ಪ್ರವೇಶ ಪ್ರಕ್ರಿಯೆ ಪ್ರಾರಂಭ
ಹಾಸನ: ಚನ್ನರಾಯಪಟ್ಟಣ ತಾಲೂಕು ಬಾಗೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2014-15 ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು ಎಲೆಕ್ಕ್ರಿಷಿಯನ್-21 ಫಿಟ್ಟರ್-21(ಎನ್.ಸಿ.ವಿ.ಟಿ)ಮತ್ತುಎಲೆಕ್ಟ್ರಾನಿಕ್ ಮೆಕ್ಯಾನಿಕ್-21 ಎಂ.ಆರ್.ಎ.ಸಿ-21(ಎಸ್.ಸಿ.ವಿ.ಟಿ) ಸೀಟುಗಳಿದ್ದು 10ನೇ ತರಗತಿ ಪಾಸಾದ ಆಭ್ಯರ್ಥಿಗಳು ಜೂನ್ 5 ರೊಳಗೆ ಆನ್ ಲೈನ್ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬಾಗೂರು, ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ, ದೂ. 08176-251121 ಸಂಪರ್ಕಿಸಬಹುದು
ಐಟಿಐಗೆ ಅರ್ಜಿ ಆಹ್ವಾನ
ಹಾಸನ: ಚನ್ನರಾಯಪಟ್ಟಣ ತಾಲೂಕು ಉದಯಪುರದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಫಿಟ್ಟರ್, ಎಮ್ಆರ್ಎಸಿ ಮುಂತಾದ ವೃತ್ತಿಗಳ ತರಬೇತಿಗಾಗಿ ಎಸ್ಸೆಸ್ಸೆಲ್ಸಿ , ಪಿಯುಸಿ ಉತ್ತೀರ್ಣರಾದವರಿಂದ ಅರ್ಜಿಅಹ್ವಾನಿಸಲಾಗಿದೆ. ಪ್ರವೇಶ ಬಯಸುವವರು ಜೂ. 5ರೊಳಗಾಗಿ ಆನ್ ಲೈನ್ (www.emptrg.kar.nic.in) ಮೂಲಕ ಅರ್ಜಿ ಸಲ್ಲಿಸುವಂತೆ ಪ್ರಾಚಾರ್ಯರು ಕೋರಿದ್ದಾರೆ.
ಅರ್ಜಿ ಆಹ್ವಾನ
ಹಾಸನ: ಹೊಳೆನರಸೀಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶಕ್ಕೆ ಓ - ಐಓಇ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜೂನ್ 5 ಕಡೇ ದಿನ. ಹೆಚ್ಚಿನ ಮಾಹಿತಿಗೆ ದೂ. 08175-273406 ಸಂಪರ್ಕಿಸಬಹುದಾಗಿದೆ.
ಬಾಳೆಹಣ್ಣು ಮಾರಾಟಗಾರರ ಸಂಘದ ಪದಾಧಿಕಾರಿಗಳ ಆಯ್ಕೆ
ಹಾಸನ: ಕಟ್ಟಿನಕೆರೆ ಮಾರುಕಟ್ಟೆ ಬಾಳೆಹಣ್ಣು ಮಾರಾಟಗಾರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರನ್ನಾಗಿ ಸಮೀರ್ ಅಹಮ್ಮದ್ ಅವರನ್ನು ಸರ್ವಾನುಮತದಿಂದ ಪುನರ್ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ ಕರೀಂ(ಪಾಪು) ಮತ್ತು ಸೈಯದ್ ತೌಸೀಫ್, ಕಾರ್ಯದರ್ಶಿಯಾಗಿ ಫೈರೋಜ್ ಅಹಮದ್, ಖಜಾಂಚಿ ಕೆ. ಅನಂತರಾಮು, ಸಹ ಕಾರ್ಯದರ್ಶಿ ಮಹಮದ್ ಜಾಫರ್, ಸಂಘಟನಾ ಕಾರ್ಯದರ್ಶಿ ಎಚ್. ಆರ್. ಹರೀಶ್, ಸಂಚಾಲಕ ಎನ್. ಲಕ್ಷ್ಮಣ್ ನಿರ್ದೇಶಕರನ್ನಾಗಿ ನದೀಂ ವುಲ್ಲಾ, ಅಸ್ಲಂಪಾಷ, ಸೈಯದ್ ಶಬ್ಬೀರ್ ಅರವರನ್ನು ಆಯ್ಕೆ ಮಾಡಲಾಗಿದೆ.
