ಜೂನ್ ಪಡಿತರ, ಸೀಮೆಎಣ್ಣೆ ಬಿಡುಗಡೆ
ಹಾಸನ: ಚನ್ನರಾಯಪಟ್ಟಣ ತಾಲೂಕಿನ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಜೂನ್ ಮಾಹೆಗೆ ಆಹಾರ ಪಡಿತರ ಮತ್ತು ಸೀಮೆಎಣ್ಣೆ ಹಂಚಿಕೆ ಮಾಡಿದೆ.
ಒಂದು ಯುನಿಟ್ ದಾರರಿಗೆ 9 ಕೆ.ಜಿ ಅಕ್ಕಿ, 1 ಕೆ.ಜಿ ರಾಗಿ., ಎರಡು ಯುನಿಟ್ ದಾರರಿಗೆ 19 ಕೆ.ಜಿ ಅಕ್ಕಿ, 1 ಕೆ.ಜಿ ರಾಗಿ. ಮೂರು, ನಾಲ್ಕು, ಐದು ಮತ್ತು ಹೆಚ್ಚಿನ ಯುನಿಟ್ ದಾರರಿಗೆ 28 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ. ಅಂತ್ಯೋಧಯ ಪಡಿತರ ಚೀಟಿದಾರರಿಗೆ 29 ಕೆ.ಜಿ ಅಕ್ಕಿ, 6 ಕೆ.ಜಿ ಗೋಧಿ. ಗ್ರಾಮಾಂತರ ಪಟ್ಟಣ ಎಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಹಂಚಿಕೆ ಇರುವುದಿಲ್ಲ.
ಬಿಪಿಎಲ್ ಎಎವೈ ಪಡಿತರ ಚೀಟಿದಾರರಿಗೆ ತಲಾ 1 ಕೆ.ಜಿ ಸಕ್ಕರೆಯಂತೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಅನಿಲ ರಹಿತ ಎಎವೈ, ಬಿಪಿಎಲ್ (ಗ್ಯಾಸ್ಹೋಂದಿಲ್ಲದ) ಪಡಿತರ ಚೀಟಿದಾರರಿಗೆ 1 ಮತ್ತು 2 ಯುನಿಟ್ ದಾರರಿಗೆ 3 ಲೀಟರ್ ಸೀಮೆಎಣ್ಣೆಯಂತೆ, ಹಾಗೂ 3, 4, 5 ಮತ್ತು ಹೆಚ್ಚಿನ ಯುನಿಟ್ ದಾರರಿಗೆ 5 ಲೀಟರ್ ಸೀಮೆಎಣ್ಣೆಯಂತೆ, ಗ್ಯಾಸ್ ಹೊಂದಿರುವ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಹಂಚಿಕೆ ಇರುವುದಿಲ್ಲ.
ಆಹಾರ ಪಡಿತರ ಮತ್ತು ಸೀಮೆಎಣ್ಣೆ ಪ್ರಮಾಣ ಹಾಗೂ ದರದ ವಿವರ ಇಂತಿದೆ. ಬಿಪಿಎಲ್ ಪಡಿತರ ಅಕ್ಕಿ 1 ಕೆ.ಜಿ.ಗೆ 1 ರು, ರಾಗಿ 1 ಕೆ.ಜಿ.ಗೆ 1ರು. ಅಂತ್ಯೋದಯ ಪಡಿತರ ಅಕ್ಕಿ 1 ಕೆ.ಜಿ.ಗೆ 1ರು., ಗೋಧಿ 1ಕೆ.ಜಿ.ಗೆ 1 ರು., ಸೀಮೆಎಣ್ಣೆ 1 ಲೀಟರ್ಗೆ 17.50 ರು., ಸಕ್ಕರೆ 1 ಕೆ.ಜಿಗೆ 13.50 ರು.ನಂತೆ ದರ ನಿಗದಿಗೊಳಿಸಲಾಗಿದೆ.