ವ್ಯಕ್ತಿ ಅನುಮಾನಾಸ್ಪದ ಸಾವು
ಹಾಸನ: ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಹಾಸನದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಶ್ರೀನಗರದ ವಾಸವಿರುವ ಶಾಂತಮ್ಮ ಎಂಬುವರ ಪುತ್ರ ಮಂಜುನಾಥ್(26) ಮೃತನು. ಈತನ 2 ಕಾಲುಗಳು ತುಂಡಾಗಿದ್ದು, ಒಂದು ಕಾಲನ್ನು ನಾಯಿಗಳು ತಿಂದುಹಾಕಿವೆ. ದೇಹಕ್ಕೆ ಯಾವುದೇ ಗಾಯಗಳಾಗಿಲ್ಲ. ಮಂಜುನಾಥ್‌ನನ್ನು ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗ್ತಿದೆ. ತನ್ನ ತಂಗಿಯ ಬಳಿಯಿಂದ 1,500 ರು. ಪಡೆದು ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ರಾತ್ರಿ 10 ಗಂಟೆಯಲ್ಲಿ ಮನೆಯಿಂದ ತೆರಳಿದ್ದಾನೆ. ಬುಧವಾರ ಬೆಳಗ್ಗೆ ಆತ ಸಾವೀಗೀಡಾದ ಸುದ್ದಿ ತಿಳಿಯುತ್ತಿದ್ದಂತೆಯೇ ಮನೆಯವರ ರೋದನೆ ಮುಗಿಲು ಮುಟ್ಟಿತ್ತು. ಮಂಜುನಾಥ ಪೈಂಟರ್ ಕೆಲಸ ಮಾಡುತ್ತಿದ್ದನು. ಹಿಂದೆ ಹಾಸನದ ರಘು ಎಂಬಾತನೊಂದಿಗೆ ಜಗಳವಾಡಿಕೊಂಡಿದ್ದ. ಅದಾದ ಬಳಿಕ ಆತನೊಂದಿಗೆ ಹೆಚ್ಚಾಗಿ ಸೇರುತ್ತಿರಲಿಲ್ಲ. ರಾತ್ರಿ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಈಗ ಹೆಣವಾಗಿದ್ದಾನೆ. ಸ್ನೇಹಿತರೇ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ತನಿಖೆ ಕೈಗೊಂಡಿದ್ದಾರೆ.
ನೆಹರು ಪುಣ್ಯತಿಥಿ ಆಚರಣೆ
ಹಾಸನ: ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ 49ನೇ ಪುಣ್ಯತಿಥಿಯನ್ನು ನಗರದ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು. ನೆಹರು ಭಾವಚಿತ್ರಕ್ಕೆ ಪುಷ್ಪಅರ್ಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ. ಶಿವರಾಮ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ತರಲು ಪಂಡಿತ್ ಜವಾಹರ್‌ಲಾಲ್ ನೆಹರು ಶ್ರಮಿಸಿದ್ದಾರೆ. 17 ವರ್ಷ ಪ್ರಧಾನಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ನಾರಾಯಣಗೌಡ, ಕಾರ್ಮಿಕ ಘಟಕದ ಅಧ್ಯಕ್ಷ ಸನ್ನಿ ಆಂಡ್ರೋಸ್, ಮುಖಂಡರಾದ ರೇವಣ್ಣ, ಮಹಂತೇಶ್, ಅಂದಾನಿಗೌಡ, ಬಾಲಶಂಕರ್, ಬಸವರಾಜ್ ಇತರರು ಪಾಲ್ಗೊಂಡಿದ್ದರು.
ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ
ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕು ದೊಡ್ಡಕುಂಚೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ ತರೆವಾಗಿದ್ದು, ಭರ್ತಿ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಮಾಸಿಕ 5,500 ರು. ಗೌರವ ಸಂಭಾವನೆ ಆಧಾರದ ಮೇಲೆ ನೇಮಿಸಲು ದೊಡ್ಡಕುಂಚೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರವರ್ಗ-3ಬಿ, ಸ್ಥಳೀಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. 3ಬಿ ವರ್ಗದವರಿಗೆ 18 ರಿಂದ 38 ವರ್ಷ ವಯೋವುತಿ ಇದೆ, ಅಭ್ಯರ್ಥಿಎಸ್ಸೆಸ್ಸೆಲ್ಸಿ ಪಾಸಾಗಿರಬೇಕು, ಮುಂದುವರಿಕಾ ಕಲಿಕಾ ಕೇಂದ್ರಗಳಲ್ಲಿ ಪ್ರೇರಕ, ಉಪಪ್ರೇರಕರಾಗಿ ಕೆಲಸ ನಿರ್ವಹಿಸುವವರಿಗೆ ಮೊದಲ ಆದ್ಯತೆ ಜೂ.9 ರೊಳಗೆ ಅರ್ಜಿ ಸಲ್ಲಿಸಬೇಕು