ಲದೇ ವಿವಿಧ ಜಾತಿಯ ಮೀನುಗಳು, ಅವುಗಳ ವಿಶೇಷತೆಗಳ ಬಗ್ಗೆ ಮತ್ತು ಮೀನು ತಯಾರಿಕಾ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲಾಯಿತು.
 ಹಳೆಕೋಟೆಯಲ್ಲಿರುವ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಶಿಬಿರಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಯಿತು. ಅಲ್ಲಿಂದ ಹೂವಿನಹಳ್ಳಿಯ ಹತ್ತಿರದ ಬೆಟ್ಟದಲ್ಲಿರುವ ಪವನ ವಿದ್ಯುತ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಗಾಳಿಯಿಂದ ವಿದ್ಯುತ್‌ಚ್ಛಕ್ತಿ ಉತ್ಪಾದಿಸುವ ಬಗ್ಗೆ ಕೆಪಿಟಿಸಿಎಲ್‌ನ ಕಿರಿಯ ಎಂಜಿನಿಯರ್ ಪುಟ್ಟಣ್ಣಯ್ಯ ಪ್ರಾತ್ಯಕ್ಷಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement