ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾವಗಲ್: ಶ್ರೀ ಬನಶಂಕರಿ ದೇವಾಲಯ ಜೀರ್ಣೋದ್ಧಾರ

Srinivasa Murthy VN
Updated On : 28 May 2014, 11:49 am

ಜಾವಗಲ್: ಜಾವಗಲ್‌ನ ಇತಿಹಾಸ ಪ್ರಸಿದ್ಧ ಶ್ರೀ ಬನಶಂಕರಿ ಅಮ್ಮನವರ ದೇವಾಲಯ ಜೀರ್ಣೋದ್ಧಾರ ಕಾಮಗಾರಿ  ಭರದಿಂದ ನಡೆಯುತ್ತಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಸನ್ನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ವತಿಯಿಂದ 1 ಲಕ್ಷರು. ಚೆಕ್ ಅನ್ನು ಸಹಾಯ ಧನವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ  ಅರಸೀಕೆರೆ ತಾಲೂಕು ಯೋಜನಾಧಿಕಾರಿ ಚನ್ನಪ್ಪಗೌಡ ಜೀರ್ಣೋದ್ದಾರ ಸಮಿತಿ ಹಾಗೂ ದೇವಾಂಗ ಸಮಾಜದ ಅಧ್ಯಕ್ಷ ಜೆ.ಎಂ.ಶಿವಶಂಕರ್ ಅವರಿಗೆ ನೀಡಿದರು. ಮೇಲ್ವಿಚಾರಕ ಹಮೀದ್, ಗ್ರಾಪಂ ಸದಸ್ಯ ಕುಮಾರ್, ಸಮಾಜದ ಮುಖಂಡರಾದ ಜೆ.ಎನ್.ಕೃಷ್ಣಶೆಟ್ಟಿ, ಜೆ.ವಿ.ಬೆಟ್ಟಪ್ಪಶೆಟ್ಟಿ, ಜೆ.ಜಿ.ತಿಮ್ಮಪ್ಪ, ಜೆ.ಜಿ.ಧರ್ಮರಾಜು, ಜೆ.ಸಿ. ರಾಮಶೆಟ್ಟಿ, ಜೆ.ಜಿ.ಮಂಜುನಾಥ ಸಿದ್ದಪ್ಪಶೆಟ್ಟಿ ಸೇವಾಪ್ರತಿನಿಧಿ ಪುಷ್ಪ, ಕೆಂಚಪ್ಪ ಇತರರು ಇದ್ದರು.

ಸವಿತಾ ಸಮಾಜದ 5ನೇ ವಾರ್ಷಿಕೋತ್ಸವ
ಸಕಲೇಶಪುರ: ಸಂಘಟನೆಯಲ್ಲಿ ಸದೃಢರಾಗದಿದ್ದರೆ ಸಮಾಜದಲ್ಲಿ ತುಳಿತಕ್ಕೊಳಗ ಬೇಕಾಗುತ್ತದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು. ಮಂಗಳವಾರ ಪಟ್ಟಣದ ಲಯನ್ ಹಾಲ್‌ನಲ್ಲಿ ನಡೆದ ಸವಿತಾ ಸಮಾಜದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಸಮಾಜದಲ್ಲಿ ಸಣ್ಣ ಜನಾಂಗಗಳು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬಹುದಾಗಿದೆ ಎಂದು ಹೇಳಿದರು. ಯಾವುದೇ ಹಿಂದುಳಿದ ವರ್ಗ ಪ್ರಮುಖವಾಗಿ ವಿದ್ಯಾಬ್ಯಾಸಕ್ಕೆ ಉತ್ತೇಜನ ನೀಡುವುದನ್ನು ಮೊದಲ ಅದ್ಯತೆಯಾಗಿ ಪರಿಗಣಿಸಬೇಕು. ಒಂದು ಜನಾಂಗದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದಂತೆ ಆ ವರ್ಗದಲ್ಲಿನ ಕೀಳು ಮನೂಭಾವ ಮರೆಯಾಗಲಿದೆ ಎಂದರು. ಸವಿತಾ ಸಮಾಜದ ರಾಜ್ಯ ಗೌರವ ಅಧ್ಯಕ್ಷ ಪ್ರೊ. ನರಸಿಂಹಯ್ಯ,  ಪಳನಿ, ರಾಮಾಂಜನಪ್ಪ, ಕೃಷ್ಣಮೂರ್ತಿ, ಪುರಸಭೆ ಸದಸ್ಯೆ ರೇಖಾ, ದೇವರಾಜು, ಉಪಾಧ್ಯಕ್ಷ ಗಂಗಾದರ್, ಪದಾಧಿಕಾರಿಗಳು ಭಾಗವಹಿಸಿದ್ದರು.

ಕ್ರಿಕೆಟ್ ಬೆಟಿಂಗ್: ಮೂವರ ಬಂಧನ
ಹಾಸನ:  ನಗರದ ಹಳೇ ಮಟನ್ ಮಾರ್ಕೆಟ್‌ನ ಅಪ್ನಾ ಟೀ ಅಂಗಡಿ ಹತ್ತಿರ ಅಕ್ರಮವಾಗಿ ಐಪಿಎಲ್ ಟಿ 20 ಕ್ರಿಕೆಟ್ ಬೆಟ್ಟಿಂಗ್ ಕಟ್ಟಿ ಕೊಂಡು ಆಟವಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ವಲ್ಲಭಬಾಯಿ ರಸ್ತೆಯ ಮಹೇಶ್, ಅರಳೀಕಟ್ಟೆ ವೃತ್ತದ ವಿವೇಕ್, ಬಳೆಗಾರರ ಬೀದಿಯ ಶ್ರೇಯಸ್ ಬಂಧಿತರು. ಕ್ರಿಕೆಟ್ ಪಂದ್ಯವಾಡಲು ಪಣಕ್ಕಿಟ್ಟಿದ್ದ 3,100 ರು. ಅನ್ನು ವಶಪಡಿಸಿಕೊಂಡಿದ್ದಾರೆ. ಪೆನ್‌ಷನ್ ಮೊಹಲ್ಲಾ ಠಾಣೆಯ ಪಿಎಸ್‌ಐ ರೇವಣ್ಣ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement