ವಿದ್ಯುತ್ಗಾಗಿ ಅಧಿಕಾರಿಗಳಿಗೆ ದಿಗ್ಬಂಧನ
ಹನೂರು: ಗುಣಮಟ್ಟದ ವಿದ್ಯುತ್ ಮತ್ತು ನಿರಂತರ ಜ್ಯೋತಿ ಸಮರ್ಪಕವಾಗಿ ನೀಡುವಂತೆ ಒತ್ತಾಯಿಸಿ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ರೈತರು ಅಧಿಕಾರಿಗಳನ್ನು ದಿಗ್ಭಂಧನಗೊಳಿಸಿ ಪ್ರತಿಭಟನೆ ನಡೆಸಿದರು.ಚಿಕ್ಕಲ್ಲೂರಿನ ಮುಖ್ಯರಸ್ತೆಯ ತೋಟದ ಮನೆಗಳಲ್ಲಿ ವಾಸಮಾಡುವ ರೈತರು ನಿರಂತರ ಜ್ಯೋತಿ ಸಂಪರ್ಕ ಪಡೆದಿರುವ ಬಗ್ಗೆ ಕೊಳ್ಳೇಗಾಲ ಉಪವಿಭಾಗದ ಇ.ಇ.ಸೋಮಶೇಖರ್, ಎ.ಇ.ಶ್ರೀಧರ್, ಎ.ಇ.ಮಹಮ್ಮದ್ ಪಾಷ ಮತ್ತು ಸಿಬ್ಬಂದಿ ಜೊತೆ ತೆರಳಿ, ನಿರಂತರ ಜ್ಯೋತಿ ವಿದ್ಯುತ್ ಕಂಬದಿಂದ ಕಡಿತಗೊಳಿಸಿದ ಪರಿಣಾಮ, ಅಕ್ರೋಶಗೊಂಡ ರೈತರು ದಿನನಿತ್ಯ ಲೋ ವೋಲ್ಟೇಜ್ ಅಸಮರ್ಪಕ ವಿದ್ಯುತ್ಸ್ರಬರಾಜು ಮಾಡುತ್ತಿರುವ ಅಧಿಕಾರಿಗಳನ್ನು ಚಿಕ್ಕಲೂರಿನ ಹೊಸಮಠದ ರಸ್ತೆ ಮಧ್ಯದಲ್ಲಿ ದಿಗ್ಭಂದನ ವಿಧಿಸಿ, ಹಿರಿಯ ಅಧಿಕಾರಿಗಳು ಬಂದು ಸೂಕ್ತ ಕ್ರಮ ಕೈಗೊಳ್ಳುವವರೆಗೂ ಬಿಡುಗಡೆ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಲ್ಲೂರು ಕೊತ್ತನೂರು ತೆಳ್ಳನೂರು ಸುಂಡ್ರಳ್ಳಿ ಅಂಕಣಾಪುರ, ಕೆ.ಸೆ.ದೊಡ್ಡಿ, ರಾಚಾಪ್ಪಾಜಿ ನಗರ ಬಾಳಗುಣಸೆ ಗ್ರಾಮಗಳಲ್ಲಿ ಲೋ ವೋಲ್ಟೇಜ್ನಿಂದ ರೈತರ ಜಮೀನುಗಳಲ್ಲಿ ಫಸಲು ಒಣಗುತ್ತಿದೆ. ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದ ಶೋಚನೀಯ ಸ್ಥಿತಿಯಲ್ಲಿ ರೈತರು ಪರದಾಡುವಂತಾಗಿದೆ ಎಂದು ದೂರಿದರು.