ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೀರು ಸ್ಥಾವರಗಳ ಪರೀಕ್ಷೆ ಕಡ್ಡಾಯ

Srinivasa Murthy VN
Updated On : 21 May 2014, 12:03 pm

ಕ.ಪ್ರ.ವಾರ್ತೆ ಜಾವಗಲ್ ಮೇ 20
ಪ್ರತಿ ಗ್ರಾಮ ಪಂಚಾಯ್ತಿಯ ನೀರಿನ ಸ್ಥಾವರಗಳನ್ನು ವರ್ಷದಲ್ಲಿ  2 ಬಾರಿ ಕಡ್ಡಾಯವಾಗಿ ಪರೀಕ್ಷಿಸಬೇಕೆಂದು ಬೆಂಗಳೂರಿನ ನೀರು ಮತ್ತು ನೈರ್ಮಲ್ಯ ಬೆಂಬಲ ಸಂಸ್ಥೆಯ ತರಬೇತುದಾರ ಲಿಂಗರಾಜು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ, ಗ್ರಾಮೀಣ ಮತ್ತು  ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಬೆಂಗಳೂರಿನ ನೀರು ಮತ್ತು ನೈರ್ಮಲ್ಯ ಬೆಂಬಲ ಸಂಸ್ಥೆ, ಹಾಸನ ಜಿಲ್ಲಾ ಪಂಚಾಯತ್ ಹಾಗೂ ಭಾರತೀಯ ಸೇವಾ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಉಪಮಾರುಕಟ್ಟೆಯ ರೈತಭವನದಲ್ಲಿ  ಸೋಮವಾರ ರಾಷ್ಟೀಯ ಗ್ರಾಮೀಣ ಕುಡಿಯುವ ಕಾರ್ಯಕ್ರಮದಡಿ ಗ್ರಾಪಂ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಾಟರ್‌ಮನ್‌ಗಳು ಹಾಗೂ ಗ್ರಾಮಸ್ಥರಿಗೆ  ಏರ್ಪಡಿಸಿದ್ದ ಸಾಮರ್ಥ್ಯಾಭಿವೃದ್ದಿ ಚಟುವಟಿಕೆಯ 2 ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನೀರಿನಲ್ಲಿ ನೈಟ್ರೇಟ್, ಐರನ್, ಗಡಸು ಸೇರಿದಂತೆ ರಾಸಾಯನಿಕಗಳು ಮತ್ತು  ಕಲ್ಮಶಗಳಿಂದಾಗಿ ಕಾಯಿಲೆಗಳು ಬರುತ್ತವೆ. ಹೀಗಾಗಿ  ನೀರಿನ ಗುಣಮಟ್ಟವನ್ನು ಕಾಪಾಡುವ ದೃಷ್ಟಿಯಿಂದ ಮಳೆಗಾಲದ ಮುಂಚೆ ಮತ್ತು ನಂತರ ನೀರನ್ನು ಪರೀಕ್ಷಿಸುವುದು ಅನಿವಾರ್ಯವಾಗಿದೆ ಎಂದರು.
ನೀರಿನ ಬಳಕೆ ಬಗ್ಗೆ ಜನರಲ್ಲಿ ಅರಿವು ಕಡಿಮೆಯಾಗುತ್ತಿರುವುದರಿಂದ ನೀರಿನ ಸದ್ಬಳಕೆ, ಅಂತರ್ಜಲ ಹೆಚ್ಚಿಸುವಿಕೆ ದೃಷ್ಟಿಯಿಂದ ಅರಿವಿನ ಸಾಮರ್ಥ್ಯವನ್ನು ಅಭಿವೃದ್ದಿ ಪಡಿಸಬೇಕಾಗಿದೆ. ಹೀಗಾಗಿ ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು  ಆಶಾ ಕಾರ್ಯಕರ್ತೆಯರಿಗೆ ಮತ್ತು ವಾಟರ್ ಮನ್‌ಗಳಿಗೆ ತರಬೇತಿ ನೀಡುವುದು ಅತ್ಯಗತ್ಯವಾಗಿದೆ ಎಂದರು.  
ಗ್ರಾಪಂ ಪಿಡಿಒ ವಿರೂಪಾಕ್ಷ ಮಾತನಾಡಿ ಜಾವಗಲ್ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ತ್ವರಿತವಾಗಿ ಮಾಡಿಸಿಕೊಡುವಂತೆ ಮನವಿ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಪಂ ಅಧ್ಯಕ್ಷೆ ಕವಿತಮಂಜುನಾಥ್,  ಸಂಪನ್ಮೂಲ ವ್ಯಕ್ತಿಗಳಾದ ರವಿಕುಮಾರ್, ಮಂಜುನಾಥ್ ಮಾತನಾಡಿದರು. ಗ್ರಾ.ಪಂ. ಸದಸ್ಯರಾದ ಶ್ರೀನಿವಾಸ ಸ್ಸಿದ್ದಮ್ಮ ಮಂಜುಳಾ, ಮಾರುಕಟ್ಟೆ ಮೇಲ್ವಿಚಾರಕ ಕುಮಾರ್, ಚಂದ್ರಪ್ಪ, ಮಲ್ಲೇಶಪ್ಪ ಗಣಕ ಯಂತ್ರ ತರಬೇತಿದಾರ ಗಂಗಾಧರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement