ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಸವಾಪಟ್ಟಣದಲ್ಲಿ ಓಕುಳಿ ಉತ್ಸವ

Srinivasa Murthy VN
Updated On : 21 May 2014, 12:03 pm

ರಾಮನಾಥಪುರ: 12ನೇ ಶತಮಾನದ ಸಮಾನತೆಯ ಹರಿಕಾರ ಶ್ರೀ ಜಗಜ್ಯೋತಿ ಬಸವಣ್ಣ ಹಾಕಿಕೊಟ್ಟ ಭಕ್ತಿ ಪಂಥದ ಮಾರ್ಗದಲ್ಲಿ ನಡೆದರೆ ಮನುಷ್ಯನ ಬದುಕಿನಲ್ಲಿ ಎದುರಾಗುವ ಕಷ್ಟ-ಕಾರ್ಪಣ್ಯಗಳಿಗೆ ಮುಕ್ತಿ ಸಿಗಲಿದೆ ಎಂದು ರಾಮನಾಥಪುರ ಹೋಬಳಿ ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆ ಕಾರ್ಯದರ್ಶಿ ಬಿ.ಎಂ. ಮೃತ್ಯುಂಜಯ ತಿಳಿಸಿದರು.
ರಾಮನಾಥಪುರ ಹೋಬಳಿ ಬಸವಾಪಟ್ಟಣದ ಬಸವೇಶ್ವರ ಯುವಕ ಸಂಘ ಮತ್ತು ವೀರಶೈವ ಸಮಾಜದ ವತಿಯಿಂದ ನಡೆದ ಬಸವೇಶ್ವರ ಜಯಂತಿ ಓಕುಳಿ ಉತ್ಸವದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವೀರಶೈವ ಸಮಾಜವನ್ನು ನಾಡಿನ ಉದ್ದಗಲಕ್ಕೂ ಕೊಂಡೊಯ್ದ ಮಹಾನ್ ನಾಯಕ ಬಸವಣ್ಣನವರು ಕ್ರಾಂತಿ ಪುರುಷರಾಗಿದ್ದರು. ಅವರ ತತ್ವ ಅದರ್ಶಗಳನ್ನು ಎಲ್ಲರು ಮೈಗೂಡಿಸಿಕೊಳ್ಳಬೇಕು ಎಂದರು.  
ವೀರಶೈವ ಸಮಾಜದ ಅಧ್ಯಕ್ಷ ಬಿ.ಎಸ್. ಮಲ್ಲಿಕಾರ್ಜುನಶೆಟ್ಟಿ, ಕಾರ್ಯದರ್ಶಿ ವಾಗೀಶ್, ಸದಸ್ಯರಾದ ಅಂಬರೀಶ್, ಜಗದೀಶ್, ಸದಾಶಿವ, ಬಾಲು, ಪರಮೇಶ್, ಬಸವಣ್ಣ, ಅಶೋಕ, ಮಹೇಶ್, ಬಸವರಾಜ್, ತಾಪಂ ಸದಸ್ಯ ಬಿ.ಸಿ. ವೀರೇಶ್ಚಿಕ್ಕ ಮಕ್ಕಳಾದ ಲಿಖಿತ್, ಪ್ರವೀಣ್, ಯಶವಂತ್, ಶಶಾಂಕ್, ಅನಂದ್, ಅಭಿನವ, ಮುಂತಾದ ಶರಣ ಶರೆಣೆಯರು ಭಾಗವಹಿಸಿದ್ದರು.

ಸಡಗರ, ಸಂಭ್ರಮ
12ನೇ ಶತಮಾನದ ಸಮಾನತೆಯ ಹರೀಕಾರ ಶ್ರೀ ಬಸವೇಶ್ವರರ 882ನೇ ಜನ್ಮದಿನದ ಅಂಗವಾಗಿ ಬಸವಾಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಓಕುಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ರಾಜ ಬೀದಿಗಳು ಬಸವ ಜಯಂತಿ ಅಂಗವಾಗಿ ತಳಿರು ತೋರಣಗಳಿಂದ ಅಲಂಕೃತಗೊಂಡು ಮಹಿಳೆಯರು ರಸ್ತೆಗಳನ್ನು ಸಾರಿಸಿ ರಂಗೋಲಿ ಹಾಕಿ ಮನೆಯನ್ನೆಲ್ಲಾ ಶೃಂಗರಿಸಿ ಮೆರವಣಿಗೆ ಉದ್ದಕ್ಕೂ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜಾ ಕೈಂಕರ್ಯ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement