ಇಂದಿನಿಂದ ವಿವಿಧ ಧಾರ್ಮಿಕ ಆಚರಣೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 1
ವಿಶ್ವಗುರು ಬಸವೇಶ್ವರರ ಜಯಂತಿ ಆಚರಣೆಯ ಶತಮಾನೋತ್ಸವ ಹಾಗೂ ಜಗನ್ಮಾತೆ ಅಕ್ಕಮಹಾದೇವಿ ಜಯಂತಿ ಆಚರಣೆಯ ವಜ್ರಮಹೋತ್ಸವ ನಿಮಿತ್ತ ಏ. 2ರಿಂದ 6ರ ವರೆಗೆ ನಗರದ ಎಸ್‌ಜೆಎಂ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ಆಚರಣೆ ಕಾರ್ಯಕ್ರಮಗಳನ್ನು ನಡೆಸಲು ತಿರ್ಮಾನಿಸಿರುವುದಾಗಿ ತಾಲೂಕು ಶರಣ ಸಂಸ್ಕೃತಿ ಉತ್ಸವ ಹಾಗೂ ಅಕ್ಕನ ಬಳಗದ ಅಧ್ಯಕ್ಷೆ ಸುವರ್ಣದೇವಿ ಪಾಟೀಲ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಹಾಗೂ ಬಸವೇಶ್ವರರ ಜಯಂತ್ಯುತ್ಸವ ಆಚರಣೆಯ ಶತಮಾನೋತ್ಸವ ಸವಿನೆನಪಿಗಾಗಿ, ತಾಲೂಕಿನ ಎಲ್ಲಾ ಜಾತಿ ಜನಾಂಗದ ಶರಣ ಬಂಧುಗಳ ಸಹಕಾರದಿಂದ ಏ. 2ರಿಂದ 5ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಏ. 6ರಂದು ಮುಕ್ತಾಯ ಕಾರ್ಯಕ್ರಮ ನಡೆಸಲು ತಿರ್ಮಾನಿಸಲಾಗಿದೆ.
ಏ. 6ರಂದು ನಡೆಯಲಿರುವ ಮುಕ್ತಾಯ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಶಿವಮೂರ್ತಿ ಮುರುಘಾಶರಣರು, ಲಿಂಗನಾಯಕನಹಳ್ಳಿಯ ಶಾಂತಲಿಂಗ ಶ್ರೀಗಳು ಆಗಮಿಸುವರು.
ವಾಸುದೇವ ಲದ್ವಾ ಕಾರ್ಯಕ್ರಮ ಉದ್ಘಾಟಿಸುವರು. ನಂಜನಗೂಡಿನ ಸಾಹಿತಿ ಕಾ.ಸು. ನಂಜಪ್ಪ, ಪೌರಾಯುಕ್ತ ಕರಭೀಮಣ್ಣನವರ, ಬೈಲಹೂಂಗಲದ ಪ್ರೇಮಕ್ಕ ಅಂಗಡಿ ಆಗಮಿಸುವರು ಎಂದು ತಿಳಿಸಿದರು.