'ಹಸಿರಲೆ ಗೊಬ್ಬರಬಳಕೆಯಿಂದ ಭೂಮಿ ಫಲವತ್ತತೆ ಹೆಚ್ಚಳ'
ರಾಮನಾಥಪುರ: ಹಸಿರೆಲೆ ಗೊಬ್ಬರವನ್ನು ರೈತರು ಬಳಸುವುದರಿಂದ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗಿ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಎಂದು ಕೃಷಿ ಕ್ಷೇತ್ರಾಧಿಕಾರಿ ವಿ. ರಮೇಶ್ ತಿಳಿಸಿದರು. ರಾಮನಾಥಪುರ ಹತ್ತಿರವಿರುವ ಅಗ್ರಹಾರ ಗ್ರಾಮದಲ್ಲಿ ಕೃಷಿ ಇಲಾಖೆಯ ಸಾವಯವ ಭಾಗ್ಯ ಯೋಜನೆಯಲ್ಲಿ ಶ್ರೀ ಅಂಜನೇಯಸ್ವಾಮಿ ಸಾವಯವ ಕೃಷಿ ಸಮಿತಿ ಮತ್ತು ಅರ್ರ್ಡರ್ ಸಂಸ್ಥೆಯ ಸಹಯೋಗದೊಂದಿಗೆ ಅಗ್ರಹಾರ ಗ್ರಾಮದ ರೈತರಿಗೆ ಹಸಿರೆಲೆ ಗೊಬ್ಬರದ ಬೀಜಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಮಿಯ ಆರೋಗ್ಯ ಕಾಪಾಡಲು ಹಸಿರೆಲೆ ಗೊಬ್ಬರ ಬಳಕೆ ತುಂಬಾ ಉತ್ತಮ ವಿಧಾನವಾಗಿದೆ ಎಂದು ತಿಳಿಸಿದರು. ಕೃಷಿ ಕ್ಷೇತ್ರಾಧಿಕಾರಿ ಹರೀಶ್ಕುಮಾರ್, ಹಸಿರೆಲೆ ಗೊಬ್ಬರ ತಯಾರು ಮಾಡಿಕೊಳ್ಳುವ ವಿಧಾನಗಳ ಬಗ್ಗೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಪ್ರಕಾಶ್, ಸಾವಯವ ಕೃಷಿ ಸಮಿತಿ ಕಾರ್ಯದರ್ಶಿ ಹನುಮಬೋಯಿ, ಕ್ಷೇತ್ರ ಸಹಾಯಕ ಅನಂದ್ ಇತರರು ಇದ್ದರು.
ಕನ್ನಡ ಭಾಷೆಯಪುನರುತ್ಥಾನಕ್ಕೆ ಸಂಪರ್ಕ ಕೊಂಡಿ ಡಾ. ಬೆಟಗೇರಿ
ಅರಸೀಕೆರೆ: ಕನ್ನಡ ಸಾಹಿತ್ಯ ಮತ್ತು ಪರಂಪರೆಗೆ ತಮ್ಮದೇ ಕೊಡುಗೆ ನೀಡುವುದರ ಮೂಲಕ ಸಾಹಿತಿ ಡಾ. ಬೆಟಗೇರಿ ಕೃಷ್ಣಶರ್ಮ, ಕನ್ನಡ ಭಾಷೆಯ ಪುನರುತ್ಥಾನಕ್ಕೆ ಅನನ್ಯವಾದ ಸಂಪರ್ಕದ ಕೊಂಡಿಯಾಗಿದ್ದಾರೆ ಎಂದು ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ನ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ್ ಹೇಳಿದರು. ಪಟ್ಟಣದ ರೋಟರಿ ಶಾಲೆಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರ ಸುರಭಿ ಟ್ರಸ್ ಮತ್ತು ಮಹತಿ ಗ್ರಾಮಿಣ ವಿಕಾಸ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬನ್ನಿ ನಮ್ಮ ಹಾಡಿಗೆ ಕಾರ್ಯಕ್ರಮದ ಶಾಲಾ ಮಕ್ಕಳಿಗೆ ಗಾಯನ ಅಭ್ಯಾಸ ಶಿಬಿರದಲ್ಲಿ ಶುಕ್ರವಾರ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಆನಂದ ಕಂದ ಎಂಬ ನಾಮದಲ್ಲಿ ಅನೇಕ ಸಾಹಿತ್ಯ, ಕಾವ್ಯ ಕಾದಂಬರಿ, ನಾಟಕ, ಆತ್ಮ ಚರಿತ್ರೆ, ವಿಮರ್ಶೆ- ಸಂಶೋಧನೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು. ಬೆಳಗಾವಿಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಕರ್ನಾಟಕ ಸರ್ಕಾರ ಡಾ. ಬೆಟಗೇರಿ ಕೃಷ್ಣಶರ್ಮ ಅವರ ಹೆಸರಿನಲ್ಲಿ ಸ್ಮಾರಕ ಟ್ರಸ್ಟ್ ಆರಂಭಿಸಿ ಇಂದಿನ ಯುವ ಪೀಳಿಗೆಗೆ ಅವರ ಚಿಂತನೆ ಮತ್ತು ಸಾಹಿತ್ಯಗಳನ್ನು ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಶ್ಲಾಘಿಸಿದರು. ಸ್ವರ ಸುರಭಿ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಅಯ್ಯರ್, ಗಾಯಕ ಮೃತ್ಯುಂಜಯ ದೊಡ್ಡವಾಡ್, ಮಹತಿ ಗ್ರಾಮೀಣ ವಿಕಾಸ ಟ್ರಸ್ಟ್ ಕಾರ್ಯದರ್ಶಿ ಎಸ್.ಎನ್. ಮಮತಾರಾಣಿ, ಬೆಳ್ಳಿ ಮಂಡಲ ಜಿಲ್ಲಾ ಅಧ್ಯಕ್ಷ ಜಾವಗಲ್ ವಸಂತ ಇದ್ದರು.