ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರವಾಸಿಗರ ವಾಹನಕ್ಕೆ ಶುಲ್ಕ: ಪ್ರತಿಭಟನೆ

Srinivasa Murthy VN
Updated On : 31 May 2014, 11:59 am

ಹಳೇಬೀಡು: ಇಲ್ಲಿನ ಹೊಯ್ಸಳೇಶ್ವರ ದೇವಾಲಯಕ್ಕೆ ಬರುವ ಪ್ರವಾಸಿಗರ ವಾಹನಗಳಿಗೆ ಗ್ರಾಮ ಪಂಚಾಯಿತಿ ವಿಧಿಸುವ ಶುಲ್ಕವನ್ನು ರದ್ದು ಮಾಡಬೇಕು. ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಹರಾಜು ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೂರು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆದರೂ ಹರಾಜು ಪ್ರಕ್ರಿಯೆ ನಡೆಯಿತು. ಹಳೇಬೀಡು ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ವಿಸ್ತಾರವಾಗಿದೆ. ಸರ್ಕಾರದ ಅನುದಾನದಿಂದ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಆದಾಯದ ಮೂಲಗಳಾದ ಕಾರ್ ಪಾರ್ಕಿಂಗ್ ಹಾಗೂ ಸಂತೆ ಶುಲ್ಕ ವಸೂಲಿಯಿಂದ ಸಮಸ್ಯೆಗಳನ್ನು ಸರಿದೂಗಿಸಲಾಗುತ್ತಿದೆ. ಹೀಗಾಗಿ ಹರಾಜು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಸರ್ವ ಸದಸ್ಯರ ಒಪ್ಪಿಗೆಯಂತೆ ಹರಾಜು ನಡೆಸುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ತಿಳಿಸಿದರು.
ಪಾರ್ಕಿಂಗ್ ಜಾಗ ಗ್ರಾಮ ಪಂಚಾಯಿತಿಗೆ ಸೇರಿರುವುದಕ್ಕೆ ದಾಖಲೆ ತೋರಿಸಿ, ಪಾರ್ಕಿಂಗ್ ಸ್ಥಳದ ನೀಲ ನಕ್ಷೆ  ಹೊಂದಿದ್ದಿರಾ ಎಂದು ಕರವೇ ಸದಸ್ಯರು ಪ್ರಶ್ನಿಸಿದರು. ಪಾರ್ಕಿಂಗ್ ಗುತ್ತಿಗೆದಾರರು ಪ್ರವಾಸಿಗರಿಂದ ಹಣ ಸುಲಿಗೆ ಮಾಡುತ್ತಾರೆ. ಪ್ರಶ್ನಿಸುವ ಪ್ರವಾಸಿಗರೊಂದಿಗೆ ಕೈ ಮಿಲಾಯಿಸುತ್ತಾರೆ. ಇದರಿಂದ ದೇಶದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಆದ್ದರಿಂದ ಹರಾಜು ಮಾಡಲು ಬಿಡುವುದಿಲ್ಲ ಎಂದು ಕರವೇ ಸದಸ್ಯರು ಪಟ್ಟುಹಿಡಿದರು.
ವರ್ಷಕ್ಕೆ  ರು. 6ಲಕ್ಷ ವನ್ನು ನೌಕರರಿಗೆ ವೇತನ ರೂಪದಲ್ಲಿ ನೀಡಬೇಕು. ಬರಗಾಲದಲ್ಲಿ ಕುಡಿಯುವ ನೀರಿನ ಬಾವಿಗಳು ಒಣಗಿದಾಗ 12 ಸ್ಥಳದಲ್ಲಿ ಸಿಂಗಲ್ ಫೇಸ್ ಮೋಟಾರ್ ಅಳವಡಿಸಲಾಯಿತು. ಸ್ವಚ್ಛ, ಬೀದಿ ದೀಪ ನಿರ್ವಹಣೆಗೂ ಲಕ್ಷಾಂತರ ರೂಪಾಯಿ ಖಚುಂ ಬರುತ್ತದೆ. ಅದನ್ನೆಲ್ಲ ನೀವೇ ನಿಬಾಯಿಸಿ. ನಾವೆಲ್ಲರೂ ರಾಜೀನಾಮೆ ಕೊಡುತ್ತೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಸವಾಲು ಹಾಕಿದರು. ಮಾತಿನ ಚಕಮಕಿ ಮುಂದುವರಿದು ತಹಶೀಲ್ದಾರರಿಗೆ ಕರೆ ಮಾಡಿ ದೂರು ನೀಡಲಾಯಿತು. ಸಮಸ್ಯೆ ಇತ್ಯರ್ಥದ ನಂತರ ಹರಾಜು ಮುಂದುವರಿಸಿ ಎಂದು ತಹಸೀಲ್ದಾರ್ ತಿಳಿಸಿದರು.
ನಿಲ್ಲಿಸುವ ಪ್ರಶ್ನೆಯೇ ಇಲ್ಲ ಹರಾಜು ಪ್ರಕ್ರಿಯೆ ಮುಂದುವರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement